
ಬಾಲಿವುಡ್ ನಟಿ ಸ್ವರಾ ಭಾಸ್ಕರ್.. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎದುರಿಸಿದ ಕರಾಳ ಹಾಗೂ ಆಘಾತಕಾರಿ ಅನುಭವ ಒಂದನ್ನು ಬಹಿರಂಗಪಡಿಸಿದ್ದಾರೆ. ಯಶಸ್ವಿ ಚಿತ್ರ ʼತನು ವೆಡ್ಸ್ ಮನುʼ (2011) ಬಿಡುಗಡೆಯಾದ ಬೆನ್ನಲ್ಲೇ.. ನಿರ್ದೇಶಕರೊಬ್ಬರು ತಮಗೆ ನೀಡಿದ ಕಿರುಕುಳ ಹಾಗೂ ಮಧ್ಯರಾತ್ರಿ ರೂಮಿಗೆ ಬಂದು ಅಸಭ್ಯವಾಗಿ ವರ್ತಿಸಿದ ಘಟನೆಯನ್ನು Swara Bhaskar ನೆನಪಿಸಿಕೊಂಡಿದ್ದಾರೆ.
'ರೈಸ್ ಆ್ಯಂಡ್ ಫಾಲ್ ಸೀಸನ್ 2' (rise and fall season 2) ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ಚಾಹರ್ ಚೌಧರಿ ಹಾಗೂ ರಾಜಕಾರಣಿ ತೇಜ್ ಪ್ರತಾಪ್ ಯಾದವ್ ಜೊತೆ ಮಾತನಾಡಿದರು. ತನು ವೆಡ್ಸ್ ಮನು ಸಿನಿಮಾದ ಬಳಿಕ ನಾಯಕಿಯಾಗಿ 56 ದಿನಗಳ ಕಾಲ್‌ಶೀಟ್‌ನ ದೊಡ್ಡ ಚಿತ್ರವೊಂದಕ್ಕೆ ಒಪ್ಪಿಕೊಂಡಿದ್ದೆ. ಆ ನಿರ್ದೇಶಕ 'ನಿರ್ದೇಶಕರು ತಮ್ಮ ನಟ-ನಟಿಯರನ್ನು ಪ್ರೀತಿಸಬೇಕು' ಎಂದು ಹೇಳುತ್ತಿದ್ದ. ನಂತರ ನನ್ನ ಸೌಂದರ್ಯವನ್ನು ಹೊಗಳಿ ಕವನಗಳ ಮೂಲಕ ಮೆಸೇಜ್ ಶುರುಮಾಡಿದ್ದ. ನಾನದನ್ನು ವಿನಮ್ರವಾಗಿಯೇ ನಿಭಾಯಿಸುತ್ತಿದ್ದೆ ಎಂದಿದ್ದಾರೆ.
ಸಿನಿಮಾದ ರೊಮ್ಯಾಂಟಿಕ್ ದೃಶ್ಯ ಒಂದರ ರಿಹರ್ಸಲ್ ವೇಳೆ ಆತನ ಅಸಲಿ ಮುಖ ಬಯಲಾಗಿತ್ತು. ದೃಶ್ಯದ ರಿಹರ್ಸಲ್‌ಗೆ ಯಾರಿದ್ದಾರೆ ಎಂದು ಕೇಳಿದೆ. ಅದಕ್ಕಾತ ನೀನು, ನಾನು ಇಬ್ಬರೇ ಕುಳಿತು ಚರ್ಚಿಸೋಣ ಎಂದ. ನಾನು ತಕ್ಷಣ ವಿರೋಧಿಸಿ.. ರಿಹರ್ಸಲ್ ಎಂದ್ಮೇಲೆ ನಾಯಕ ನಟ ಹಾಗೂ ಕ್ಯಾಮೆರಾಮನ್ ಇರಬೇಕಲ್ಲವೇ? ನಾವಿಬ್ಬರೇ ಏಕೆ ಏಕಾಂತವಾಗಿ ಮಾಡಬೇಕು? ಎಂದು ನಿರಾಕರಿಸಿದೆ ಎಂದು ಸ್ವರಾ ಹೇಳಿದ್ದಾರೆ.
