
ಬಾಲಿವುಡ್ ಸ್ಲಿಮ್ ಬೆಡಗಿ ಶಿಲ್ಪಾ ಶೆಟ್ಟಿ 45 ದಾಟಿದರೂ ಇನ್ನೂ ಫಿಟ್ ನೆಸ್ ಕಾಪಾಡಿಕೊಂಡಿದ್ದಾರೆ. ಆಗಾಗ ಅಭಿಮಾನಿಗಳಿಗೆ, ಫಾಲೋವರ್ಸ್ ಗೆ ಫಿಟ್ನೆಸ್ ಟಿಪ್ಸ್ ಕೊಡುತ್ತಿರುತ್ತಾರೆ. ಹೇಗೆಲ್ಲಾ ವರ್ಕೌಟ್ ಮಾಡಬೇಕು? ಏನೆಲ್ಲಾ ಮಾಡಬೇಕು ಎಂದೆಲ್ಲಾ ಸಲಹೆ ನೀಡುತ್ತಿರುತ್ತಾರೆ. ಫಿಟ್ ನೆಸ್ ಗಾಗಿ ಏನೆಲ್ಲಾ ಮಾಡುವ ಶಿಲ್ಪಾ ಶೆಟ್ಟಿಗೆ ಇದೊಂದು ಮಾತ್ರ ಕಷ್ಟವಂತೆ!
ಶಿಲ್ಪಾ ನಾಚಿ ನೀರಾದಾಗ ಮರ್ಲಿನ್ ಮನ್ರೋಗಿಂತ ಸುಂದರ ಕಂಡಾಗ..
‘ನನಗೆ ಈಜಲು ಸಾಧ್ಯವಾಗುತ್ತಿಲ್ಲ’ ಎಂದು ಅಭಿಮಾನಿಗಳಲ್ಲಿ ಕನ್ಫೆಸ್ ಮಾಡಿದ್ದಾರೆ.
ನಾನು ಪ್ರಾಮಾಣಿಕವಾಗಿ ಕನ್ಫೆಸ್ ಮಾಡುತ್ತಿದ್ದೇನೆ. ನಾನು ಸಾಕಷ್ಟು ಬಾರಿ ಕಲಿಯಲು ಪ್ರಯತ್ನಿಸಿದರೂ ಸ್ವಿಮ್ ಮಾಡುವುದನ್ನು ಕಲಿಯಲು ಸಾಧ್ಯವಾಗುತ್ತಿಲ್ಲ. ಮೊದಲ ಬಾರಿಗೆ ಬೇರೆಯವರ ಸಹಾಯದಿಂದ ತೇಲಲು ಸಾಧ್ಯವಾಯ್ತು. ಈ ದಿನವನ್ನು ಮರೆಯಲು ಸಾಧ್ಯವಿಲ್ಲ ಎಂದು ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಆಗಸ್ಟ್‌ನಲ್ಲಿ ಶಿಲ್ಪಾ ಶೆಟ್ಟಿ ಕೊಡ್ತಾರೆ ಗುಡ್ ನ್ಯೂಸ್!
ಲಂಡನ್ ಹಾಗೂ ಗ್ರೀಸ್ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಶಿಲ್ಪಾ ಶೆಟ್ಟಿ ಆಗಸ್ಟ್ ಮೊದಲ ವಾರ ಮುಂಬೈಗೆ ಹಿಂತಿರುಗಲಿದ್ದಾರೆ. ವಾಪಸ್ಸಾದ ಬಳಿಕ ಆಸೀಸ್ ಮಿರ್ಜಾ ಸಿನಿಮಾದ ಮೂಲಕ ಬಾಲಿವುಡ್ ಗೆ ವಾಪಸ್ಸಾಗಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.