ಹುಟ್ಟುಹಬ್ಬ ಖುಷಿಯಲ್ಲಿ ದರ್ಶನ್‌ ನೆನೆದು ರಚಿತಾ ರಾಮ್ ಭಾವುಕ, ಜೈಲಲ್ಲಿ ಭೇಟಿಗೆ ಅವಕಾಶ ಸಿಗದಿದ್ದಕ್ಕೆ ತೀವ್ರ ಬೇಸರ

Published : Oct 03, 2026, 10:13 AM IST
Rachita ram darshan thoogudeepa

ಸಾರಾಂಶ

ಹುಟ್ಟಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್‌ ಅವರು ಜೈಲಲ್ಲಿ ಇರುವ ನಟ ದರ್ಶನ್‌ ಅವರನ್ನು ಸ್ಮರಿಸಿದ್ದಾರೆ. ದರ್ಶನ್‌ ಅವರ ಬಗ್ಗೆ ರಚಿತಾ ರಾಮ್‌ ಆಡಿರುವ ಭಾವುಕ ಮಾತುಗಳು ಈ ಸ್ಟೋರಿಯಲ್ಲಿದೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ವಿಶೇಷ ಅಂದ್ರೆ ಈ ಬಾರಿ ಅವರು ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಂಡರು. 14 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ರಚಿತಾ, ಈ ಬಾರಿಯ ಜನ್ಮದಿನದ ವೇಳೆ ನಟ ದರ್ಶನ್ ಅವರನ್ನು ನೆನೆದು ವೇದಿಕೆಯಲ್ಲೇ ಕಣ್ಣೀರಿಟ್ಟರು.

ದರ್ಶನ್‌ ಭೇಟಿಗೆ ಅವಕಾಶ ಸಿಗದಿದ್ದಕ್ಕೆ ಬೇಸರ

ತಮ್ಮ ಚೊಚ್ಚಲ ಚಿತ್ರ ಬುಲ್‌ಬುಲ್ ನ ನಾಯಕ ಹಾಗೂ ಸದಾ ಬೆನ್ನೆಲುಬಾಗಿ ನಿಂತಿದ್ದ ನಟ ದರ್ಶನ್ ಅವರು ಸದ್ಯ ಜೈಲಲ್ಲಿ ಇದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಅವರು ಪರಪ್ಪನ ಅಗ್ರಹಾರ ಜೈಲಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರ ಪ್ರಸ್ತುತ ಸ್ಥಿತಿ ನೆನೆದು ರಚಿತಾ ರಾಮ್ ತೀವ್ರ ಭಾವುಕರಾದರು. ಜನ್ಮದಿನದ ಮುನ್ನಾದಿನ ದರ್ಶನ್ ಆಶೀರ್ವಾದ ಪಡೆಯಲು ಜೈಲಿಗೆ ತೆರಳಿದ್ದ ಘಟನೆಯನ್ನು ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದ ಅಂಗವಾಗಿ ದರ್ಶನ್ ಸರ್ ಆಶೀರ್ವಾದ ಪಡೆಯಲು ಮೊನ್ನೆಯಷ್ಟೇ ಹೋಗಿದ್ದೆ. ಜೈಲಿನ ನಿಯಮದಂತೆ ವಾರದಲ್ಲಿ ಕೇವಲ ಎರಡು ಭೇಟಿಗಳಿಗೆ ಮಾತ್ರ ಅವಕಾಶವಿರುತ್ತದೆ. ಅಂದು ಅವರ ಕುಟುಂಬಸ್ಥರು ಭೇಟಿಯಾಗುವವರಿದ್ದ ಕಾರಣ.. ನನಗೆ ಭೇಟಿ ಆಗಲು ಅವಕಾಶ ಸಿಗಲಿಲ್ಲ. ಸುಮಾರು ಎರಡುವರೆ ಗಂಟೆಗಳ ಕಾಲ ಕಾದರೂ ಅವರನ್ನು ಕಾಣಲಾಗದೆ ಭಾರವಾದ ಹೃದಯದಿಂದಲೇ ವಾಪಸ್ ಬರಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಮುಂದುವರಿದು.. ಅಂದು ಭೇಟಿ ಸಾಧ್ಯವಾಗದಿದ್ದರೂ ಅವರ ಆಶೀರ್ವಾದ ಹಾಗೂ ಪ್ರೀತಿ ಸದಾ ನನ್ನ ಮೇಲಿದೆ ಎಂಬ ನಂಬಿಕೆ ನನಗಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮತ್ತೊಮ್ಮೆ ಹೋಗಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೇ ಪಡೆಯುತ್ತೇನೆ ಎಂದು ದರ್ಶನ್ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಅಭಿಮಾನಿಗಳಿಗೆ ರಚ್ಚು ಸಂದೇಶ

