ಹೆಲಿಕಾಪ್ಟರ್ ಶಾಟ್‌ ಹೊಡೆಯುವ ಶ್ವಾನ... ಟಾಯ್ಲೆಟ್‌ಗೆ ಹೋಗಿ ಪ್ಲಶ್ ಮಾಡೋ ಬೆಕ್ಕು :ವೈರಲ್ ವೀಡಿಯೋ

By Suvarna News  |  First Published Sep 15, 2023, 12:06 PM IST

ಪ್ರಾಣಿಗಳೆಂದು ಕರೆಯಲ್ಪಟ್ಟರು ಕೆಲವು ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿಯನ್ನು ಪ್ರದರ್ಶಿಸುತ್ತವೆ.  ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಸಾಕಷ್ಟು ಮುದ್ದಾದ ವೀಡಿಯೋಗಳನ್ನು ನೀವು ಈಗಾಗಲೇ ನೋಡಿರುತ್ತೀರಿ. ಬೇಸರಗೊಂಡ ಮನಸ್ಸುಗಳಿಗೆ ಈ ಪ್ರಾಣಿಗಳ ವೀಡಿಯೋ ಮುದ ನೀಡುತ್ತವೆ. ಇಂತಹ ಕೆಲವು ವೀಡಿಯೋಗಳು ಸಾಕಷ್ಟು ವೈರಲ್ ಆಗಿದ್ದು, ಆ ಕೆಲವು ವೀಡಿಯೋಗಳು ಇಲ್ಲಿವೆ ನೋಡಿ...


ಪ್ರಾಣಿಗಳೆಂದು ಕರೆಯಲ್ಪಟ್ಟರು ಕೆಲವು ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿಯನ್ನು ಪ್ರದರ್ಶಿಸುತ್ತವೆ.  ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಸಾಕಷ್ಟು ಮುದ್ದಾದ ವೀಡಿಯೋಗಳನ್ನು ನೀವು ಈಗಾಗಲೇ ನೋಡಿರುತ್ತೀರಿ. ಬೇಸರಗೊಂಡ ಮನಸ್ಸುಗಳಿಗೆ ಈ ಪ್ರಾಣಿಗಳ ವೀಡಿಯೋ ಮುದ ನೀಡುತ್ತವೆ. ಇಂತಹ ಕೆಲವು ವೀಡಿಯೋಗಳು ಸಾಕಷ್ಟು ವೈರಲ್ ಆಗಿದ್ದು, ಆ ಕೆಲವು ವೀಡಿಯೋಗಳು ಇಲ್ಲಿವೆ ನೋಡಿ...

