ಚೆಕ್‌ ಬೌನ್ಸ್‌ ಕೇಸ್; ನಟಿಗೆ 6 ತಿಂಗಳು ಜೈಲು!

Published : Jul 22, 2019, 01:06 PM ISTUpdated : Jul 22, 2019, 02:02 PM IST
ಚೆಕ್‌ ಬೌನ್ಸ್‌ ಕೇಸ್; ನಟಿಗೆ 6 ತಿಂಗಳು ಜೈಲು!

ಸಾರಾಂಶ

ನಟಿ ಕೊಯ್ನಾ ಮಿತ್ರಾ ಸ್ನೇಹಿತೆಯಿಂದ 22 ಲಕ್ಷ ರೂ. ಸಾಲ ಪಡೆದಿದ್ದು ಸಾಲ ತೀರಿಸಲು ನೀಡಿದ ಚೆಕ್‌ ಬೌನ್ಸ್‌ ಆಗಿದ್ದು ಈ ಹಿನ್ನಲೆಯಲ್ಲಿ ಮೆಟ್ರೋ ಪಾಲಿಟನ್ ಕೋರ್ಟ್ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

‘ಮುಸಾಫಿರ್’ ಚಿತ್ರದ ನಟಿ ಕೊಯ್ನಾ ಮಿತ್ರಾ ಸ್ನೇಹಿತೆ ಮಾಡೆಲ್ ಪೂನಮ್ ಸೇಥಿ ಬಳಿ 22 ಲಕ್ಷ ಸಾಲ ಪಡೆದಿದ್ದು 19 ಲಕ್ಷವನ್ನು ತೀರಿಸಿದ್ದಾರೆ. ಉಳಿದ 3 ಲಕ್ಷಕ್ಕೆ ಚೆಕ್‌ ನೀಡಿದ್ದರು ಆದರೆ ಚೆಕ್‌ ಬೌನ್ಸ್ ಆದ ಕಾರಣ ಕೊಯ್ನಾ ವಿರುದ್ಧ 2013 ರಲ್ಲಿ ದೂರು ದಾಖಲಾಗಿತ್ತು. ಉಳಿದ 3 ಲಕ್ಷಕ್ಕೆ 1.64 ರೂ ಲಕ್ಷ ಬಡ್ಡಿ ಬೆಳೆದಿದ್ದು ಒಟ್ಟು 4.64 ರೂ ಮೊತ್ತ ನೀಡಬೇಕಿದೆ.

ನಟಿ ಮೇಲೆ ಅತ್ಯಾಚಾರ ಆರೋಪ; ನಟನಿಗೆ ತಾತ್ಕಾಲಿಕ ರಿಲೀಫ್!

ಈ ಹಿಂದೆ ಕೋರ್ಟ್ ವಿಚಾರಣೆ ವೇಳೆ, ಪೂನಮ್ ಗೆ ಹಣದ ಅವಶ್ಯಕತೆ ಇದ್ದ ಕಾರಣ ನನ್ನ ಚೆಕ್‌ ಬುಕ್ಕನ್ನು ಕದ್ದಿದ್ದಾರೆ. ಈಗ ಇಂತಹ ಆರೋಪ ಮಾಡುತ್ತಿದ್ದಾರೆ. ಯಾವುದೇ ಸಾಕ್ಷಿ ಇಲ್ಲದ ಕಾರಣ ಕೋರ್ಟ್ ಇದನ್ನು ನಿರಾಕರಿಸಿತ್ತು. ದಿನದಿಂದ ದಿನಕ್ಕೆ ಮುಂದೂಡಿದ ವಿಚಾರಣೆ ಕೊನೆ ದಿನ ತೀರ್ಪಿನಂದು ಕೊಯ್ನಾ ಪರ ವಕೀಲರು ಬರದ ಕಾರಣ ಕೊಯ್ನಾ ಸಾಬೀತು ಮಾಡುವುದರಲ್ಲಿ ವಿಫಲರಾಗಿದ್ದಾರೆ. ಕೊಯ್ನಾಗೆ ಕೋರ್ಟ್ 6 ತಿಂಗಳು ಜೈಲು ಶಿಕ್ಷೆ ನೀಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ
Bigg Boss: ಮತ್ತೆ ರಕ್ಷಿತಾ ಶೆಟ್ಟಿ, ಗಿಲ್ಲಿ ನಟನನ್ನು ಟಾರ್ಗೆಟ್‌ ಮಾಡಿ ಕುಟುಕಿದ ಕಾವ್ಯ ಶೈವ! ಈ ರೀತಿ ಮಾಡೋದ್ಯಾಕೆ?