
ನವದೆಹಲಿ(ಅ.12): ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಉಲ್ಲಂಘನೆ ಸಂಬಂಧ ಪರಿಸರ ರಕ್ಷಣೆಯ ಗ್ರೀನ್ ಪೀಸ್ ಎನ್‌ಜಿಒನ ಬೆಂಗಳೂರು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ) ದಾಳಿ ಮಾಡಿದೆ. ಅಲ್ಲದೆ, ಗ್ರೀನ್‌ಪೀಸ್‌ಗೆ ಸಂಬಂಧಿಸಿದ ಸುಮಾರು ₹11.61 ಕೋಟಿ ಠೇವಣಿಯಿದ್ದ 14 ಬ್ಯಾಂಕ್ ಖಾತೆಗಳನ್ನು ಇ.ಡಿ.
ಮುಟ್ಟುಗೋಲು ಹಾಕಿಕೊಂಡಿದೆ.
ಆದರೆ, ‘ಇ.ಡಿಯ ಈ ಕ್ರಮವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ವಿರೋಧ ಧ್ವನಿಯನ್ನು ಹುಟ್ಟಡಗಿಸುವ ಯತ್ನವಾಗಿದೆ. ಫೆಮಾ ಕಾಯ್ದೆ ಉಲ್ಲಂಘಿಸಲಾಗಿದೆ ಎಂಬ ಆರೋಪ ಸುಳ್ಳು’ ಎಂದು ಗ್ರೀನ್‌ಪೀಸ್ ಹೇಳಿದೆ. ‘ಫೆಮಾ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಡಿಡಿಐಐಪಿಎಲ್ ಮತ್ತು ಗ್ರೀನ್‌ಪೀಸ್ ಇಂಡಿಯಾ ಸೊಸೈಟಿ ಮೇಲೆ ಅ.5ರಂದು ದಾಳಿ ನಡೆಸಲಾಗಿದೆ.
ಗ್ರೀನ್‌ಪೀಸ್‌ನ ಕಾರ್ಯಚಟುವಟಿಕೆ ಕೈಗೊಳ್ಳಲು ಡಿಡಿಐಐಪಿಎಲ್ ಎಂಬ ಕಂಪನಿಯನ್ನು ಸ್ಥಾಪಿಸಲಾಗಿತ್ತು. ನೆದರ್‌ಲೆಂಡ್‌ನಲ್ಲಿರುವ ಸಂಸ್ಥೆಯೊಂದರಿಂದ ಡಿಡಿಐಐಪಿಎಲ್ ₹99 ಲಕ್ಷ ಪಡೆದಿದೆ. ಇನ್ನೊಂದು ಕಂಪನಿಯಿಂದ ₹15 ಕೋಟಿ ಪಡೆದಿದೆ. ಒಟ್ಟಾರೆ ಡಿಡಿಐಐಪಿಎಲ್ ಸಹ ₹26 ಕೋಟಿ ದೇಣಿಗೆ ಸ್ವೀಕರಿಸಿದೆ.
ಅಲ್ಲದೆ, ಬ್ರಿಟಿಷ್ ಪ್ರಜೆಯೊಬ್ಬರನ್ನು ಡಿಡಿಪಿಐಐ ಎಲ್‌ನ ನಿರ್ದೇಶಕರನ್ನಾಗಿ ಮಾಡಲಾಗಿದೆ’ ಎಂದು ಇ.ಡಿ ಆರೋಪಿಸಿದೆ. ವಿದೇಶಿ ದೇಣಿಗೆ ನಿಯಮ ಉಲ್ಲಂಘನೆ
ಆರೋಪ ಹಿನ್ನೆಲೆ ೨೦೧೬ರಲ್ಲಿ ಗ್ರೀನ್ ಪೀಸ್‌ಗೆ ಹರಿದುಬರುವ ವಿದೇಶಿ ದೇಣಿಗೆಗೆ ಕೇಂದ್ರ ಸರ್ಕಾರ ತಡೆ ಒಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.