'ನನ್ನ ಬೋಲ್ಡ್ ವಿಡಿಯೋಗಳೂ ಸಾಮಾಜಿಕ ಸೇವೆಯೇ': ನಟಿ ಪೂನಂ ಪಾಂಡೆ ಶಾಕಿಂಗ್ ಕಾಮೆಂಟ್ಸ್ ವೈರಲ್

Published : Sep 05, 2026, 06:24 PM IST
Poonam Pandey

ಸಾರಾಂಶ

‘ನನ್ನ ಬೋಲ್ಡ್ ವಿಡಿಯೋಗಳೂ ದೇಶ ಸೇವೆಯೇ’ ಎಂದು ಪೂನಂ ಪಾಂಡೆ ಹೇಳಿದ್ದು, ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ನಟಿಯ ಕಾಮೆಂಟ್ಸ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ.

ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾ*ಚಾರ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ನಿರಂತರವಾಗಿ ಸುದ್ದಿಯಾಗುತ್ತಿವೆ. ಈ ವಿಚಾರಗಳ ಬಗ್ಗೆ ಆಗಾಗ್ಗೆ ನಡೆಯುವ ಚರ್ಚೆಗಳು ಹಾಗೂ ಕೆಲವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗುತ್ತಿರುತ್ತವೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಪೂನಂ ಪಾಂಡೆ ಮಾಡಿರುವ ಕೆಲವು ಸಂಚಲನಕಾರಿ ಕಾಮೆಂಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ನಟಿಯ ವಿಭಿನ್ನ ಸಲಹೆ!

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾ*ಚಾರ ಹಾಗೂ ಹ*ತ್ಯೆ ಪ್ರಕರಣಗಳು ಹೆಚ್ಚಾಗಿ ಸುದ್ದಿಯಾಗುತ್ತಿವೆ. ಇಂತಹ ಘಟನೆಗಳಿಗೆ ಕಾರಣಗಳೇನು ಎಂಬ ವಿಚಾರದಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಲೇ ಇವೆ. ಈ ನಡುವೆ ಬಾಲಿವುಡ್ ನಟಿ ಪೂನಂ ಪಾಂಡೆ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಕುರಿತು ವಿಭಿನ್ನ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂದು ಅವರು ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

‘ನನ್ನ ಬೋಲ್ಡ್ ವಿಡಿಯೋಗಳೂ ದೇಶ ಸೇವೆಯೇ’ ಎಂದ ಪೂನಂ!

ಪೂನಂ ಪಾಂಡೆ ತಮ್ಮ ಬೋಲ್ಡ್ ಹಾಗೂ ಅಡಲ್ಟ್ ಕಂಟೆಂಟ್‌ನಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೋಗಳಿಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತವೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅವರನ್ನು ಟ್ರೋಲ್ ಮಾಡುತ್ತಿರುತ್ತಾರೆ.

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಪೂನಂ ಪಾಂಡೆ, ತಮ್ಮ ಅಡಲ್ಟ್ ಕಂಟೆಂಟ್‌ ಅನ್ನು ‘ದೇಶ ಸೇವೆ’ಗೆ ಹೋಲಿಸಿರುವುದು ಅಚ್ಚರಿ ಮೂಡಿಸಿದೆ. ಅವರ ಪ್ರಕಾರ, ಸಾಕಷ್ಟು ಪುರುಷರು ತೀವ್ರ ಒತ್ತಡ ಮತ್ತು ನಿರಾಶೆಯಲ್ಲಿ ಬದುಕುತ್ತಿದ್ದಾರೆ. ಅಂತಹವರು ತಮ್ಮ ಬೋಲ್ಡ್ ವಿಡಿಯೋಗಳು ಅಥವಾ ಇಂತಹ ಕಂಟೆಂಟ್‌ಗಳನ್ನು ವೀಕ್ಷಿಸುವ ಮೂಲಕ ಸ್ವಲ್ಪ ಮಟ್ಟಿಗೆ ಒತ್ತಡದಿಂದ ಹೊರಬರಬಹುದು ಎಂದು ಅವರು ಹೇಳಿದ್ದಾರೆ.

