
ಹಿಂದಿ ಕಿರುತೆರೆಯ ಕಲಾವಿದೆ, ಬಿಗ್ ಬಾಸ್ 11 ರ ವಿನ್ನರ್ ಶಿಲ್ಪಾ ಶಿಂಧೆ ಸಹ ಮೀ ಟೂ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಹೇಳಿರುವ ವಿಚಾರ ಉಳಿದ ನಟಿಯರ ಆರೋಪಕ್ಕಿಂತ ಸಂಪೂರ್ಣ ಭಿನ್ನವಾಗಿದೆ.
ತನ್ನ ಮೇಲೆ ನಿರ್ಮಾಪಕ ಸಂಜಯ್ ಕೊಹ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಳೆದ ವರ್ಷ ಇದೇ ನಟಿ ಆರೋಪಿಸಿದ್ದರು.‘ಭಾಬಿಜೀ ಘರ್ ಪರ್ ಹೈ’ ಎಂಬ ಟಿವಿ ಶೋನಲ್ಲಿ ಮುಂದುವರೆಯಲು ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ನಿರ್ಮಾಪಕ ಸಂಜಯ್ ಕೊಹ್ಲಿ ಒತ್ತಡ ಹೇರಿದ್ದರು ಎಂದು ಶಿಲ್ಪಾ ದೂರಿದ್ದರು. ಆದರೆ ಈಗ ಅವರು ಹೇಳಿರುವ ಮಾತು ವ್ಯತಿರಿಕ್ತವಾಗಿದೆ.
ಮೀ ಟೂ ಬಗ್ಗೆ ಖಾಸಗಿ ವಾಹಿನಿಯೊಂದು ಪ್ರಶ್ನೆ ಮಾಡಿದಾಗ ‘ ಇದು ಶುದ್ಧ ಬಾಲಿಶತನ, ಆಗ ಮಾತನಾಡದೆ ಈಗ ಮಾತನಾಡುವುದರಲ್ಲಿ ಅರ್ಥ ಏನಿದೆ?’ ಎಂದು ಪ್ರಶ್ನೆ ಮಾಡಿದ್ದಾರೆ.
ಇದೆಲ್ಲವೂ ಮ್ಯುಚುವಲ್ ಅಂಡರ್ ಸ್ಟಾಂಡಿಂಗ್ ಮೇಲೆ ನಡೆಯುತ್ತದೆ. ಅತ್ಯಾಚಾರದ ಮಾತು ಬಾಲುವುಡ್ ನಲ್ಲೇ ಇಲ್ಲ. ಯಾರನ್ನೂ ಯಾರೂ ಒತ್ತಾಯಪೂರ್ವಕವಾಗಿ ಹಾಸಿಗೆಗೆ ಎಳೆದೊಯ್ಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.