ರಾವಣನ ಹತ್ತು ತಲೆಗಳು ಮಾತನಾಡುವ ಆ ದೃಶ್ಯ, ಉಫ್..: ಯಶ್ ನಟನೆಗೆ ಬೆರಗಾದ ಬಾಲಿವುಡ್ ನಟ

Published : Nov 06, 2026, 04:33 PM IST
Yash Ramayana

ಸಾರಾಂಶ

ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ನಟಿಸಿರುವ ಯಶ್ ಅಭಿನಯಕ್ಕೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನಸೋತಿದ್ದಾರೆ. ರಾಕಿಯಿಂದ ರಾವಣನವರೆಗಿನ ಯಶ್ ಅವರ ಸಿನಿ ಪಯಣವನ್ನು ಕೊಂಡಾಡಿರುವ ವಿವೇಕ್..

‘ರಾಮಾಯಣ’ ಸಿನಿಮಾದಲ್ಲಿ ರಾವಣನಾಗಿ ಯಶ್ ನೀಡಿರುವ ಅಭಿನಯಕ್ಕೆ ಪ್ರೇಕ್ಷಕರಿಂದ ಮಾತ್ರವಲ್ಲ, ಚಿತ್ರರಂಗದ ಗಣ್ಯರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಬಾಲಿವುಡ್ ನಟ ಹಾಗೂ ಯಶ್ ಅವರ ಸಹನಟ ವಿವೇಕ್ ಒಬೆರಾಯ್, ರಾವಣನ ಪಾತ್ರದಲ್ಲಿ ಯಶ್ ತೋರಿದ ಅಬ್ಬರಕ್ಕೆ ಮನಸೋತಿದ್ದಾರೆ. ಅದರಲ್ಲೂ ಹತ್ತು ತಲೆಗಳು ಮಾತನಾಡುವ ದೃಶ್ಯವನ್ನು ವಿಶೇಷವಾಗಿ ಹೊಗಳಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ರಾವಣನದ್ದೇ ಹವಾ! ತೆರೆ ಮೇಲೆ ಯಶ್ ಕಾಣಿಸಿಕೊಂಡ ಕ್ಷಣದಿಂದಲೇ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

ಪಾತ್ರದ ಗಾಂಭೀರ್ಯ, ಆಕ್ರಮಣಕಾರಿ ವರ್ತನೆ ಮತ್ತು ರಾಜನ ಖದರ್‌ಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಮೆಚ್ಚುಗೆಯ ಸಾಲಿಗೆ ಈಗ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡ ಸೇರಿದ್ದಾರೆ. ಯಶ್ ಅವರ ಅಭಿನಯವನ್ನು ಮೆಚ್ಚಿಕೊಂಡಿರುವ ವಿವೇಕ್, ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. 'ರಾಕಿ'ಯಿಂದ 'ರಾವಣ'ನವರೆಗಿನ ಯಶ್ ಅವರ ಸಿನಿ ಪಯಣವನ್ನು ನೆನಪಿಸಿಕೊಂಡು ಅಭಿನಂದಿಸಿದ್ದಾರೆ.

'ಹತ್ತು ತಲೆಗಳ ದೃಶ್ಯ ಅದ್ಭುತ!'

ಯಶ್ ಅವರನ್ನು ಸಹೋದರ ಎಂದು ಸಂಬೋಧಿಸಿರುವ ವಿವೇಕ್ ಒಬೆರಾಯ್, ರಾಕಿಯಿಂದ ರಾವಣನವರೆಗಿನ ಅವರ ಬೆಳವಣಿಗೆ ಅದ್ಭುತ ಎಂದು ಬಣ್ಣಿಸಿದ್ದಾರೆ. ರಾವಣನ ಪಾತ್ರಕ್ಕೆ ಯಶ್ ತಂದಿರುವ ವೈಭವ, ಶಕ್ತಿ ಮತ್ತು ಗಾಂಭೀರ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ರಾವಣನ ಹತ್ತು ತಲೆಗಳು ಮಾತನಾಡುವ ದೃಶ್ಯವನ್ನು ಉಲ್ಲೇಖಿಸಿರುವ ಅವರು, ಆ ದೃಶ್ಯ ತೆರೆಯ ಮೇಲೆ ಮೂಡಿಸಿದ ಪ್ರಭಾವ ಅದ್ಭುತ ಎಂದು ಹೇಳಿದ್ದಾರೆ. 'ನಿನ್ನೊಂದಿಗೆ ತೆರೆ ಹಂಚಿಕೊಂಡಿದ್ದು ಅದ್ಭುತ ಅನುಭವ, ಸಹೋದರ' ಎಂಬರ್ಥದಲ್ಲಿ ಯಶ್ ಜೊತೆಗಿನ ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ.