ಶ್ವಾನದ ಹೆಲಿಕಾಪ್ಟರ್ ಶಾಟ್‌

Tap to resize

Latest Videos

ನಾಯಿ ಬೆಕ್ಕುಗಳು ಬಾಲ್‌ ಎತ್ತಿಕೊಂಡು ಹೋಗಿ ಆಟವಾಡುವುದನ್ನು ನೀವು ನೋಡಿರಬಹುದು. ಮಕ್ಕಳು ಆಡುವಾಗ ಈ ಶ್ವಾನಗಳು ಜೊತೆಯಲ್ಲೇ ಆಟವಾಡುತ್ತಾ ಮಕ್ಕಳು ಬ್ಯಾಟ್ ಬೀಸಿದರೆ ದೂರ ಚಿಮ್ಮಿದ ಬಾಲ್ ತರಲು ಓಡುವ ವೀಡಿಯೋಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಶ್ವಾನ ತಾನೇ ಬ್ಯಾಟಿಂಗ್‌ಗೆ ನಿಂತಿದೆ. ಬಾಯಲ್ಲಿ ಬ್ಯಾಟ್ ಹಿಡಿದು ಇದು ಶ್ವಾನ ಹೊಡೆಯುವ ಹೆಲಿಕಾಪ್ಟರ್‌ ಶಾಟ್‌ಗೆ (helicopter shot) ನೆಟ್ಟಿಗರು ಫಿದಾ ಆಗಿರುವುದಲ್ಲೇ, ಹಲವು ಕ್ರಿಕೆಟಿಗರ ನೆನಪು ಮಾಡುತ್ತಿದೆ ಈ ಶ್ವಾನ...  ಮಾಲೀಕ ಬೌಲಿಂಗ್ ಮಾಡ್ತಿದ್ರೆ ಒಂದು ಬಾಲ್ ಕೂಡ ಮಿಸ್ ಮಾಡದೇ ಸಖತ್ ಆಗಿ ಬ್ಯಾಟಿಂಗ್ ಮಾಡುತ್ತಿದೆ ಈ ಶ್ವಾನ. ಹಳೆ  ವೀಡಿಯೋ ಇದಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ನೆಟ್ಟಿಗರು ಶ್ವಾನವನ್ನು ಭಾರತ ಕ್ರಿಕೆಟ್ ಟೀಂಗೆ (India Cricket Team) ಸೇರಿಸುವಂತೆ ಮನವಿ ಮಾಡಿದ್ದಾರೆ. ಮತ್ತೆ ಕೆಲವರು ಇಲ್ಲಿ ಪಾಕಿಸ್ತಾನವನ್ನು ಅಣಕಿಸಿದ್ದು, ವಾಹ್ ಎಂಥಾ ಶಾಟ್ ಇದು, ಈ ನಾಯಿಯಂತೆ ಪಾಕಿಸ್ತಾನದವರಿಗೂ ಆಡಲಾಗದು ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಇದು ಭಾರತದ ಜ್ಯೂನಿಯರ್ ವಿರಾಟ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್ ಪ್ರಿಯರಿಗೆ ಈ ಶ್ವಾನದ ವೀಡಿಯೋ ರಸದೌತಣ ನೀಡಿದೆ. 

 

ಮಾಲೀಕನಿಗೂ ಮೊದಲೇ ಸೈಕಲ್ ಏರೋ ಶ್ವಾನ

ಶ್ವಾನದ ಬುದ್ಧಿವಂತಿಕೆ ತೋರಿಸುವ ಮತ್ತೊಂದು ವೀಡಿಯೋ ಇಲ್ಲಿದೆ. ಶ್ವಾನಗಳು ಮನುಷ್ಯನ ಬೆಸ್ಟ್ ಫ್ರೆಂಡ್ (Best friend) ಎಂಬುವುದರಲ್ಲಿ ಎರಡು ಮಾತಿಲ್ಲ, ಅದೇ ರೀತಿ ಹೋಗುವಲ್ಲೆಲ್ಲಾ ಇಲ್ಲೊಬ್ಬ ಶ್ವಾನದ ಮಾಲೀಕ ತನ್ನ ಶ್ವಾನವನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಹೋಗುವ ವೀಡಿಯೋವಿದೆ. ಆದರಲ್ಲೇನು ವಿಶೇಷ ಅಂತ ಕೇಳ್ತೀರಾ? ಈ ಶ್ವಾನ ಮಾಲೀಕನಿಗೂ ಮೊದಲೇ ಸೈಕಲ್ ಏರಿ (Cycle raid)ಬಿಡುತ್ತೆ. ಸೈಕಲ್‌ನ ಹಿಂದಿನ ಸೀಟು ಈ ಪ್ರೀತಿಯ ಶ್ವಾನಕ್ಕೆ ಮೀಸಲಾಗಿದ್ದು,  ಮಾರ್ಕೆಟ್‌ಗೆ ಮಾಲೀಕನೊಂದಿಗೆ ಸೈಕಲ್ ಏರುವ ಶ್ವಾನ ಅಲ್ಲೆಲ್ಲಾ ಆತನೊಂದಿಗೆ ತಿರುಗಾಡಿ ಇನ್ನೇನು ಮನೆಗೆ ಹೋಗಬೇಕು ಎನ್ನುವಾಗ ಸೀದಾ ಬಂದು ಮಾಲೀಕನಿಗಿಂತಲೂ ಮೊದಲೇ ಶ್ವಾನ ಸೈಕಲ್ ಏರಿ ಕುಳಿತುಕೊಳ್ಳುವ ಸ್ಟೈಲ್ ಸೋಜಿಗ ಮೂಡಿಸುತ್ತಿದೆ. ಶ್ವಾನ ಹಾಗೂ ಮಾಲೀಕನ ನಡುವಿನ ಈ ಪ್ರೀತಿ ನಂಬಿಕೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಾರಿಯಲ್ಲಿ ಹೋಗುವವರೆಲ್ಲಾ ಈ ಶ್ವಾನ ಹಾಗೂ ಮಾಲೀಕನನ್ನೇ ನೋಡುತ್ತಾ ಮುಂದೆ ಸಾಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಸೋನುಗೌಡನಿಂದ ಪ್ರೇರಿತರಾದ ಸ್ಕೂಲ್ ಗರ್ಲ್ಸ್‌: ಬೆನ್ನು ಹುಡಿ ಹಾರಿಸಿದ ಅಮ್ಮ: ವೈರಲ್ ವೀಡಿಯೋ

