ವಿವಾದಕ್ಕೆ ಕಾರಣವಾದ ಬಾಲಿವುಡ್ ನಟಿ ಪೋಸ್ಟ್ ಮಾಡಿದ ಫೋಟೊ! ಮೂಢನಂಬಿಕೆ ಬಿಡಿ ತಾಯ್ತನ ಸಂಭ್ರಮಿಸಿ ಎಂದು ಕರೆ

Published : Sep 04, 2017, 11:02 PM ISTUpdated : Apr 11, 2018, 01:02 PM IST
ವಿವಾದಕ್ಕೆ ಕಾರಣವಾದ ಬಾಲಿವುಡ್ ನಟಿ ಪೋಸ್ಟ್ ಮಾಡಿದ ಫೋಟೊ! ಮೂಢನಂಬಿಕೆ ಬಿಡಿ ತಾಯ್ತನ ಸಂಭ್ರಮಿಸಿ ಎಂದು ಕರೆ

ಸಾರಾಂಶ

ಹೆಣ್ಣೊಬ್ಬಳಿಗೆ ತಾಯ್ತನ ಎನ್ನುವುದು ಬಹಳ ಮುಖ್ಯವಾದ ಸಂಗತಿ. ಆಕೆ ಗರ್ಭಿಣಿಯಾದ ಸಂದರ್ಭದಲ್ಲಿ ಆರೋಗ್ಯದ ಕಡೆ ಗಮನ ಕೊಡಬೇಕು. ಅದನ್ನು ಬಿಟ್ಟು ಮೂಢನಂಬಿಕೆಗಳಿಗೆ ಸಿಕ್ಕು ತೊಂದರೆ ತಂದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

2001ರ ಮಿಸ್ ಇಂಡಿಯಾ, ಬಾಲಿವುಡ್ ತಾರೆ ಸೆಲಿನಾ ಜೇಟ್ಲಿ ಈಗ ಬಾರಿ ಸುದ್ದಿಯಲ್ಲಿದ್ದಾರೆ. ಹಿಂದೆ ಸಿನಿಮಾ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ, ಲೈಂಗಿಕ ಅಲ್ಪಸಂಖ್ಯಾತರ ಶೋಷಣೆಯ ವಿರುದ್ಧವಾಗಿ ಧ್ವನಿ ಎತ್ತಿ ಸದ್ದಾಗುತ್ತಿದ್ದ ಸೆಲಿನಾ ಈಗ ಅಂತಹುದೇ ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಮುನ್ನೆಲೆಗೆ ಬಂದಿದ್ದಾರೆ.

ಆದರೆ ಸ್ವರೂಪ ಮಾತ್ರ ಬೇರೆಯಷ್ಟೆ. ಈಗ ತುಂಬು ಗರ್ಭಿಣಿಯಾಗಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು ಎಲ್ಲೆಡೆ ಚೆರ್ಚೆಗೆ ಒಳಗಾಗಿವೆ. ಅದೂ ಅಲ್ಲದೇ ಅವರು ಫೋಟೋ ಜೊತೆಗೆ ಹೇಳಿಕೊಂಡಿುವ ಮಾತೂ ಕೂಡ ಪ್ರಾಮುಖ್ಯತೆ ಪಡೆದು ಕೊಂಡಿದೆ. ಹೆಣ್ಣೊಬ್ಬಳಿಗೆ ತಾಯ್ತನ ಎನ್ನುವುದು ಬಹಳ ಮುಖ್ಯವಾದ ಸಂಗತಿ. ಆಕೆ ಗರ್ಭಿಣಿಯಾದ ಸಂದರ್ಭದಲ್ಲಿ ಆರೋಗ್ಯದ ಕಡೆ ಗಮನ ಕೊಡಬೇಕು. ಅದನ್ನು ಬಿಟ್ಟು ಮೂಢನಂಬಿಕೆಗಳಿಗೆ ಸಿಕ್ಕು ತೊಂದರೆ ತಂದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

ಆಸ್ಟ್ರೀಯಾಕ್ಕೆ ಪ್ರವಾಸ ಹೋಗಿದ್ದಾಗ ಟಬ್‌ನಲ್ಲಿ ಸ್ನಾನ ಮಾಡುವ, ಬೀಚ್ ಬಳಿ ಬಿಕಿನಿಯಲ್ಲಿ ನಿಂತಿರುವ ಫೋಟೋಗಳನ್ನು ಇನ್ಸ್ಟಾ'ಗ್ರಾಮ್'ನಲ್ಲಿ ಅಪ್‌ಲೋಡ್ ಮಾಡಿದ್ದು, ಗರ್ಭಿಣಿಯರು ತಮಗೆ ಇಷ್ಟವಾದಂತೆ ಸಂತಸದಿಂದ ಇರಬೇಕು. ಇದಾದಾಗಲೇ ಮಗು ಆರೋಗ್ಯವಾಗಿ ಜನಿಸಲು ಸಾಧ್ಯವಾಗುತ್ತದೆ. ಪೋಟೊಗಳನ್ನು ಆಕೆಯ ಪತಿ ಪೀಟರ್ ಹಾಗ್ ಕ್ಲಿಕ್ಕಿಸಿದ್ದಾರೆ. ಅದೂ ಅಲ್ಲದೇ ಹದವಾಗಿ ಬಿಸಿಯಾದ ನೀರಿನಲ್ಲಿ ಉಲ್ಲಾಸದಿಂದ ಸ್ನಾನ ಮಾಡಿ. ಇದರಿಂದ ದೇಹದಲ್ಲಿ ಉಷ್ಣಾಂಶ ಸಮತೋಲನಕ್ಕೆ ಬರುತ್ತದೆ. ಮಗು ಕೂಡ ಗರ್ಭದ ಒಳಗೆ ಉಲ್ಲಾಸಗೊಳ್ಳುತ್ತದೆ ಎಂದು ತಾಯಂದಿರಿಗೆ ಸಲಹೆ ನೀಡಿದ್ದಾರೆ. ಈ ಮೊದಲು ಅವಳಿ ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಾಗಿದ್ದ ಸೆಲಿನಾ ಜೇಟ್ಲಿ ಈ ಬಾರಿಯೂ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎನ್ನುವ ಸುದ್ದಿಯೂ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿ ಅವರ ಅಭಿಮಾನಿಗಳಲ್ಲಿ ಕಾತರ ಹುಟ್ಟುಹಾಕಿದೆ.

(ಕನ್ನಡಪ್ರಭ ವಾರ್ತೆ)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!