ಅದೇ ದಿನ ಅವರು ತಂಗಿದ್ದ ಗೆಸ್ಟ್‌ಹೌಸ್‌ಗೆ ಹೋದೆ. ನಿರ್ದೇಶಕ ಹಾಗೂ ಛಾಯಾಗ್ರಾಹಕ ಇಬ್ಬರೂ ಮದ್ಯಪಾನ ಮಾಡುತ್ತಾ ಕುಳಿತಿದ್ದರು. ಆಗಿನ್ನೂ ಇಪ್ಪತ್ತರ ಹರೆಯದಲ್ಲಿದ್ದ ಸ್ವರಾ.. ಇಬ್ಬರು ಕುಡುಕರ ಮಧ್ಯೆ ಕುಳಿತು ದೃಶ್ಯ ಚರ್ಚಿಸುವುದು ಸುರಕ್ಷಿತವಲ್ಲ ಎಂದು ಅರಿತು ತಪ್ಪಿಸಿಕೊಂಡು ಓಡಿ ಹೋಗಿ ರೂಮ್ ಸೇರಿದ್ದೆ. ಆದರೆ ನನ್ನ ಸಂಕಷ್ಟ ಅಲ್ಲಿಗೆ ಮುಗಿಯಲಿಲ್ಲ. ಅರ್ಧರಾತ್ರಿಯಲ್ಲಿ ಆ ನಿರ್ದೇಶಕ ಕಂಠಪೂರ್ತಿ ಕುಡಿದು ಬಂದು ನನ್ನ ಕೋಣೆಯ ಬಾಗಿಲು ಬಡಿದ. ಎಲ್ಲಿ ಬಾಗಿಲು ಮುರಿಯುತ್ತಾನೋ ಎಂಬ ನನಗೆ ಇತ್ತು. ಅನಿವಾರ್ಯವಾಗಿ ಬಾಗಿಲು ತೆರೆದಾಗ ಪಾನಮತ್ತನಾಗಿದ್ದ ನನ್ನನ್ನು ತಬ್ಬಿಕೊಳ್ತೀಯಾ ಎಂದು ಕೇಳಿದ್ದ. ಆಗ ನಾನು ಗಾಬರಿಯಾದೆ. ಖಂಡಿತ ಇಲ್ಲ, ಸರ್ ದಯವಿಟ್ಟು ಇಲ್ಲಿಂದ ಹೋಗಿ. ನನಗೆ ಭಯವಾಗುತ್ತಿದೆ ಎಂದೆ. ನಂತರ ನಾನು ಬಾಗಿಲು ಹಾಕಿಕೊಂಡೆ ಎಂದು ಕರಾಳ ದಿನವನ್ನ ಬಿಚ್ಚಿಟ್ಟಿದ್ದಾರೆ.
ಚಿತ್ರರಂಗದಲ್ಲಿ ಅಧಿಕಾರ ಹಾಗೂ ಸ್ಥಾನಮಾನ ಬಳಸಿಕೊಂಡು ಹಿರಿಯ ವ್ಯಕ್ತಿಗಳು ಹೊಸಬರ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ ಎಂಬುದನ್ನು ಸ್ವರಾ ಭಾಸ್ಕರ್ ಇದೇ ವೇಳೆ ವಿವರಿಸಿದ್ದಾರೆ. ಅವನು ಆ ಚಿತ್ರದ ನಿರ್ದೇಶಕ, ನಾನೊಬ್ಬ ಯುವ ನಟಿ. ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುವ ಯುವ ಕಲಾವಿದರು ಇಂತಹ ನಿರ್ದೇಶಕರು ಮತ್ತು ನಿರ್ಮಾಪಕರ ಮುಂದೆ ಎಷ್ಟು ಅಸಹಾಯಕರಾಗುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಂಝಣಾ, ವೀರೆ ದಿ ವೆಡ್ಡಿಂಗ್, ನಿಲ್ ಬಟ್ಟೆ ಸನ್ನಾಟಾ ಮೊದಲಾದ ಸಿನಿಮಾಗಳ ಮೂಲಕ ಗಮನಸೆಳೆದಿರುವ ಸ್ವರಾ ಭಾಸ್ಕರ್.. 2023ರಲ್ಲಿ ರಾಜಕಾರಣಿ ಫಹಾದ್ ಅಹ್ಮದ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ರಾಬಿಯಾ ಎಂಬ ಮುದ್ದಾದ ಹೆಣ್ಣು ಮಗು ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.