
Yash Toxic Release Date-Rocking Star Yash-Toxic Movie Countdown 07: ಯಶ್ ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್‌ಡೌನ್ 07.
ಕನ್ನಡಿಗ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಹವಾ ಇಡೀ ಜಗತ್ತನ್ನೇ ಆವರಿಸಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್‌ಡೌನ್ ಚಾಲನೆಯಲ್ಲಿದೆ. ಇನ್ನೇನು ಕೇವಲ 07 ದಿನಗಳಷ್ಟೇ ಬಾಕಿ ಇದೆ. ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿಮಾ ಪ್ರೇಮಿಗಳಿಗೆ ಟಾಕ್ಸಿಕ್ ಬಿಡುಗಡೆಯನ್ನು ಒಂದು ರಾಷ್ಟ್ರೀಯ ಹಬ್ಬದಂತೆ ಆಚರಿಸಲಿದ್ದಾರೆ. ಟಾಕ್ಸಿಕ್ ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನು 07 ದಿನಗಳಷ್ಟೇ ಬಾಕಿ ಇದ್ದು, ಪರದೆಯಲ್ಲಿ ಈ ಸಿನಿಮಾ ಕಣ್ತುಂಬಿಕೊಳ್ಳಲು ಕನ್ನಡಿಗರು ಸೇರಿದಂತೆ ಜಗತ್ತಿನಾದ್ಯಂತ ಸಿನಿರಸಿಕರು ಹಗಲಿರುಳೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಆದರೆ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಕೂಡ ಡಬ್ ಆಗಿ ಬಿಡುಗಡೆ ಕಾಣಲಿದೆ. ಹಾಲಿವುಡ್ ಸೇರಿದಂತೆ, ಜಗತ್ತಿನ ಖ್ಯಾತ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಮೂಡಿ ಬಂದಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಈ ಮೂಲಕ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ ಹಾಲಿವುಡ್ ಸಿನಿಮಾದಂತೆ ರಿಲೀಸ್ ಆಗಲಿದೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ಜಗತ್ತಿನಾದ್ಯಂತ ಮೆರೆದಾಡಲಿದೆ. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿ ಎಂದು ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಹಾಗೂ ಸಿನಿಮಾ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್‌ನರ್‌ಶಿಪ್ ನಿರ್ಮಾಣದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಕೂಡ ಈ ಬಜೆಟ್‌ನಲ್ಲಿ ಸೇರಿಕೊಂಡಿದೆ. ಈಗಾಗಲೇ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಸೃಷ್ಟಿಯಾಗಿದ್ದು, ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಸಿನಿಮಾ ಬಾಕ್ಸ್ ಆಫೀಸ್ ಪಂಡಿತರ ಹೇಳುತ್ತಿದ್ದಾರೆ. ನಟ ಯಶ್ ಅವರು ತಮ್ಮ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಬರೋಬ್ಬರಿ 4.5 ವರ್ಷಗಳಷ್ಟಿ ಸಮಯವನ್ನು ಮೀಸಲಾಗಿಟ್ಟು, ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಮೂಲಕ 'ಪ್ಯಾನ್ ವರ್ಲ್ಡ್' ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇನ್ನೇನು ಟಾಕ್ಸಿಕ್ ಕೇವಲ 07 ದಿನಗಳ ಬಳಿಕ ತೆರೆಯ ಮೇಲೆ ರಾರಾಜಿಸಲಿದೆ. ಹಾಗೇ, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಅಂದರೆ 08 ನವೆಂಬರ್ 2026ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ.
ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 09 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಬಹಳಷ್ಟು ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್‌ಡೌನ್ ಚಾಲ್ತಿಯಲ್ಲಿದೆ. ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ 'ಆಪ್ ಕಿ ಅದಾಲತ್'ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 07ರ ಕೌಂಟ್‌ಡೌನ್‌ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 06. ಪ್ರತಿದಿನದ ಅಪ್‌ಡೇಟ್‌ಗಾಗಿ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.