
ಬಾಲಿವುಡ್ ಡಿವಾ ದೀಪಿಕಾ ಪಡುಕೋಣೆ ಮೋಸ್ಟ್ ಸ್ಟೈಲಿಶ್ ವುಮೆನ್. ಅವರು ಹಾಕುವ ಡ್ರೆಸ್, ಮೇಕಪ್, ಬ್ಯಾಗ್, ಚಪ್ಪಲಿ ಎಲ್ಲದರಲ್ಲಿಯೂ ಪರ್ಫೆಕ್ಟ್.
ಯಾವಾಗಲೂ ಮದುವೆ, ಸಿನಿಮಾ, ಸೋಷಿಯಲ್ ಸರ್ವೀಸ್ ಮೂಲಕ ಸುದ್ದಿಯಲ್ಲಿರುವ ದೀಪಿಕಾ ಪಡುಕೋಣೆ ಈಗ ಬ್ಯಾಗ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ದೀಪಿಕಾ ಇತ್ತೀಚಿಗೆ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಕೈಯಲ್ಲಿದ್ದ ಬ್ಯಾಗ್ ಗಮನ ಸೆಳೆದಿದೆ.
ಕಂದು ಬಣ್ಣದ ಬ್ಯಾಗ್ ಇದಾಗಿದ್ದು ಇದರ ಬೆಲೆ ಬರೋಬ್ಬರಿ 1,22, 860 ರೂ. ಅಂತದ್ದೇನಿದೆ ಈ ಬ್ಯಾಗ್ ನಲ್ಲಿ ದೀಪಿಕಾನೇ ಹೇಳ್ಬೇಕಪ್ಪ! ಈ ದುಡ್ಡಲ್ಲಿ ಬಡವರಿಗೆ ಒಂದು ಮನೆಯನ್ನೇ ಕಟ್ಟಿಸಿಕೊಡ್ಬೋದಪ್ಪಾ!
ಇಷ್ಟೊಂದು ದುಬಾರಿ ಬೆಲೆಯ ಬ್ಯಾಗ್ ನಲ್ಲಿ ಅಂತದ್ದೇನಿರುತ್ತೆ? ಏನೆಲ್ಲಾ ಇಟ್ಟುಕೊಂಡಿರುತ್ತಾರೆ? ಬ್ಯಾಗ್ ಯಾಕೆ ಯಾವಾಗಲೂ ದೊಡ್ಡದಾಗಿರುತ್ತದೆ ಎನ್ನುವುದಕ್ಕೆ ಅವರೇ ಉತ್ತರಿಸಿದ್ದಾರೆ.
ಅದು ಏನು ಗೊತ್ತಾ? ದೇಶದ ಯಾವ ಮರುಳುಗಾಡು ಪ್ರದೇಶಕ್ಕೆ ಹೊದರೂ ಜೀವಿಸಬಹುದಾದ ವಸ್ತುಗಳು ದೀಪಿಕಾ ಬ್ಯಾಗಲ್ಲಿ ಇರುತ್ತಂತೆ. ಆ ಕಾರಣದಿಂದಾನೇ ಬ್ಯಾಗ್ ಅಷ್ಟು ಭಾರವಿರುತ್ತದೆ. ಅದ್ರಲ್ಲಿ
ಏನೇನಿರುತ್ತೆ?
ವಾಲೆಟ್ (ಪರ್ಸ್)
ಬಾಯಿ ಫ್ರೆಷ್ ಮಾಡಿಕೊಳ್ಳಲು ಮಿಂಟೋಸ್
ಫೋನ್ ಚಾರ್ಜರ್
ಬಾಚಣಿಗೆ
ಸನ್‌ಗ್ಲಾಸ್
ಹೇರ್ ಸ್ಪ್ರೇ
ಟಿಶ್ಯೂ ಪೇಪರ್
ಐ ಮಾಸ್ಕ್
ಟ್ಯಾಂಪೂನ್
ಅಗತ್ಯ ಮಾತ್ರೆಗಳು
ನೇಲ್ ಪಾಲಿಷ್ ರಿಮೂವರ್
ಟೈಡ್
ವೆಟ್‌ವೈಪ್
ಲೆನ್ಸ್ ಕ್ಲೀನರ್
ಸೇಫ್ಟಿ ಪಿನ್ಸ್
ಸ್ಟೆಪ್ಸಿಲ್ಸ್
ಮೋಸ್ಟ್ ಇಂಪಾರ್ಟೆಂಟ್ ಮನೆ ಬೀಗ
ಪೆನ್ಸಿಲ್.
ಪೆನ್
ಪರ್ಫ್ಯೂಮ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.