
ಅಲ್ಲದೇ ಮಲಯಾಳಂ ಡಬ್ಬಿಂಗ್ ಹಕ್ಕುಗಳನ್ನೂ ಕಲರ್ಸ್ ಪಡೆದುಕೊಂಡಿದೆ. ಭಾರಿ ಮೊತ್ತಕ್ಕೆ ಮಾರಾಟವಾಗಿರುವುದರಿಂದ ಚಿತ್ರತಂಡ ಖುಷಿಯಾಗಿದೆ.
‘ಬೆಲ್ ಬಾಟಂ’ ಬಿಡುಗಡೆಗೂ ಮುನ್ನವೇ ತಮಿಳಿನ ರೀಮೇಕ್ ರೈಟ್ ಸೋಲ್ಡ್ ಆಗಿತ್ತು. ಈಗ ರಿಷಬ್ ಶೆಟ್ಟಿಯ ಡಿಟೆಕ್ಟಿವ್ ದಿವಾಕರನ ಪಾತ್ರವನ್ನು ಆರ್ಯ ಮಾಡುವುದು ಖಚಿತವಾಗಿದೆ. ಇದರ ಬೆನ್ನಲ್ಲೇ ನಾಯಕಿಯಾಗಿ ಹರಿಪ್ರಿಯನೇ ಬಂದರೆ ಇನ್ನೂ ಚೆಂದ ಎಂದು ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದೆ. ಬ್ಯುಸಿ ಶೆಡ್ಯೂಲ್ ಕಾರಣಕ್ಕೆ ಹರಿಪ್ರಿಯ ಇನ್ನೂ ಏನನ್ನೂ ಹೇಳಿಕೊಂಡಿಲ್ಲ. ಇನ್‌ಸ್ಪೆಕ್ಟರ್ ಸಹದೇವನ ಪಾತ್ರಕ್ಕೆ ಪ್ರಮೋದ್ ಶೆಟ್ಟಿಯವರಿಗೆ ಆಫರ್ ಬಂದಿದೆ. ಆದರೆ ಇನ್ನೂ ಫೈನಲ್ ಆಗಿಲ್ಲ. ಈಗಾಗಲೇ ಚಿತ್ರೀಕಣಕ್ಕೆ ಸಕಲ ತಯಾರಿಯನ್ನು ಮುಗಿಸಿಕೊಂಡಿರುವ ಚಿತ್ರತಂಡ ಮಾ. 1ಕ್ಕೆ ಡಿಟೆಕ್ಟಿವ್ ದಿವಾಕರನಾಗಿ ಕಾಣಿಸಿಕೊಳ್ಳಲಿರುವ ಆರ್ಯ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲು ತೀರ್ಮಾನಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.