
ದರ್ಶನ್ - ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಚಿತ್ರ ನೋಡಲು ಕಾತುರದಿಂದ ಕಾಯುತ್ತಿರೋ ಚಿತ್ರ ಕಸಿಕರಿಗೊಂದು ಸಿಹಿ ಸುದ್ದಿ ಇಲ್ಲಿದೆ. ಕ್ರಿಸ್ಮಸ್‌ಗೆ ಈ ಚಿತ್ರ ತಂಡ ಸೂಪರ್ ಸಪ್ರೈಸ್ ನೀಡಿದೆ.
ತರುಣ್ ಸುಧೀರ್ ನಿರ್ದೇಶಿಸಿದ ಬ್ಲಾಕ್ ಬಸ್ಟರ್ ಚಿತ್ರ 'ಚೌಕ'ದಲ್ಲಿ ರಾಬರ್ಟ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಸಣ್ಣ ಪಾತ್ರವಾದರೂ ಆ ಪಾತ್ರಕ್ಕೊಂದು ತೂಕವಿತ್ತು. ಈಗ ಅದೇ ಪಾತ್ರದ ಹೆಸರನ್ನಿಟ್ಟಿಕೊಂಡು ಸಿನಿಮಾ ಮಾಡುತ್ತಿದ್ದಾರೆ.
‘ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ #D53 ಚಿತ್ರಕ್ಕೆ ‘ರಾಬರ್ಟ್’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಿಲಾಗಿದೆ. ಉಮಾಪತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ, ತರುಣ್ ಕಿಶೋರ್ ಸುಧೀರ್ ಈ ಚಿತ್ರ ನಿರ್ದೇಶಿಸಲಿದ್ದಾರೆ. 2019 ರಿಂದ ಚಿತ್ರ ಶೂಟಿಂಗ್ ಶುರುವಾಗಲಿದೆ . ಎಲ್ಲರಿಗೂ ಕ್ರಿಸ್ಮಸ್ ಹಾರ್ದಿಕ ಶುಭಾಷಯಗಳು,’ ಎಂದು ಟ್ವೀಟ್ ಮಾಡಿದ್ದಾರೆ.
ಇದು ದರ್ಶನ್ ಅಭಿನಯದ 53ನೇ ಚಿತ್ರವಾಗಿದ್ದು ಈಗಾಗಲೇ ಚಿತ್ರದ ಸ್ರ್ಕಿಪ್ಟ್ ಕೆಲಸ ಮುಗಿಸಿರುವ ಚಿತ್ರ ತಂಡ ಹೊಸ ವರ್ಷಾರಂಭದಲ್ಲಿ ಶೂಟಿಂಗ್ ಆರಂಭಿಸಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.