ವೇಶ್ಯಾವಾಟಿಕೆ ಕಾನೂನುಬದ್ಧವಾದರೆ ಅಪರಾಧ ಕಡಿಮೆಯಾಗುತ್ತಾ?

ಭಾರತದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಅಪರಾಧಗಳ ಪ್ರಮಾಣ ಕಡಿಮೆಯಾಗಬಹುದು ಎಂಬ ಅಭಿಪ್ರಾಯವನ್ನೂ ಪೂನಂ ಪಾಂಡೆ ವ್ಯಕ್ತಪಡಿಸಿದ್ದಾರೆ. ತಮ್ಮ ವಿಡಿಯೋಗಳನ್ನು ವೀಕ್ಷಿಸುವುದರಿಂದ ಕೆಲವರು ಒತ್ತಡದಿಂದ ಹೊರಬರುತ್ತಾರೆ ಎಂದಿರುವ ಅವರು, “ಇದರಲ್ಲಿ ತಪ್ಪೇನು?” ಎಂಬ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮನ್ನು ಟ್ರೋಲ್ ಮಾಡುವವರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸೆಲೆಬ್ರಿಟಿಗಳ ವಿರುದ್ಧವೂ ಪೂನಂ ಪಾಂಡೆ ಕಿಡಿ!

ಕೆಲವರು ಸೆಲೆಬ್ರಿಟಿಗಳು ಒಳಗೆ ಬೇರೆ ರೀತಿಯ ಜೀವನ ನಡೆಸುತ್ತಾ, ಹೊರಗೆ ಮಾತ್ರ ತುಂಬಾ ಸಭ್ಯರು ಮತ್ತು ಹೈ-ಪ್ರೊಫೈಲ್ ವ್ಯಕ್ತಿಗಳಂತೆ ವರ್ತಿಸುತ್ತಾರೆ ಎಂದು ಪೂನಂ ಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ದ್ವಂದ್ವ ವರ್ತನೆ ಹೊಂದಿರುವವರನ್ನು ನೋಡಿದಾಗ ತನಗೆ ಕೋಪ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಪೂನಂ ಪಾಂಡೆ ಅವರ ಈ ಹೇಳಿಕೆಗಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಅವರ ಹೇಳಿಕೆಗಳನ್ನು ತೀವ್ರವಾಗಿ ಟೀಕಿಸುತ್ತಿದ್ದರೆ, ಮತ್ತಷ್ಟು ಮಂದಿ “ಪೂನಂ ಪಾಂಡೆ ಹೇಳುತ್ತಿರುವುದೇನು ಎಂಬುದು ಅವರಿಗೆ ಗೊತ್ತಿದೆಯೇ?” ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನು ಕೆಲವರು ಇಂತಹ ಹೇಳಿಕೆಗಳು ಭಾರತೀಯ ಕುಟುಂಬ ವ್ಯವಸ್ಥೆ ಮತ್ತು ಸಂಸ್ಕೃತಿಗೆ ಧಕ್ಕೆ ತರುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಪೂನಂ ಪಾಂಡೆ ಅವರ ಈ ಸಂಚಲನಕಾರಿ ಕಾಮೆಂಟ್ಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Shravani Subramanya: ಎಲ್ಲರ ಮನ ಕದ್ದ ಕಾಂತಮ್ಮ ದಿಢೀರ್​ ಲೈವ್​ನಲ್ಲಿ ಪ್ರತ್ಯಕ್ಷ: ಗುಡ್​ನ್ಯೂಸ್​ ಕೊಟ್ಟ ನಟಿ
ಬಿಗ್ ಬಾಸ್ ಪ್ರೋಮೋದಲ್ಲಿ ಮಿಂಚಿದ 'ಸೌಂದರ್ಯ' ಬೆಡಗಿ! ಯಾರು ಅಂತಾ ಗೊತ್ತಾಯ್ತಾ?