
ಫ್ರಾನ್ಸ್ (ಮೇ.20): ಕಾನ್ ಫಿಲ್ಮ್ ಫೆಸ್ಟಿವಲ್ 2017 ರಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಶ್ವ ಸುಂದರಿ ಐಶ್ವರ್ಯ ಎಲ್ಲರ ಹೃದಯ ಕದ್ದಿದ್ದಾಳೆ. ಫ್ರಾನ್ಸ್ನಲ್ಲಿ ನಡೆಯುತ್ತಿರೋ ಈ ಫೆಸ್ಟಿವಲ್ನಲ್ಲಿ ರೆಡ್ ಕಾರ್ಪೆಟ್ ಮೇಲೆ ಬಣ್ಣ ಬಣ್ಣದ ಫ್ಯಾಷನ್ಡಿಸೈನರ್ ಗೌನ್ಗಳನ್ನ ಧರಿಸಿ ಐಶು ರಸಿಕರ ಹೃದಯ ಕದ್ದಿದ್ದಾಳೆ.
43 ವರ್ಷದ ಐಶ್ವರ್ಯ ರೈ ಬಚ್ಚನ್ ಮಗಳು ಆರಾದ್ಯ ಜೊತೆಗೂಡಿ ಈ ವರ್ಷವೂ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ್ದಾರೆ. ಮಾರ್ಕ್ ಬಮ್ ಮಾರ್ಗರ್ ಡಿಸೈನ್ ಮಾಡಿರೋ ಗೌನ್ಸ್ ಧರಿಸಿದ ಐಶು ಮೊದಲ ದಿನ ಗ್ರೀನ್ ಕಲರ್ ಫ್ಲೋರಲ್ ಗೌನ್ ಧರಿಸಿ ಫಿಂಕ್ ಲಿಪ್ಸ್ಟಿಕ್ನಲ್ಲಿ ಬಾರ್ಬಿಯಂತೆ ಮಿಂಚಿದರು.
ಎರಡನೇ ದಿನ ಕ್ರೀಮ್ ಕಲರ್ ಗೌನ್ ಡಾರ್ಕ್ ಮರೂನ್ ಕಲರ್ ಲಿಪ್ಸ್ಟಿಕ್ನಲ್ಲಿ ಮತ್ತೆ ಮಾದಕ ಲುಕ್ನಲ್ಲಿ ಸೆಳೆದರು. ಮೂರನೇ ದಿನವಂತೂ ಐಶ್ವರ್ಯ ಈಗಲೂ ಅದೆಷ್ಟು ಸುಂದರಿ ಅನ್ನೋದನ್ನ ಹೇಳುತ್ತಿತ್ತು ಆ ಲುಕ್ ಮತ್ತು ಸ್ಟೈಲ್. ಕ್ವೀನ್ ಆಫ್ ಬಾಲಿವುಡ್ ಐಶ್ವರ್ಯ ಸಿಂಡ್ರೆಲ್ಲಾ ಗೌನ್ ಹಾಕಿ ರೆಡ್ಕಾರ್ಪೆಟ್ಮೇಲೆ ನಡೆದಾಡಿದ್ದರು. ಎಲ್ಲರ ಕಣ್ಣು ಕುಕ್ಕುವಂಥಾ ಲೈಟ್ ಪರ್ಪಲ್ ಕಲರ್ ಗೌನಲ್ಲಿ ಕಾಣಿಸಿಕೊಂಡ ಐಶು ಎಲ್ಲರಿಗಿಂತ ಬೆಸ್ಟ್ ಲುಕ್ ಎನ್ನಿಸಿತ್ತು. ಐಶ್ವರ್ಯ ಸದ್ಯ ಮನೆ,ಮಗಳು,ಗಂಡನ ಬಗ್ಗೆ ಗಮನ ಹರಿಸುತ್ತಿದ್ದು ಸಿನಿಮಾ ಆಯ್ಕೆಯಲ್ಲಿ ಬಹಳ ಚ್ಯೂಸಿ ಆಗಿದ್ದಾರೆ. ಏನಾದ್ರೂ ಐಶು ಕಾನ್ ಫಿಲ್ಮ್ ಫೆಸ್ಟಿವಲ್ನ ಸೆಂಟರ್ ಆಪ್ ಅಟ್ರ್ಯಾಕ್ಷನ್ ಆಗಿದ್ದಂತೂ ನಿಜ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.