ಅದು ವಿಶಾಲವಾದ ಮೈದಾನ. ಬೆಂಗಳೂರಿನ ಮಿಲ್ಕ ಕಾಲೋನಿ. ಕಲರ್ ಕಲರ್ ಡ್ರೆಸ್ ತೊಟ್ಟವರ ನಡುವೆ ಕುಣಿಯಲು ಅಣಿಯಾಗಿದ್ದವರು ರವಿಚಂದ್ರನ್ ಪುತ್ರ ವಿಕ್ರಮ್. ರಾಜು ಸುಂದರಂ ಮಾಸ್ಟರ್ ಅವರ ಕೊರಿಯೋಗ್ರಫಿ ಬೇರೆ. ಹೀಗಾಗಿ ಇಡೀ ಮೈದಾನ ರಂಗೇರಿತ್ತು.
‘ಪಕ್ಕದ ಮನೆ ಪಮ್ಮಿ, ಕೊಡುತಾಳೆ ಸಿಗ್ನಲ್ ಕೆಮ್ಮಿ’ ಎನ್ನುವ ಸಾಲುಗಳು ರೆರ್ಕಾಡ್ ಪ್ಲೇನಲ್ಲಿ ಸದ್ದು ಮಾಡುತ್ತಿದ್ದರೆ ಆ ಸಾಲಿಗೆ ತಕ್ಕಂತೆ ವಿಕ್ರಮ್ ಹೆಜ್ಜೆ ಹಾಕುತ್ತಿದ್ದರು. ಸಂತೋಷ್ ರೈ ಪಾತಾಜೆ ಈ ಎಲ್ಲವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಸಾಹಸ ಮಾಡುತ್ತಿದ್ದರು. ಇದು ಸಹನಾಮೂರ್ತಿ ನಿರ್ದೇಶನದ ‘ತ್ರಿವಿಕ್ರಮ’ ಚಿತ್ರದ ಹಾಡಿನ ಶೂಟಿಂಗ್ ಸ್ಪಾಟ್ ಚಿತ್ರಣಗಳು.
undefined
‘ಇಲ್ಲಿಯವರೆಗೂ ಶೇಕಡ 25 ರಷ್ಟುಶೂಟಿಂಗ್ ಮುಗಿದಿದೆ. ಅಮ್ಮ ಹೇಳಿಕೊಟ್ಟಸಂಪ್ರದಾಯ, ಆಚಾರ-ವಿಚಾರ ನಂಬುವ ನಾಯಕಿ, ಇವತ್ತಿನ ಮನಸ್ಥಿತಿ ಗುಣವುಳ್ಳ ಹುಡುಗ... ಇವರಿಬ್ಬರ ಜುಗಲ್‌ಬಂದಿಯಲ್ಲಿ ಬರುವ ಹಾಡನ್ನು ಸೆರೆ ಹಿಡಿಯಲಾಗುತ್ತಿದೆ. ಮುಂದೆ ರಾಜಸ್ಥಾನ, ದಾಂಡೇಲಿ, ಬ್ಯಾಂಕಾಕ್ ಮುಂತಾದ ಕಡೆ ಚಿತ್ರೀಕರಣ ಮಾಡಲಾಗುವುದು’ ಎಂದು ನಿರ್ದೇಶಕರು ಮಾಹಿತಿ ಕೊಟ್ಟರು.
ರವಿಚಂದ್ರನ್ ಪುತ್ರ ವಿಕ್ರಮ್ ಚಿತ್ರದ ಫಸ್ಟ್‌ಲುಕ್!
‘ಮೊದಲ ಚಿತ್ರವಾಗಿದ್ದರಿಂದ ತರಭೇತಿ ಪಡೆದುಕೊಂಡು ಕ್ಯಾಮರ ಮುಂದೆ ನಿಲ್ಲುತ್ತಿದ್ದೇನೆ. ಅಮ್ಮ ಇಲ್ಲ ಎನ್ನುವ ಕೊರೆತೆ ನೀಗಿಸುವಂತೆ ತುಳಸಿ ಶಿವಮಣಿ ಅವರು ನನ್ನ ಮೇಲೆ ಅಭಿಮಾನ ತೋರಿಸುತ್ತಿದ್ದಾರೆ. ಕಷ್ಟಪಟ್ಟು ಶ್ರದ್ದೆಯಿಂದ ಕೆಲಸ ಮಾಡುತ್ತಿದ್ದೇನೆ. ಮಿಕ್ಕಿದ್ದು ಜನರಿಗೆ ಬಿಟ್ಟದ್ದು. ರವಿಚಂದ್ರನ್ ಮಗ ಅಂತ ಚಿತ್ರಮಂದಿರಕ್ಕೆ ಬಂದು, ಹೋಗುವಾಗ ವಿಕ್ರಮ್ ಚಿತ್ರ ಎಂದರೆ ಜೀವನ ಸಾರ್ಥಕವಾಗುತ್ತದೆ’ ಎಂದು ಹೇಳಿಕೊಂಡಿದ್ದು ಚಿತ್ರದ ನಾಯಕ ವಿಕ್ರಮ್ ಅವರು. ಚಿತ್ರೀಕರಣದ ಸೆಟ್‌ನಲ್ಲಿ ನೃತ್ಯ ನಿರ್ದೇಶಕ ರಾಜುಸುಂದರಂ ಹುಟ್ಟು ಹಬ್ಬವನ್ನು ತಂಡವು ಆಚರಿಸಿತು.