ಮಧ್ಯರಾತ್ರಿಯಿಂದಲೇ ಮನೆ ಮುಂದೆ ಜಮಾಯಿಸಿದ್ದ ನೂರಾರು ಅಭಿಮಾನಿಗಳ ಪ್ರೀತಿಯನ್ನು ಕಂಡು ರಚಿತಾ ರಾಮ್ ಭಾವುಕರಾದರು. ಇಷ್ಟೊಂದು ಸಂಖ್ಯೆಯಲ್ಲಿ ಬಂದು ನನ್ನ ಮೇಲೆ ಅಭಿಮಾನ, ಪ್ರೀತಿ ತೋರಿಸುತ್ತಿರುವ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನೀವೆಲ್ಲರೂ ನಮ್ಮ ಕುಟುಂಬದ ಪರವಾಗಿ ಹೇಗೆ ಕೂಗುತ್ತಿದ್ದೀರೋ, ಅದೇ ರೀತಿ ನಿಮಗಾಗಿ ನಾನು ಸದಾ ಧ್ವನಿಯಾಗಿರುತ್ತೇನೆ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದರು.

ಇದೇ ಸಂದರ್ಭದಲ್ಲಿ ನೆರೆದಿದ್ದ ಯುವ ಸಮೂಹ ಹಾಗೂ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ರಚಿತಾ, ಜೀವನದಲ್ಲಿ ಎಲ್ಲರೂ ಒಳ್ಳೆಯದನ್ನೇ ಮಾಡಿ. ಯಾರೂ ಯಾರಿಗೂ ಕೆಟ್ಟದ್ದನ್ನು ಬಯಸಬೇಡಿ ಅಥವಾ ಮಾಡಬೇಡಿ. ದೇವರು ನಮಗೆ ಕೊಟ್ಟಿರೋದು ಒಂದೇ ಜೀವನ, ಅದನ್ನು ಪ್ರೀತಿಯಿಂದ ಅನುಭವಿಸಿ, ಸಂತೋಷವಾಗಿ ಎಂಜಾಯ್ ಮಾಡಿ. ಒಳ್ಳೆಯ ಸನ್ಮಾರ್ಗದಲ್ಲಿ ನಡೆದು ದುಡ್ಡು ಸಂಪಾದಿಸಿ. ನಿಮ್ಮ ಕೈಲಾದಷ್ಟು ಕಷ್ಟದಲ್ಲಿರುವವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿ ಎಂದು ಕರೆ ನೀಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! ಆಮೇಲೆ 'ಡಿಂಪಲ್ ಕ್ವೀನ್' ಕೊಟ್ಟ ರಿಯಾಕ್ಷನ್ ಹೇಗಿತ್ತು ಗೊತ್ತಾ?
ನಾದಿನಿಯರಿಗಾಗಿ ಪತ್ನಿ ಮಾಡಿದ ಕೆಲಸಕ್ಕೆ ಚಿರಂಜೀವಿ ಹೆಮ್ಮೆ: ಮೆಗಾ ಕುಟುಂಬದ ಈ ಕಥೆ ಸಖತ್ ಇಂಟರೆಸ್ಟಿಂಗ್