
ಯಾರು ಎಷ್ಟೇ ದೊಡ್ಡವರಾದರೂ ಬಾಲ್ಯದಲ್ಲಿ ಪುಟ್ಟ ಮಕ್ಕಳೇ. ಆಗ ಎಲ್ಲರೂ ತಂಟೆಕೋರರೇ. ಎಲ್ಲರೂ ಬಾಲ್ಯದಲ್ಲಿ ಹುಡುಗಾಟ ಮಾಡಿಕೊಂಡೇ ಬೆಳೆದವರು. ನಟ ಅಮಿರ್ ಖಾನ್‌ರವರ ಬಾಲ್ಯದ ಕಥೆ ಬಹಳ ಮಜವಾಗಿದೆ. ಅದೇನು ಅಂತ ತಿಳ್ಕೋಳೋಕೆ ಇದನ್ನು ಓದಿ.
ಬಹಳ ಚಿಕ್ಕವನಿದ್ದಾಗ ಅಮ್ಮ ಒಂದು ಸೈಕಲ್ ಕೊಡಿಸಿದ್ದರು. ನನಗೆ ಅದನ್ನು ತುಳಿಯಬೇಕು ಅಂತ ಗೊತ್ತಿತ್ತು. ಆದರೆ ಬ್ಯಾಲೆನ್ಸ್ ಮಾಡೋದು ಗೊತ್ತಿರಲಿಲ್ಲ. ಸೈಕಲ್ ಬಗ್ಗೆ ಬಹಳ ಆಕರ್ಷಣೆ. ಆದರೆ ಸೈಕಲ್ ಹೊಡೆಯಬೇಕಾದರೆ
ಜೊತೆಗೊಬ್ಬರು ಇರಬೇಕು. ನಾನು ಸೈಕಲ್ ತುಳಿಯುತ್ತಿದ್ದರೆ ಅವರು ಸೈಕಲ್ ಹಿಡಿದುಕೊಂಡು ನನ್ನ ಜೊತೆಗೇ ಓಡಬೇಕು.
ಅವರೆಷ್ಟು ಸೈಕಲ್ ಹಿಡಿದು ಕಲಿಸಿದರೂ ನನಗೆ ಬ್ಯಾಲೆನ್ಸ್ ಮಾಡೋದು ಗೊತ್ತಾಗುತ್ತಿರಲಿಲ್ಲ. ಒಮ್ಮೊಮ್ಮೆ ಕೈ ಬಿಡುತ್ತಿದ್ದರು. ಆದರೆ ನಾನು ಭಾರಿ ಕೇರ್‌ಫುಲ್ ಆಗಿರುತ್ತಿದ್ದೆ. ಅವರು ಕೈಬಿಟ್ಟಿದ್ದು ಗೊತ್ತಾದ ಕೂಡಲೇ ನನಗೆ ಬ್ಯಾಲೆನ್ಸ್ ತಪ್ಪುತ್ತಿತ್ತು, ಹೆದರಿಕೆಯಾಗಿ ಬಿದ್ದು ಬಿಡ್ತಿದ್ದೆ.
ಕೊನೆ ಕೊನೆಗೆ ಅದು ಎಲ್ಲಿಯವರೆಗೆ ಹೋಯಿತೆಂದರೆ ನನಗೆ ಗೊತ್ತಾಗದ ಹಾಗೆ ಸೈಕಲ್‌ನಿಂದ ಕೈ ಬಿಟ್ಟರೆ ಮಾತ್ರ ಬ್ಯಾಲೆನ್ಸಿಂಗ್ ಮಾಡೋದು ಅನ್ನುವಲ್ಲಿಯವರೆಗೆ. ಎಷ್ಟೋ ದಿನದ ಈ ಸರ್ಕಸ್ ಬಳಿಕ ಸೈಕಲ್ ಬ್ಯಾಲೆನ್ಸಿಂಗ್ ಗೊತ್ತಾಯ್ತು. ಆ ಹಂತಕ್ಕೆ ಬರಲು ಅದೆಷ್ಟು ಬಾರಿ ಸೈಕಲ್‌ನಿಂದ ಬಿದ್ದಿದ್ದೆನೋ, ಈಗ ನೆನೆಸಿದರೆ ನಗು ಬರುತ್ತೆ.
- ಅಮಿರ್ ಖಾನ್, ಬಾಲಿವುಡ್ ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.