
ಸದ್ದಿಲ್ಲದೆ ನಿರ್ಮಾಪಕ ಕೆ ಮುಂಜು ಅವರು ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ಇವರ ಪುತ್ರ ಶ್ರೇಯಸ್ ಕೆ ಮಂಜು ನಟನೆಯ ಎರಡನೇ ಚಿತ್ರಕ್ಕೆ ಪ್ರಿಯಾ ವಾರಿಯರ್ ನಾಯಕಿ ಆಗುತ್ತಿರುವುದಾಗಿ ನಿರ್ಮಾಪಕ ಕೆ ಮಂಜು ಅವರೇ ಖಚಿತಪಡಿಸಿದ್ದಾರೆ.
ವಿಜಯ್ ದೇವರಕೊಂಡ ಮೇಲೆ ಪ್ರಿಯಾ ವಾರಿಯರ್‌ಗೆ ಸಿಕ್ಕಾಪಟ್ಟೆ ಲವ್ವಾಗಿದೆ!
ನಮ್ಮ ಚಿತ್ರದ ಕತೆಗೆ ಸೂಕ್ತವಾಗುವ ನಟಿ ಪ್ರಿಯಾ ವಾರಿಯರ್. ಕತೆ ಕೇಳಿ ಇಷ್ಟಪಟ್ಟು ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಇಲ್ಲಿ ವಿಷ್ಣು ಅನ್ನೋದು ನಾಯಕನ ಹೆಸರು. ಪ್ರಿಯಾ ಅನ್ನೋದು ನಾಯಕಿ ಹೆಸರು. ನಾಯಕ- ನಾಯಕಿಯ ಕ್ಯಾರೆಕ್ಟರ್‌ಗಳ ಹೆಸರನ್ನೇ ಚಿತ್ರದ ಶೀರ್ಷಿಕೆಯನ್ನಾಗಿಸಿದ್ದೇವೆ. ಸೆಪ್ಟಂಬರ್ ತಿಂಗಳಲ್ಲಿ ಚಿತ್ರೀಕರಣ ನಡೆಯಲಿದೆ. ಒಂದು ನೈಜ ಘಟನೆಯ ಸುತ್ತ ಸಾಗುವ ಪ್ರೇಮ ಕತೆ ಇದು. - ಕೆ ಮಂಜು, ನಿರ್ಮಾಪಕ
ಇವರೊಂದಿಗೆ ಕಿಸ್ ಮಿಸ್ ಮಾಡ್ಕೊಂಡು ಬೇಸರಿಸಿಕೊಂಡ್ರಾ ಪ್ರಿಯಾ ವಾರಿಯರ್?
ಅಂದಹಾಗೆ ಪ್ರಿಯಾ ವಾರಿಯರ್ ನಾಯಕಿ ಆಗುತ್ತಿರುವುದು ‘ವಿಷ್ಣುಪ್ರಿಯ’ ಚಿತ್ರಕ್ಕೆ. ಶ್ರೇಯಸ್ ಅವರು ‘ಪಡ್ಡೆಹುಲಿ’ ಚಿತ್ರದ ನಂತರ ನಟಿಸುತ್ತಿರುವ ಸಿನಿಮಾ. ಪ್ರಸಿದ್ಧ ನಿರ್ದೇಶಕ ವಿ ಕೆ ಪ್ರಕಾಶ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.