ಶ್ರೀದೇವಿ ಕೊನೆ ಆಸೆ ಈಡೇರಿಸುತ್ತಿದ್ದಾರೆ ಪತಿ ಬೋನಿ!

By Web Desk  |  First Published Jan 29, 2019, 4:31 PM IST

2018ರಲ್ಲಿ ನಮ್ಮನ್ನಗಲಿದ ಎವರ್‌ಗ್ರೀನ್ ನಟಿ ಶ್ರೀದೇವಿಯ ಕೊನೆಯ ಕನಸೊಂದು ಹಾಗೆ ಉಳಿದಿತ್ತು. ಅದನ್ನು 2019ರಲ್ಲಿ ನನಸು ಮಾಡುತ್ತಿದ್ದಾರೆ ಪತಿ ಬೋನಿ ಕಪೂರ್.


ಬೋನಿ ಕಪೂರ್ ಶ್ರೀದೇವಿಗೆ ಕೊಟ್ಟ ಮಾತೊಂದನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಅದೇನು ಗೊತ್ತಾ?

ಬೋನಿ ಕಪೂರ್‌ ತಮಿಳು ನಟ ಅಜಿತ್ ಕುಮಾರ್ ಜೊತೆ ಪ್ರಾಜೆಕ್ಟ್‌ವೊಂದನ್ನು ಮಾಡಬೇಕೆಂದು ಶ್ರೀದೇವಿ ಕೇಳಿಕೊಂಡಿದ್ದರಂತೆ. ಆದರೆ, ಕೈಯಲ್ಲಿ ಯಾವ ಕಥೆಯೂ ಇಲ್ಲದ ಕಾರಣ ಮೌನಕ್ಕೆ ಶರಣಾಗಿದ್ದರು. ಶ್ರೀದೇವಿ ಆಶಯವನ್ನು ಈಡೇರಿಸಲು ಅಜಿತ್ ತಾವೇ ಪ್ಲಾನ್‌ವೊಂದನ್ನು ಹಿಡಿದು, ಮುಂದೆ ಬಂದಿದ್ದಾರೆ. ಅದುವೇ ಬಾಲಿವುಡ್ ಖ್ಯಾತ ನಟ ಅಮಿತಾಬಚ್ಚನ್ ಅಭಿನಯದ ಚಿತ್ರ ಪಿಂಕ್ ತಮಿಳಿನಲ್ಲಿ ರಿಮೇಕ್ ಮಾಡುವುದು. ಇದನ್ನು ಕೇಳಿದಾಕ್ಷಣ ಓಕೆ ಅಂದಿದ್ದರು ಎವರ್‌ಗ್ರೀನ್ ನಟಿ ಶ್ರೀದೇವಿ. ಆದರೆ, ಕೆಲವು ದಿನಗಳ ನಂತರ ನಮ್ಮನ್ನೆಲ್ಲ ಅಗಲಿದರು. ಆ ಕಾರಣದಿಂದ ಕನಸು ಹಾಗೆಯೇ ಉಳಿದಿತ್ತು.

Tap to resize

Latest Videos

ತಮಿಳಿನ ಅಜಿತ್‌ಗೆ u-Turn ಹೊಡೆದ ಸ್ಯಾಂಡಲ್‌ವುಡ್ ನಟಿ!

ಇದೀಗ ಶ್ರೀದೇವಿ ಓಕೆ ಎಂದಿದ್ದ ಪ್ರಾಜೆಕ್ಟ್‌ ಅನ್ನು ಬೋನಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಸಂತೋಷದ ವಿಚಾರವನ್ನು ಬೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ತಮಿಳು ಜನತೆಗೆ ವಿದ್ಯಾ ಬಾಲನ್ ಅವರನ್ನು ಪಿಂಕ್ ಚಿತ್ರದ ಮೂಲಕ ನಿಮ್ಮೆಲ್ಲರ ಮುಂದೆ ತರಲು ಬಯಸುತ್ತೇನೆ. ಇದರ ಜೊತೆ ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ರಾಜೇಂದ್ರ ಪಾಂಡೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ,’ ಎಂದು ತಿಳಿಸಿದ್ದಾರೆ.

ತಮಿಳಿನ ‘English Vinglish’ ಚಿತ್ರದಲ್ಲಿ ಶ್ರೀದೇವಿಯೊಂದಿಗೆ ಅಜಿತ್ ನಟಿಸಿದ್ದರು. ಆಗಲೇ ಅಜಿತ್ ತಮ್ಮ ಹೋಮ್ ಪ್ರೊಡಕ್ಷನ್‌ನಲ್ಲಿ ಚಿತ್ರ ಮಾಡಲು ಕೇಳಿಕೊಂಡಿದ್ದರಂತೆ.

click me!