27ನೇ ಮದುವೆ ವಾರ್ಷಿಕೋತ್ಸವ: ಅಂಬಿ ನೆನಪಲ್ಲಿ ಮಡದಿ

Published : Dec 08, 2018, 12:20 PM ISTUpdated : Dec 09, 2018, 11:21 AM IST
27ನೇ ಮದುವೆ ವಾರ್ಷಿಕೋತ್ಸವ: ಅಂಬಿ ನೆನಪಲ್ಲಿ ಮಡದಿ

ಸಾರಾಂಶ

ಬೆಲ್ ಸ್ಟಾರ್ ಅಂಬರೀಷ್ ಇದ್ದಿದ್ದರೆ ಸುಮಲತಾರೊಂದಿಗೆ ಇಂದು (ಡಿ.8) ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರು. ಪ್ರೀತಿ, ಪ್ರೇಮವನ್ನು ಸಂಪೂರ್ಣ ಧಾರೆ ಎರೆದು, ಸ್ನೇಹಿತನಂತಿದ್ದ ಪತಿಯಿಲ್ಲದ ನೋವನ್ನು ಮಡದಿ ಹಂಚಿಕೊಂಡಿದ್ದು ಹೀಗೆ. 

ಆಕಾಶದಲ್ಲಿ ರೆಬೆಲ್ 'ಸ್ಟಾರ್' ಕಾಣುವಂತಾಗಿ ಇಂದಿಗೆ (ಡಿ.24) ಹದಿನೈದು ದಿನಗಳಾಗಿವೆ. ಪತಿಯಿಲ್ಲದ ನೋವನ್ನು ಸುಮಲತಾ ಇನ್ನೂ ಅರಗಿಸಿಯೇ ಕೊಂಡಿಲ್ಲ. ಹುಲಿಯಂತಿದ್ದ, ಮೃದು ಹೃದಯಿ, ಉತ್ತಮ ಸ್ನೇಹಿತ ಅಂಬಿಯನ್ನು ತಮ್ಮ 27ನೇ ವೈವಾಹಿಕ ವಾರ್ಷಿಕೋತ್ಸವದಲ್ಲಿ ಸುಮಲತಾ ನೆನೆದು, ಪ್ರೀತಿಯ ಪತಿಗೆ ಸೋಷಿಯಲ್ ಮೀಡಿಯಾದಲ್ಲೊಂದು ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಒಕ್ಕಣಿಕೆ ಹೀಗಿದೆ...

‘ನನ್ನ ನಲ್ಮೆಯ, ಪ್ರೀತಿಯ ಅ..., 
 27 ವರ್ಷಗಳಲ್ಲಿ ಇದೇ ಮೊದಲ ಸಲ ಡಿಸೆಂಬರ್ 8ರಂದು ನನ್ನೊಂದಿಗೆ ನೀವಿಲ್ಲ....ನೀವು ನನ್ನ ಪ್ರಪಂಚವಾಗಿದ್ರಿ, ನನ್ನನ್ನೂ ಸಂಬಾಳಿಸಿ, ಕೋಟ್ಯಾಂತರ ಮಂದಿಯ ಸ್ನೇಹಿವನ್ನೂ ಗಿಟ್ಟಿಸಿ, ಪ್ರೀತಿ ಹಂಚುವ ಶಕ್ತಿ ನಿಮಗೆ ಮಾತ್ರ ಇರುವುದು. ನಿಮ್ಮನ್ನು ಪ್ರೀತಿಸಲು ಆರಂಭಿಸಿದ ದಿನವೇ ನನ್ನ ಹೊಸ ಬಾಳು ಆರಂಭವಾಯಿತು. ಅಂದಿನಿಂದಲೂ ನನ್ನನ್ನು ಹಾಗೂ ನನ್ನ ಪ್ರೀತಿಯನ್ನು ಸಲಹಿದ್ದೀರಿ. ಚಳಿಯಲ್ಲಿ ಬೆಚ್ಚಗಿನ ಕಂಬಳಿಯಂತೆ, ಬಿಸಿಲಲ್ಲಿ ತಂಪೆಗೆರುವ ಛತ್ರಿಯಂತೆ ನನ್ನೊಂದಿಗೆ ಇದ್ರಿ. 

ನಂಗೆ ಗೊತ್ತು ನೀವೀಗ ಎಲ್ಲಿಯೇ ಇದ್ದರೂ ನಾನು, ನನ್ನ ಮಗನ ಬಗ್ಗೆಯೇ ಚಿಂತಿಸುತ್ತಿರುತ್ತೀರಿ. ಅದು ನನ್ನ ಸುತ್ತ ಇರೋ ಜನರ ಆಶೀರ್ವಾದ ಮೂಲಕ ನನ್ನ ಅರಿವಿಗೆ ಬರುತ್ತಿದೆ.  ನಮ್ಮನ್ನು ಪ್ರೀತಿಸಿದ ಪ್ರತಿಯೊಬ್ಬರನ್ನೂ ನಿಮ್ಮಂತೆಯೇ ಕಾಪಾಡಿಕೊಳ್ಳುವ ಶಕ್ತಿ ಆ ದೇವರು ನಮಗೆ ಕೊಡಲಿ. 

ಸಿಂಹದಂಥ ಹೃದಯಿ, ಅದ್ಭುತ ಮಾನವೀಯ ಹೃದಯಿಯೊಂದಿಗೆ ನಾನು 27 ವರ್ಷಗಳ ಕಾಲ ಕಳೆದೆನೆಂದು ಹೆಮ್ಮೆಯಿಂದ ಹೇಳಿ ಕೊಳ್ಳುವೆ. ಅಂಬಿಯಂಥವರು ಕೋಟಿಗೊಬ್ಬರು ಮಾತ್ರ ಸಿಗೋದು. ನಮ್ಮೊಂದಿಗೆ ಸದಾ ಇರಿ, ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ....' ಎಂದು ಬರೆದು ಅಗಲಿದ ಪತಿದೇವನಿಗೆ ಅಕ್ಷರದ ಮೂಲಕ ಕಂಬನಿ ಮಿಡಿದಿದ್ದಾರೆ ಪತ್ನಿ ಸುಮಲತಾ.

 

ಪತ್ನಿಯೊಂದಿಗೆ ಅಂಬಿ ಡ್ಯಾನ್ಸ್..ವಿಡಿಯೋ ವೈರಲ್

ಅಂಬಿ ಮೊಬೈಲ್‌ನಲ್ಲಿ ದೇವತೆ: ಕರೆ ಬಂದ್ರೆ ಎಲ್ಲವಕ್ಕೂ ಚಕ್ಕರ್!

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
‘The Devil’ ಸಿನಿಮಾ ನೋಡಿ ಭಾವುಕರಾದ ದರ್ಶನ್ ಪತ್ನಿ… ಅಭಿಮಾನಿಗಳಿಗೆ ಪ್ರೀತಿಯ ಪತ್ರ