
ಪ್ರೀಮಿಯರ್ ಶೋ ಬಳಿಕ ಒಪಿನಿಯನ್ ಸೃಷ್ಟಿ!
ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್-1' ಸಿನಿಮಾ (Kantara Chapter 1) ಬಗ್ಗೆ ಸಾಕಷ್ಟು ಸೆನ್ಸೇಷನ್ ಸೃಷ್ಟಿಯಾಗಿದೆ. ಬಿಡುಗಡೆಗೂ ಮೊದಲೇ ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ರಿಷಬ್ ಶೆಟ್ಟಿ (Rishab Shetty) ಈ ಸಿನಿಮಾ, ನಿನ್ನೆ ನಡೆದ ಪ್ರೀಮಿಯರ್ ಶೋ ಬಳಿಕ ಸಾಕಷ್ಟು ಒಪಿನಿಯನ್ ಕ್ರಿಯೇಟ್ ಮಾಡಿ ಅದೀಗ ಬಹಿರಂಗವಾಗುತ್ತಿದೆ. ಜಗತ್ತಿನಾದ್ಯಂತ ಬರೋಬ್ಬರಿ 7000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತಿದೆ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ.
ಕರ್ನಾಟಕದಲ್ಲಿಯೇ ದಿನವೊಂದಕ್ಕೆ 1000ಕ್ಕೂ ಹೆಚ್ಚು ಶೋ ಪಡೆದಿರುವ ಕಾಂತಾರ ಸಿನಿಮಾ ಬಗ್ಗೆ ಜನರು ಭಾರೀ ಕ್ರೇಜ್ ಇಟ್ಟುಕೊಂಡಿದ್ದಾರೆ. ಯಾರೇ ಸಿಗಲಿ, 'ಕಾಂತಾರ ನೋಡಿದ್ರಾ?' ಎಂಬ ಪ್ರಶ್ನೆಯೊಂದಿಗೇ ಮಾತುಕತೆ ಶುರುವಾಗುತ್ತದೆ ಎಂಬಷ್ಟರ ಮಟ್ಟಿಗೆ ರಿಷಬ್ ಕಾಂತಾರ ಚಾಪ್ಟರ್ ಸಿನಿಮಾ ಜನರನ್ನು ಆವರಸಿದೆ. ಕೇವಲ ಕರ್ನಾಟಕ ಅಂತಲ್ಲ, ದೇಶ ಹಾಗೂ ವಿದೇಶಗಳಲ್ಲಿ ಕೂಡ ಕನ್ನಡದ ಕಾಂತಾರ ಸಿನಿಮಾ ಕ್ರೇಜ್ ಭಾರೀ ಇದೆ. ಇದೇ ಕಾರಣಕ್ಕೆ ಭಾರತದ 7 ಭಾಷೆಗಳಲ್ಲಿ ಕಾಂತಾರ ಬಿಡುಗಡೆ ಆಗಿದೆ. ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಎಂದು ವರದಿಯಾಗಿದೆ.
ಇಂದು ಬೆಳಿಗ್ಗೆ (02 ಅಕ್ಟೋಬರ್ 2025) ರಂದು ಬೆಳ್ಳಂಬೆಳಿಗ್ಗೆ 6.30ರ ಸಮಯದಲ್ಲೇ ಬಿಡುಗಡೆಯಾದ ಕಾಂತಾರ ಬಗ್ಗೆ ಇದೀಗ ಭಾರೀ ಚರ್ಚೆ ಶುರುವಾಗಿದೆ. ಟೀ ಶಾಪ್, ಕಾಫೀ ಕಟ್ಟೆಯಲ್ಲಿ ಸೇರಿದಂತೆ ಬೇಕರಿಗಳು ಹಾಗೂ ಸಣ್ಣಪಟ್ಟ ಗೂಡಂಗಡಿಗಳ ಮುಂದೆಯೂ ಜನರು ಈ ಸಿನಿಮಾ ಬಗ್ಗೆಯೇ ಮಾತುಕತೆ ಹಾಗೂ ಚರ್ಚೆಗಳು ನಡೆಯುತ್ತಿವೆ. ಹಾಗಿದ್ದರೆ ಅಲ್ಲಿನ ಮಾತುಗಳ ಸಾರವೇನು? ಇಲ್ಲಿದೆ ನೋಡಿ ಅದಕ್ಕೆ ಉತ್ತರ..
ಹೌದು, ಟೀ ಶಾಪ್, ಕಾಫೀ ಕಟ್ಟೆಯಲ್ಲಿ ಸೇರಿರುವ ಜನರಲ್ಲಿ ಎರಡು ವರ್ಗದವರಿದ್ದಾರೆ. ಒಂದು ಸಿನಿಮಾ ನೋಡಿದ ಜನರ ವರ್ಗವಾಗಿದ್ದರೆ ಇನ್ನೊಂದು ಸಿನಿಮಾವನ್ನು ಇನ್ನೂ ನೋಡದ ಆದರೆ ನೋಡಲೇಬೇಕೆಂದು ಅಂದಿಕೊಂಡಿರುವ ಜನರ ವರ್ಗ. ಈ ಎರಡು ವರ್ಗದ ಜನರ ಮಾತುಕತೆಯ ಮಧ್ಯೆ, ಒಂದು ಅಂಶವಂತೂ ತುಂಬಾ ಸ್ಪಷ್ಟವಾಗಿದೆ. ಅದೇನು ಎಂದರೆ, 'ಕಾಂತಾರ ಚಾಪ್ಟರ್ 1' ಸಿನಿಮಾ ದೇಶ-ವಿದೇಶಗಳು ಮಾತ್ರವಲ್ಲ ಭಾರತದ ಹಳ್ಳಿಗಳ ಜನಸಾಮಾನ್ಯರನ್ನೂ ತಲುಪಿದೆ ಎಂಬ ಸಂಗತಿ.