 

ಟಾಯ್ಲೆಟ್‌ಗೆ ಹೋಗಿ ಪ್ಲಶ್ ಮಾಡುವ ಬೆಕ್ಕು

ಮುನುಷ್ಯರೇ ಕೆಲವೊಮ್ಮೆ ಟಾಯ್ಲೆಟ್‌ಗೆ (Toilet) ಹೋದರೆ ಪ್ಲಶ್ ಮಾಡದೇ ಬಂದು ಬೇರೆಯವರು ವಾಕರಿಕೆ ಮಾಡುವಂತೆ ಮಾಡುತ್ತಾರೆ. ಆದರೆ ಇಲ್ಲೊಂದು ಬೆಕ್ಕು ಮಲ ವಿಸರ್ಜನೆಗಾಗಿ ಟಾಯ್ಲೆಟ್‌ಗೆ ಹೋಗಿ ಟಾಯ್ಲೆಟ್‌ನಲ್ಲೇ ಕುಳಿತು ಮಾಡುವುದಲ್ಲದೇ ನಂತರ ಪ್ಲಶ್‌ ಕೂಡ ಮಾಡುತ್ತದೆ. ಸಾಮಾನ್ಯವಾಗಿ ಬೆಕ್ಕುಗಳು ಟಾಯ್ಲೆಟ್ ಮಾಡಿದ ನಂತರ ಅವುಗಳನ್ನು ಮುಚ್ಚುವ ಅಭ್ಯಾಸವನ್ನು ಹೊಂದಿರುತ್ತವೆ. ಹೀಗಾಗಿ ಬಹುತೇಕ ಬೆಕ್ಕುಗಳು ಮಲ ವಿಸರ್ಜನೆಗೆ ಬಯಲನ್ನು ಹೊರಾಂಗಣವನ್ನು ಆಯ್ಕೆ ಮಾಡುತ್ತವೆ. ಆದರೆ ಕಾಲಕ್ಕೆ ತಕ್ಕಂತೆ ಕೋಲ ಎಂಬಂತೆ ಇಲ್ಲಿ ಬೆಕ್ಕೊಂದು ಟಾಯ್ಲೆಟ್‌ಗೆ ಹೋಗಿ ಪ್ಲಶ್‌ ಕೂಡ ಮಾಡುತ್ತಿದೆ. ಇದು ಪ್ರಾಣಿಗಳು ಕೂಡ ಎಷ್ಟು ಬುದ್ಧಿವಂತಿಕೆಯನ್ನು ಹೊಂದಿವೆ ಎಂಬುದನ್ನು ತೋರಿಸುತ್ತದೆ. ಇದೊಂದು ಅಕ್ಷರಸ್ಥ ಬೆಕ್ಕು ಎಂದು ಬರೆದು ನಾಹೀದ್ ಎಂಬ ಇನ್ಸ್ಟಾ ಪೇಜ್‌ನಿಂದ ವೀಡಿಯೋ ಪೋಸ್ಟ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ನೀವು ಟಾಯ್ಲೆಟ್‌ಗೂ ಕ್ಯಾಮರಾ ತೆಗೆದುಕೊಂಡು ಹೋಗಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.  ಆ ಬೆಕ್ಕಿಗೂ (Cat) ಸ್ವಲ್ಪ ಪ್ರೈವೆಸಿ ನೀಡಿ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. 

ಆಮೆಗೆ ಮುತ್ತಿಕ್ಕುವ ಚಿಟ್ಟೆಯ ಹಿಂಡು: ಈ ವಿಸ್ಮಯದ ಹಿಂದಿದೆ ವಿಶೇಷ: ವೀಡಿಯೋ ವೈರಲ್

 

click me!