ದರ್ಶನ್‌ ಸಂಬಂಧಿ ಮನೋಜ್‌ ಚಿತ್ರಕ್ಕೆ ಬಾಲಿವುಡ್‌ ಮಾಡೆಲ್‌!

Published : Aug 26, 2019, 09:08 AM IST
ದರ್ಶನ್‌ ಸಂಬಂಧಿ ಮನೋಜ್‌ ಚಿತ್ರಕ್ಕೆ ಬಾಲಿವುಡ್‌ ಮಾಡೆಲ್‌!

ಸಾರಾಂಶ

ಬಾಲಿವುಡ್‌ ಬ್ಯೂಟಿ ಸಾಕ್ಷಿ ಮಲಿಕ್‌ ಕನ್ನಡಕ್ಕೆ ಬರುತ್ತಿದ್ದಾರೆ. ದರ್ಶನ್‌ ಸಂಬಂಧಿ ಮನೋಜ್‌ ಅಭಿನಯದ ಎರಡನೇ ಚಿತ್ರಕ್ಕೆ ಸಾಕ್ಷಿ ಮಲಿಕ್‌ ಅವರನ್ನು ನಾಯಕಿಯನ್ನಾಗಿ ತರುವ ಪ್ರಯತ್ನ ನಡೆದಿದೆ.

ಮನೋಜ್‌ ಅಭಿನಯದ ಚೊಚ್ಚಲ ಚಿತ್ರ‘ಟಕ್ಕರ್‌’ ರಿಲೀಸ್‌ಗೆ ರೆಡಿ ಆಗಿದೆ. ಆ ಚಿತ್ರ ಹೊರಬರುತ್ತಿದ್ದಂತೆ ಎರಡನೇ ಚಿತ್ರ ಸೆಟ್ಟೇರುವುದು ಗ್ಯಾರಂಟಿ ಆಗಿದೆ. ಆ ಹೊತ್ತಿಗೆ ಸಾಕ್ಷಿ ಮಲಿಕ್‌ ಆಯ್ಕೆ ಬಹುತೇಕ ಫೈನಲ್‌ ಆಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು. ಈ ಚಿತ್ರವನ್ನು ‘ಹುಲಿರಾಯ’ ಖ್ಯಾತಿಯ ಕೋಗಿಲು ನಾಗೇಶ್‌ ನಿರ್ಮಿಸುತ್ತಿದ್ದಾರೆ.

ರವಿಚಂದ್ರನ್‌ ಮಗನ ಟೀಸರ್‌ಗೆ ದರ್ಶನ್‌ ವಾಯ್ಸ್

ಬಾಲಿವುಡ್‌ ಬ್ಯೂಟಿ ಸಾಕ್ಷಿ ಮಲಿಕ್‌ ಮಾಡೆಲ್‌ ಕಮ್‌ ನಟಿ. ಹುಟ್ಟಿಬೆಳೆದಿದ್ದೆಲ್ಲ ದೆಹಲಿಯಾದರೂ ಆ್ಯಕ್ಟಿಂಗ್‌ ಕರಿಯರ್‌ ಅರಸಿ ಬಂದಿದ್ದು ಮುಂಬೈಗೆ. ‘ಸೋನು ಕೆ ಟಿಟು ಸ್ವೀಟಿ’ ಹೆಸರಿನ ಚೊಚ್ಚಲ ಚಿತ್ರದ ಮೂಲಕವೇ ಬಾಲಿವುಡ್‌ನಲ್ಲಿ ಸಿನಿಪ್ರಿಯರ ಮನಗೆದ್ದ ಚೆಲುವೆ.

‘ಸೋನು ಕೆ ಟಿಟು ಸ್ವೀಟಿ’ ಚಿತ್ರದಲ್ಲಿನ ಡಿಗ್ಗಿ ಡಿಗ್ಗಿ ಬಾಮ್‌ ಹಾಡಿಗೆ ಸಖತ್‌ ಮೈ ಬಳುಸಿಕಿದ್ದು ದೊಡ್ಡ ಸುದ್ದಿ ಆಗಿತ್ತು. ಈ ಹಾಡಿನ ವಿಡಿಯೋ ವೈರಲ್‌ ಆಗಿದ್ದು ಮಾತ್ರವಲ್ಲ, ಟ್ರೋಲ್‌ಗಳಲ್ಲಿ ಸಾಕ್ಷಿ ಮಲಿಕ್‌ ರಾತ್ರೋರಾತ್ರಿ ಜನಪ್ರಿಯತೆ ಪಡೆದಿದ್ದರು. ಇಂತಿಪ್ಪಾ ನಟಿ ಮೇಲೆ ಈಗ ಸ್ಯಾಂಡಲ್‌ವುಡ್‌ ನಿರ್ದೇಶಕರ ಕಣ್ಣು ಬಿದ್ದಿದೆ. ಮನೋಜ್‌ ಸಿನಿಮಾಕ್ಕೆ ಅವರನ್ನೇ ನಾಯಕಿಯನ್ನಾಗಿ ತರಲು ಹೊರಟಿದೆ ಚಿತ್ರತಂಡ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!