ಸಾಮಾನ್ಯವಾಗಿ ಕನ್ನಡದ ಯಾವುದೇ ಸಿನಿಮಾ ಬಗ್ಗೆ ಪಬ್ಲಿಕ್ ಜಾಗಗಳಲ್ಲಿ ಚರ್ಚೆಗಳು ಆಗೋದು ಇತ್ತೀಚಿನ ದಿನಗಳಲ್ಲಿ ತೀರಾ ಅಪರೂಪ ಎಂಬಂತಾಗಿದೆ. ಈಗೀಗಂತೂ ಚರ್ಚೆಗಳು ಏನೇ ಇದ್ದರೂ ಅದು ಸೋಷಿಯಲ್ ಮೀಡಿಯಾಗಳಲ್ಲಿ ಎಂಬಂತಾಗಿಬಿಟ್ಟಿದೆ. ಯಾವುದೇ ಸಿನಿಮಾ ಬಂದು ಹೋಗಿದ್ದರೂ ಅದು ಜನಸಾಮಾನ್ಯರಿಗೆ ಗೊತ್ತೇ ಆಗಲ್ಲ ಎಂಬಷ್ಟು ಕಡಿಮೆ ಸೌಂಡ್ ಆಗುತ್ತಿವೆ. ಆದರೆ ಕಾಂತಾರ ಸಿನಿಮಾದಲ್ಲಿ ಹಾಗಲ್ಲ, ಜನಸಾಮಾನ್ಯರಿಂದ ಹಿಡಿದು ಸೋಷಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆ ಭಾರೀ ಚರ್ಚೆಗಳಿ ನಡೆಯುತ್ತಿವೆ.
ಅದರಲ್ಲಿ ಮುಖ್ಯವಾದ ಅಂಶಗಳನ್ನು ಹೇಳಬೇಕು ಎಂದರೆ, ಕಾಮನ್ ಪೀಪಲ್ ದೃಷ್ಟಿಯಲ್ಲಿ ಕನ್ನಡ ಸಿನಿಮಾವೊಂದು ಈ ಮಟ್ಟಿಗೆ, ಅಂದರೆ ಸಿಟಿಯೂ ಸೇರಿದಂತೆ ಹಳ್ಳಿಹಳ್ಳಿಗಳಲ್ಲೂ ಮಾತಾಡುವಂತಾಗಿದೆ ಎಂಬುದೇ ಗ್ರೇಟ್. ಕನ್ನಡ ಸಿನಿಮಾ, ಕರ್ನಾಟಕದ ಬಗ್ಗೆ ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಮೂಲಕ ಇಡೀ ಜಗತ್ತು ಈಗ ಮಾತನಾಡುವಂತಾಗಿದೆ ಎಂಬುದು ಜನಸಾಮಾನ್ಯರ ಖುಷಿಗೆ ಕಾರಣ. ನಮ್ಮ ನೆಲದ, ಸಂಪ್ರದಾಯದ, ದೇವರು, ದೈವ, ಭೂತ, ದೇವರಿಗೆ ಸಂಬಂಧಪಟ್ಟ ದೈವಾರಾಧನೆ, ಭೂತಾರಾಧನೆ, ಭೂತಕೋಲ, ಗುಳಿಗ, ಪಂಜುರ್ಲಿ ಹಾಗೂ ಹುಲಿವೇಷ ಹೀಗೆ ಸಾಕಷ್ಟು ಆಚರಣೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.
ತುಳುನಾಡಿನ ಈ ಸಾಂಪ್ರದಾಯಿಕ ಆಚರಣೆಗಳು ಈಗ ರಿಷಬ್ ಶೆಟ್ಟಿಯವರ ಸಿನಿಮಾ 'ಕಾಂತರ ಪ್ರೀಕ್ವೆಲ್' ಮೂಲಕ ನಮ್ಮ ರಾಜ್ಯದ ಬೇರೆಬೇರೆ ಕಡೆಯೂ ಸೇರಿದಂತೆ, ಹೆಚ್ಚುಕಡಿಮೆ ಇಡೀ ಜಗತ್ತಿಗೇ ಪರಿಚಯ ಆಗುತ್ತಿದೆ. ಈ ಸಂತೋಷವೇ ಈ ಸಿನಿಮಾ ಬಗೆಗಿನ ಚರ್ಚೆಯಲ್ಲಿ ಹೆಚ್ಚು ಹೈಲೈಟ್ ಆಗುತ್ತಿದೆ. ಜೊತೆಗೆ, ಕನ್ನಡ ಸಿನಿಮಾವೊಂದು ಇಷ್ಟೊಂದು ತಾಂತ್ರಿಕ ಶ್ರೀಮಂತಿಕೆ ಹಾಗೂ ಗ್ರಾಫಿಕ್ಸ್ ಬಳಸಿಕೊಂಡು ನೀರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಹಂತಕ್ಕೆ ಕನ್ನಡ ಸಿನಿಮಾ ಉದ್ಯಮ ಬೆಳೆದಿದೆ ಎಂಬುದು ಅವರೆಲ್ಲರ ಮಾತುಕತೆಯ ಸಾರ. ಆದರೆ, ಮೇಲ್ನೋಟಕ್ಕೆ ಸಿನಿಮಾ ಚೆನ್ನಾಗಿದೆ, ನೋಡಲೇಬೇಕು ಎಂಬುದು ಬಹುತೇಕ ಎಲ್ಲರ ಅಭಿಪ್ರಾಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.