ಸಿದ್ಧಗಂಗಾ ಮಠ ಅನ್ನ ದಾಸೋಹಕ್ಕೆ ಫಿಲ್ಮ್ ಚೇಂಬರ್ ನೆರವು

Published : Feb 12, 2019, 07:19 PM IST
ಸಿದ್ಧಗಂಗಾ ಮಠ ಅನ್ನ ದಾಸೋಹಕ್ಕೆ ಫಿಲ್ಮ್ ಚೇಂಬರ್ ನೆರವು

ಸಾರಾಂಶ

ಸಿದ್ಧಗಂಗಾ ಮಠ ಅನ್ನದಾಸೋಹಕ್ಕೆ ನೆರವಾದ ಫಿಲ್ಮ್ ಚೇಂಬರ್ | ಅನ್ನದಾಸೋಹಕ್ಕೆ 5 ಲಕ್ಷ ರೂ ದೇಣಿಗೆ ನೀಡಿದ ಫಿಲ್ಮ್ ಚೇಂಬರ್ | 

ತುಮಕೂರು (ಫೆ. 12): ಸಿದ್ಧಗಂಗಾ ಮಠ ತ್ರಿವಿಧ ದಾಸೋಹಕ್ಕೆ ಹೆಸರುವಾಸಿ. ಯಾವುದೇ ಭೇದ-ಭಾವವಿಲ್ಲದೇ ಬಂದಂತಹ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯವನ್ನು ನೀಡುತ್ತಿದೆ. ತ್ರಿವಿಧ ದಾಸೋಹಿ, ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಆದರೆ ಅವರು ಮಾಡುತ್ತಿದ್ದ ಸಮಾಜಕಾರ್ಯ ಮುಂದುವರೆಯುತ್ತಿದೆ. ಸಾಕಷ್ಟು ಮಂದಿ ನೆರವು ನೀಡುತ್ತಿದ್ದಾರೆ. 

ಇದೀಗ ಫಿಲ್ಮ್ ಚೇಂಬರ್ ಕೂಡಾ ಅನ್ನದಾಸೋಹಕ್ಕೆ ನೆರವು ನೀಡಿದೆ. ಸಿದ್ಧಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದು ಅನ್ನದಾಸೋಹಕ್ಕೆ 5 ಲಕ್ಷ ರೂ ದೇಣಿಗೆ ನೀಡಿದ್ದಾರೆ. 

ಈ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಚೇಂಬರ್ ನ ಪದಾಧಿಕಾರಿಗಳಾದ ಕೆ.ಎಂ.ವೀರೇಶ್, ಭಾಮಾ ಹರೀಶ್, ಕರಿಸುಬ್ಬು, ಕೆ.ವಿ.ಚಂದ್ರಶೇಖರ್, ಜಯರಾಜ್, ಎನ್.ಎಂ.ಸುರೇಶ್ ಉಪಸ್ಥಿತರಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Vishwanath and Sons Review: ಸೂರ್ಯ ಅಭಿನಯಕ್ಕೆ ಫಿದಾ, ಆದರೆ ಸಿನಿಮಾ ಎಲ್ಲೆಲ್ಲಿ ಎಡವಿದೆ?
‘ಯೂ ಟರ್ನ್‌’ ಮೂಲಕ ಸದ್ದು ಮಾಡಿದ್ದ ಶ್ರದ್ಧಾ ಶ್ರೀನಾಥ್‌ಗೆ ಈಗ ಅವಕಾಶಗಳ ಕೊರತೆ: ಕಾರಣವೇನು?