ಟಾಕ್ಸಿಕ್ ಬಿಡುಗಡೆ 7 ದಿನ ಬಾಕಿ ಇರುವಾಗಲೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ಅಮೆರಿಕದಲ್ಲಿ ಯಶ್ ಹೊಸ ದಾಖಲೆ

Published : Aug 18, 2026, 07:17 PM IST
Toxic Star Cast Fees

ಸಾರಾಂಶ

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿ. ಅಷ್ಟರಲ್ಲೇ ಅಮೆರಿಕದಲ್ಲಿ ರಾಕಿ ಬಾಯ್ ಹೊಸ ದಾಖಲೆ ನಿರ್ಮಾಣ ಮಾಡಿದ್ದರೆ, ಅಡ್ವಾನ್ಸ್ ಬುಕಿಂಗ್‌ನಲ್ಲಿ ಯಶ್ ಟಾಕ್ಸಿಕ್ ಸಿನಿಮಾ ಬರೆದ ದಾಖಲೆ ಏನು?

ಬೆಂಗಳೂರು (ಆ.18) ಕನ್ನಡಿಗರು ಮಾತ್ರವಲ್ಲ ದೇಶ ವಿದೇಶಗಳ ಪ್ರೇಕ್ಷಕರು ಇದೀಗ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಆಗಸ್ಟ್ 26ರಂದು ಟಾಕ್ಸಿಕ್ ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಬಿಡುಗಡೆ ಕೆಲವೇ ದಿನಗಳ ಮೊದಲೇ ಯಾಕ್ಸಿಕ್ ಅಮೆರಿಕದಲ್ಲಿ ಹೊಸ ದಾಖಲೆ ಬರೆದಿದೆ. ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಸಿನಿಮಾ ಮಾರ್ಕೆಟ್‌ನಲ್ಲಿ ಟಾಕ್ಸಿಕ್ ಹೊಸ ದಾಖಲೆ ಬರೆದಿದೆ. ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಇದೀಗ ಗ್ಲೋಬಲ್ ಸ್ಟಾರ್ ಆಗಿ ಮಿಂಚಿದ್ದಾರೆ.

ಅಮೆರಿಕದಲ್ಲಿ $120,000 ದಾಟಿದ ಅಡ್ವಾನ್ಸ್ ಬುಕಿಂಗ್

ಟಾಕ್ಸಿಕ್ ಸಿನಿಮಾ ಇದೀಗ ಅಮೆರಿಕದಲ್ಲಿ ಸಿನಿಮಾ ಮಾರ್ಕೆಟ್ ಆಕ್ರಮಿಸಿಕೊಂಡಿದೆ. ಬಿಡುಗಡೆಗೂ ಮೊದಲೇ ಅಡ್ವಾನ್ಸ್ ಬುಕಿಂಗ್ $120,000 ಡಾಲರ್ (1 ಕೋಟಿ ರೂಪಾಯಿಗೂ ಅಧಿಕ) ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೂ ಇನ್ನೂ ಒಂದು ವಾರ ಬಾಕಿ ಇರುವಂತೆ ಭಾರಿ ಬುಕಿಂಗ್ ಪಡೆದುಕೊಂಡಿದೆ. ಈ ಮೂಲಕ ಯಶ್ ಅಂತಾರಾಷ್ಟ್ರೀಯ ಸಿನಿಮಾ ಮಾರುಕಟ್ಟೆಯಲ್ಲೂ ಭಾರಿ ಕ್ರೇಜ್ ಹುಟ್ಟು ಹಾಕಿದ್ದಾರೆ.

ಅಮೆರಿಕದಲ್ಲಿ ಮಂಗಡ ಬುಕಿಂಗ್‌ನಲ್ಲಿ ದಾಖಲೆ ಬರೆದ ಯಶ್ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲೂ ಭರ್ಜರಿ ಬೇಡಿಕೆ ವ್ಯಕ್ತವಾಗುತ್ತಿದೆ. ವಿದೇಶಿ ಸಿನಿ ಪ್ರೇಕ್ಷಕರು ಟಾಕ್ಸಿಕ್ ಸಿನಿಮಾಗೆ ಕಾಯುತ್ತಿದ್ದಾರೆ. ವಿದೇಶಗಳಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತ್ವರಿತವಾಗಿ ಟಿಕೆಟ್‌ಕಳು ಬುಕಿಂಗ್ ಆಗುತ್ತಿದೆ. ವಿಶ್ವದೆಲ್ಲೆಡೆ ನೆಲೆಸಿರುವ ಭಾರತೀಯರು ಯಶ್ ಟಾಕ್ಸಿಕ್ ಸಿನಿಮಾಗೆ ಕಾಯುತ್ತಿದ್ದಾರೆ. ಕೆಜಿಎಫ್ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿರುವ ಯಶ್ ಇದೀಗ ಟಾಕ್ಸಿಕ್ ಮೂಲಕ ಗ್ಲೋಬಲ್ ಸ್ಟಾರ್ ಆಗುವತ್ತ ಹೊರಟಿದ್ದಾರೆ.

ಟಾಕ್ಸಿಕ್ ಸಿನಿಮಾ ಕುರಿತ ಕುತೂಹಲ ಹೆಚ್ಚಾಗುತ್ತಿದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿದೆ. ಟೀಸರ್, ಟ್ರೇಲರ್ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಏಕಾಕಲಕ್ಕೆ ಸಿನಿಮಾ ಚಿತ್ರೀಕರಣಗೊಂಡಿದೆ. ಇನ್ನು ಹಿಂದಿ, ತಮಿಳು, ತೆಲುಗು ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಕುರೇಷಿ ಸೇರಿದಂತೆ ಅತೀ ದೊಡ್ಡ ಸ್ಟಾರ್ ಬಳಗವಿದೆ. ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲು ಟಾಕ್ಸಿಕ್ ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದ 'ಟಾಕ್ಸಿಕ್ ಪ್ಯಾನ್ ಗ್ಲೋಬಲ್ ಸ್ಟಾರ್ ಮಾಡುವುದರಲ್ಲಿ ಅನುಮಾನವಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಿಲ್ಲಿ ನಿಮ್ಮ ಕ್ರಶ್ಶಾ ಕೇಳ್ದೋರಿಗೆ ಮುಟ್ಟಿಕೊಳ್ಳೋ ಉತ್ತರ ಕೊಟ್ಟ Rakshita Shetty: ಮತ್ತೆ ಪ್ರಶ್ನೆ ಕೇಳೋ ಸಾಹಸ ಮಾಡಲ್ಲ
ಟಾಕ್ಸಿಕ್‌ ಯಶಸ್ಸಿಗಾಗಿ ತಿರುಪತಿಯಲ್ಲಿ ಮುಡಿ ಕೊಟ್ರಾ ಲೇಡಿ ಸೂಪರ್‌ಸ್ಟಾರ್‌ ನಯನತಾರಾ? ಏನಿದು ಫೋಟೋ ರಹಸ್ಯ?