ಸ್ಯಾಂಡಲ್‌ವುಡ್‌ಗೆ ಸಿಡಿಲಾಗಿ ಬಂದ 'ಒಡೆಯ'ನಿಗೆ ದಾರಿಬಿಡಿ; ಟೈಟಲ್‌ ಟ್ರ್ಯಾಕ್‌ ಸೂಪರ್!

Published : Nov 08, 2019, 11:32 AM IST
ಸ್ಯಾಂಡಲ್‌ವುಡ್‌ಗೆ ಸಿಡಿಲಾಗಿ ಬಂದ 'ಒಡೆಯ'ನಿಗೆ ದಾರಿಬಿಡಿ; ಟೈಟಲ್‌ ಟ್ರ್ಯಾಕ್‌ ಸೂಪರ್!

ಸಾರಾಂಶ

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಒಡೆಯ' ಚಿತ್ರದ ಟೈಟಲ್ ಟ್ರ್ಯಾಕ್‌ ಇಂದು ಆನಂದ್ ಆಡಿಯೋ ಯೂಟ್ಯೂಬ್‌ ಖಾತೆಯಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಲಕ್ಷಗಟ್ಟಲೇ ಹಿಟ್ ಗಿಟ್ಟಿಸಿಕೊಂಡಿದೆ.

ಸ್ಯಾಂಡಲ್‌ವುಡ್‌ ಬಹು ನಿರೀಕ್ಷಿತ ಚಿತ್ರ 'ಒಡೆಯ' ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದೆ. 'ಹೇ ಒಡೆಯಾ, ಬಾ ಒಡೆಯಾ ಸಿಡಿಲಿವನು ದಾರಿ ಬಿಡಿ ಗುಡುಗಿವನು ದಾರಿ ಬಿಡಿ ಭಯವಾದ್ರೆ ಊರು ಬಿಡಿ ಬಂದಿದೆ ಬೆಂಕಿ ಕಿಡಿ' ಎಂದು ದರ್ಶನ್‌ನನ್ನು ವರ್ಣನೆ ಮಾಡುವ ಹಾಡು ಅಭಿಮಾನಿಗಳ ಗಮನ ಸೆಳೆದಿದೆ.

ಒಡೆಯನ ನಾಯಕಿ ಆಗಲು ದರ್ಶನ್ ಅಮ್ಮ ಕಾರಣ: ಸನ ತಿಮ್ಮಯ್ಯ!

ದರ್ಶನ್ ಸಿನಿಮಾ ಅಂದ್ರೆನೇ ಹಾಗೆ ಏನೇ ಮಾಡಿದ್ರೂ ಸಿಕ್ಕಾಪಟ್ಟೆ ಸೌಂಡ್‌ ಆಗುತ್ತದೆ. ಪೋಸ್ಟರ್, ಟೀಸರ್, ಟ್ರೈಲರ್ ಈಗ ಟೈಟಲ್ ಟ್ರ್ಯಾಕ್. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಧ್ವನಿಯಾಗಿ ವ್ಯಾಸರಾಜ್‌ ಹಾಗೂ ಸಂಗೀತ ನಿರ್ದೇಶಕನಾಗಿ ಅರ್ಜುನ್ ಜನ್ಯಾ ಸಾಥ್ ನೀಡಿದ್ದಾರೆ.

ಅಧಿಕಾರನೂ ನನ್ನದೇ, ಆಜ್ಞೆಯೂ ನಂದೇ: ಶುರುವಾಯ್ತು 'ಒಡೆಯ'ನ ಅಬ್ಬರ!

ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಚಿತ್ರ ಸಧ್ಯದಲ್ಲೇ ತೆರೆಕಾಣಲಿದೆ. ಇನ್ನು ಚಿತ್ರದ ನಾಯಕಿ ಸನಾ ತಿಮ್ಮಯ್ಯ ನಾಯಕಿ ಆಗಿದ್ದೇ ದರ್ಶನ್ ತಾಯಿಯಿಂದ. ಹೌದು! ದರ್ಶನ್ ತಾಯಿ ಹಾಗೂ ಸನ ತಾಯಿ ಇಬ್ಬರು ಸ್ನೇಹಿತರು. ಸನ ನಟಿಯಾಗಬೇಕೆಂದು ಕಂಡ ಆಸೆಗೆ ದರ್ಶನ್ ಚಿತ್ರ ಅವಕಾಶ ನೀಡಿತು.

ಅಷ್ಟೇ ಅಲ್ಲದೆ 'ನಾನು ಅಧಿಕಾರವನ್ನು ಬಯಸಿ ಪಡೆದವನಲ್ಲ. ಅಧಿಕಾರವೇ ನನ್ನ ಆಸೆ ಪಟ್ಟು ಇಲ್ಲಿಗೆ ಕರೆಸಿಕೊಂಡಿದೆ. ಇನ್ನು ಮುಂದೆ ಅಧಿಕಾರವೂ ನನ್ನದೇ. ಆಜ್ಞೆಯೂ ನನ್ನದೇ' ಎಂದು ಟೀಸರ್‌ನಲ್ಲಿ ಹೇಳಿದ ಡೈಲಾಗಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!