ವೈರಲ್ ಆಯ್ತು ಸನ್ನಿಯ ಬ್ರಾಲೆಸ್ ಕ್ಯಾಲೆಂಡರ್ ಫೋಟೋ!

Published : Jan 29, 2019, 03:40 PM IST
ವೈರಲ್ ಆಯ್ತು ಸನ್ನಿಯ ಬ್ರಾಲೆಸ್ ಕ್ಯಾಲೆಂಡರ್ ಫೋಟೋ!

ಸಾರಾಂಶ

ದಾದೂ ರಥ್ನಾನಿ ಕ್ಯಾಲೆಂಡರ್‌ನಲ್ಲಿ ಸನ್ನಿಯ ಬ್ರಾಲೆಸ್ ಕವರ್ ಫೋಟೋ ಇದ್ದು, ಇದು ಎಲ್ಲೆಡೆ ವೈರಲ್ ಆಗುತ್ತಿದೆ.

ಸೆಲೆಬ್ರಿಟಿ ಫೋಟೋಗ್ರಾಫರ್ ದಾದೂ ರಥ್ನಾನಿ 2019ರ ಕ್ಯಾಲೆಂಡರ್ ಲಾಂಚ್ ಮಾಡಿದ್ದಾರೆ. ಈ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್‌ಗಳಾದ ಕಿಯಾರಾ ಅಡ್ವಾನಿ, ಟೈಗರ್ ಶ್ರಾಫ್, ಫರಾನ್ ಅಖ್ತರ್ ಹಾಗೂ ಸನ್ನಿ ಭಾಗಿಯಾಗಿದ್ದರು.

ಕಾರ್ಯಕ್ರಮಕ್ಕೆ ಬಂದಿದ್ದ ಸನ್ನಿ ವೈಟ್ ಶರ್ಟ್ ಹಾಗೂ ಸಿಲ್ವರ್ ಸ್ಕರ್ಟ್ ಧರಿಸಿ ಹಾಟ್‌ಲುಕ್‌ನಲ್ಲಿ, ಎಲ್ಲರೂ ಕಣ್ಣು ಬಾಯಿ ಬಿಟ್ಟುಕೊಂಡು ನೋಡುವಂತೆ ಕಾಣುತ್ತಿದ್ದರು. ಇದಕ್ಕಿಂತಲೂ ಕ್ಯಾಲೆಂಡರ್‌ನಲ್ಲಿ ಸನ್ನಿಯ ಫೋಟೋವೊಂದು ಇದ್ದು, ಎಲ್ಲರ ನಿದ್ದೆಗೆಡುವಂತೆ ಮಾಡಿದೆ.

ಸನ್ನಿ ಬ್ಯಾಗ್‌ ಸೀಕ್ರೇಟ್ ಬಹಿರಂಗ! ಅಷ್ಟಕ್ಕೂ ಅದರಲ್ಲಿ ಏನಿರುತ್ತೆ?

ಬಿಡುಗಡೆಯಾದ ಕ್ಯಾಲೆಂಡರ್‌ನಲ್ಲಿರುವ ಫೋಟೋವೊಂದನ್ನು ಸನ್ನಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ‘ಇಯರ್ ಇಟ್ ಈಸ್, ಲವ್ ಮೈ ಶೂಟ್ ಇನ್ 2019 #DabbooRatnaniCalendar’ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದಾರೆ. ಮೇಕಪ್ ಮಾಡಿರುವುದು ಥಾಮಸ್ ಹಾಗು ವಸ್ತ್ರ ವಿನ್ಯಾಸ ಮಾಡಿರುವುದು ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರಾವಂತೆ.

 

ಮಲಯಾಳಂ ಚಿತ್ರದಲ್ಲಿ ಮೆಗಾಸ್ಟಾರ್ ಮುಮ್ಮಟಿಯೊಂದಿಗೆ ಸನ್ನಿ ಅಭಿನಯಿಸುತ್ತಿದ್ದು, ‘ಮಧುರ ರಾಜ’ ಎಂಬ ಹೆಸರಿನ ಈ ಚಿತ್ರದ ಶೂಟಿಂಗ್‌ನಲ್ಲಿ ಈ ಬಾಲಿವುಡ್ ಬೆಡಗಿ ಈಗ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬ್ರೇಕಪ್‌ ಆಗಿದ್ದೇ ಆಗಿದ್ದು, 'ಭಾಯಿಜಾನ್' Salman Khan ಇನ್ನೊಂದು ಮುಖ ಬಟಾ ಬಯಲು ಮಾಡಿದ್ದ Aishwarya Rai
Jagapathi Babu: ಮೊದಲ 3 ದಿನ ಬೇಕಂತಲೇ 'ಪೆದ್ದಿ' ಬಗ್ಗೆ ನೆಗೆಟಿವಿಟಿ ಹಬ್ಬಿಸಿದ್ರು: ಜಗಪತಿ ಬಾಬು ಶಾಕಿಂಗ್ ಆರೋಪ