ಸೆನ್ಸಾರ್ ಮಂಡಳಿಯ ಎಕ್ಸಾಂನಲ್ಲಿ ಕೆಜಿಎಫ್ ಪಾಸ್: ಸಿಕ್ತು ಯು/ಎ ಸರ್ಟಿಫಿಕೇಟ್

By Web DeskFirst Published Dec 8, 2018, 2:54 PM IST
Highlights

ಕೆಜಿಎಫ್ ಸಿನಿಮಾಗೆ ಸೆನ್ಸಾರ್ ಮಂಡಳಿ ಯಾವುದೇ ಕತ್ತರಿ ಪ್ರಯೋಗ ಮಾಡದೆ ಯು/ಎ ಸರ್ಟಿಫಿಕೇಟ್ ನೀಡಿರುವುದರಿಂದ ಚಿತ್ರ ತಂಡಕ್ಕಿದ್ದ ಬಹುದೊಡ್ಡ ಒತ್ತಡ ನಿವಾರಣೆಯಾಗಿದೆ.

ಬೆಂಗಳೂರು[ಡಿ.08]: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಡಿಸೆಂಬರ್ ತಿಂಗಳ 21ರಂದು ತೆರೆಗಪ್ಪಳಿಸಲಿದೆ. ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳ ಬಾಕಿ ಎನ್ನುವಷ್ಟರಲ್ಲಿ ಸಿನಿಮಾ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಲಭಿಸಿದೆ. ಕೆಜಿಎಫ್ ಸಿನಿಮಾಗೆ ಸೆನ್ಸಾರ್ ಮಂಡಳಿ ಯಾವುದೇ ಕತ್ತರಿ ಪ್ರಯೋಗ ಮಾಡದೆ ಯು/ಎ ಸರ್ಟಿಫಿಕೇಟ್ ನೀಡಿರುವುದರಿಂದ ಚಿತ್ರ ತಂಡಕ್ಕಿದ್ದ ಬಹುದೊಡ್ಡ ಒತ್ತಡ ನಿವಾರಣೆಯಾಗಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಏಕಕಾಲದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಟ್ರೇಲರ್ ನಿಂದಲೇ ಬಾಲಿವುಡ್ ಸ್ಟಾರ್ಸ್ ಹಾಗೂ ದಕ್ಷಿಣ ಭಾರತೀಯ ಸಿನಿ ತಾರೆಯರ ಮನ್ನಣೆ ಗಳಿಸುವುದರೊಂದಿಗೆ, ಸಿನಿಮಾ ಕ್ಷೇತ್ರದಲ್ಲಿ ಧೂಳೆಬ್ಬಿಸುವುದು ಸ್ಪಷ್ಟವಾಗಿದೆ.

ಕೆಜಿಎಫ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರಂತೆ ಈ ಬಾಲಿವುಡ್ ನಟ! 

ಯು/ಎ ಸರ್ಟಿಫಿಕೇಟ್: ಮಕ್ಕಳು ತಂದೆ, ತಾಯಿ/ಪೋಷಕರೊಂದಿಗೇ ಸಿನಿಮಾ ವೀಕ್ಷಿಸಬೇಕು

ಹೌದು ಸೆನ್ಸಾರ್ ಮಂಡಳಿಯ ಅಗ್ನಿ ಪರೀಕ್ಷೆಯಲ್ಲಿ ಗೆದ್ದಿರುವ ಕೆಜಿಎಫ್ ಸಿನಿಮಾ ಯು/ಎ ಸರ್ಟಿಫಿಕೇಟ್ ಪಡೆದಿದೆ. ಹೀಗಿರುವಾಗ ಯು/ಎ ಸರ್ಟಿಫಿಕೇಟ್ನ ಅಂದ್ರೆ ಏನು? ಯಾರು ಈ ಸಿನಿಮಾ ವೀಕ್ಷಿಸಬಹುದು. ನಿಯಮಗಳೇನು ಎಂಬ ಪ್ರಶ್ನೆಗಳು ಮೂಡುತ್ತವೆ. ಯು/ಎ ಸರ್ಟಿಫಿಕೇಟ್ ಸಿನಿಮಾ ಎಲ್ಲರೂ ವೀಕ್ಷಿಸಬಹುದಾದ ಸಿನಿಮಾ ಆದರೆ 12 ವರ್ಷಕ್ಕಿಂತ ಕೆಳಗಿನ ಮಕ್ಕಳು ಈ ಸಿನಿಮಾ ವೀಕ್ಷಿಸುವ ವೇಳೆ ಮಾರ್ದರ್ಶನಕ್ಕಾಗಿ ತಂದೆ, ತಾಯಿ ಅಥವಾ ಪೋಷಕರು ಇರುವುದು ಅಗತ್ಯ. ಯು/ಎ ಸರ್ಟಿಫಿಕೇಟ್ ಪಡೆದ ಸಿನಿಮಾಗಳಲ್ಲಿ ಹಿಂಸಾತ್ಮಕ, ಅಶ್ಲೀಲ, ಭಯ ಮೂಡಿಸುವ ದೃಶ್ಯಗಳಿರುವ ಸಾಧ್ಯತೆಗಳಿದ್ದು, ಈ ವೇಳೆ ಮಕ್ಕಳಿಗೆ ಈ ಬಗ್ಗೆ ತಿಳಿ ಹೆಳಲು ಹಾಗೂ ಧೈರ್ಯ ತುಂಬಲು ಹೆತ್ತವರು ಅವರೊಂದಿಗೆ ಇರುವುದು ಅಗತ್ಯವಾಗಿದೆ.

ಎಲ್ಲೆಲ್ಲೂ ‘ಸಲಾಂ ರಾಕಿ ಭಾಯ್’ ಸದ್ದು...ಯುಟ್ಯೂಬ್‌ನಲ್ಲಿ ಕೆಜಿಎಫ್‌ ಕಮಾಲ್!

ಸದ್ಯ ಕೆಜಿಎಫ್ ಸಿನಿಮಾಗೂ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. ಇದು ಖುಷಿಯ ವಿಚಾರವಾದರೂ 12 ವರ್ಷಕ್ಕಿಂತ ಕಿರಿಯ ಮಕ್ಕಳು ತಂದೆ, ತಾಯಿ ಅಥವಾ ಹಿರಿಯರೊಂದಿಗೆ ಸಿನಿಮಾ ವೀಕ್ಷಿಸಬೇಕಾಗುತ್ತದೆ ಎಂದು ಮರೆಯದಿರಿ.

click me!