ರಣಬೀರ್ ಕಪೂರ್ ಅವರ ರಾಮನಿಗೂ ವಿವೇಕ್ ಮೆಚ್ಚುಗೆ

ವಿವೇಕ್ ಒಬೆರಾಯ್ ಅವರ ಮೆಚ್ಚುಗೆಯ ಮಾತುಗಳು ಯಶ್‌ಗೆ ಮಾತ್ರ ಸೀಮಿತವಾಗಿಲ್ಲ. ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣಬೀರ್ ಕಪೂರ್ ಅಭಿನಯವನ್ನೂ ಅವರು ವಿಶೇಷವಾಗಿ ಪ್ರಶಂಸಿಸಿದ್ದಾರೆ. ರಣಬೀರ್ ಶ್ರೀರಾಮನ ಪಾತ್ರವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಮತ್ತು ಅನುಮಾನ ಹಲವರಲ್ಲಿತ್ತು. ಆದರೆ ಚಿತ್ರದಲ್ಲಿ ಅವರನ್ನು ನೋಡಿದ ಬಳಿಕ ತೆರೆಯ ಮೇಲೆ ತಮ್ಮ ರಾಮನನ್ನು ಕಂಡ ಅನುಭವವಾಯಿತು ಎಂದು ವಿವೇಕ್ ಬರೆದುಕೊಂಡಿದ್ದಾರೆ. ರಾಮನ ಪಾತ್ರಕ್ಕೆ ರಣಬೀರ್ ತಂದಿರುವ ಸೌಜನ್ಯ, ಘನತೆ ಮತ್ತು ದಿವ್ಯತೆಯನ್ನು ಅವರು ಮೆಚ್ಚಿದ್ದಾರೆ. ವಿಶೇಷವಾಗಿ ದಶರಥನ ನಿಧನದ ಸುದ್ದಿ ತಿಳಿಯುವ ದೃಶ್ಯ ತಮ್ಮ ಕಣ್ಣಲ್ಲಿ ನೀರು ತರಿಸಿತು ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಕ್ಕೂ ಫಿದಾ!

ಸದ್ಯ ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಬಗ್ಗೆಯೂ ವಿವೇಕ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸೀತಾ ಮಾತೆಯ ಪಾತ್ರಕ್ಕೆ ಬೇಕಾದ ಮುಗ್ಧತೆ, ಪರಿಶುದ್ಧತೆ ಮತ್ತು ಸೌಜನ್ಯ ಸಾಯಿ ಪಲ್ಲವಿ ಅವರ ಅಭಿನಯದಲ್ಲಿ ಸುಂದರವಾಗಿ ಮೂಡಿಬಂದಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ಯುದ್ಧದ ಸನ್ನಿವೇಶಗಳಲ್ಲಿ ಅವರ ಚುರುಕುತನ ಕಂಡು ಅಚ್ಚರಿಯಾಯಿತು ಎಂದು ಹೇಳಿರುವ ವಿವೇಕ್, ಸಾಯಿ ಪಲ್ಲವಿ ಅವರನ್ನು 'ಯೋಧ ರಾಜಕುಮಾರಿ' ಎಂದು ಬಣ್ಣಿಸಿದ್ದಾರೆ.

ಯಶ್-ವಿವೇಕ್ ಒಬೆರಾಯ್ ಒಂದೇ ಸಿನಿಮಾದಲ್ಲಿ!

ಇನ್ನು ವಿವೇಕ್ ಒಬೆರಾಯ್ ಮತ್ತು ಯಶ್ ಇಬ್ಬರೂ 'ರಾಮಾಯಣ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಯಶ್ ರಾವಣನಾಗಿ ಕಾಣಿಸಿಕೊಂಡರೆ, ವಿವೇಕ್ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣ ಭಾರತದ ಪ್ರತಿಭಾವಂತ ಕಲಾವಿದರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. 'ರಾಮಾಯಣ' ಚಿತ್ರದ ಬಗ್ಗೆ ಪ್ರೇಕ್ಷಕರ ಚರ್ಚೆ ಜೋರಾಗಿರುವ ಬೆನ್ನಲ್ಲೇ ವಿವೇಕ್ ಒಬೆರಾಯ್ ಅವರ ಈ ಮೆಚ್ಚುಗೆಯ ಪೋಸ್ಟ್ ಯಶ್ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶೂರ್ಪಣಖಿಯ ಬಗ್ಗೆ ರಕುಲ್‌ಗೆ ಈಗ ಗೊತ್ತಾಗಿದ್ದೇನು? ಲಂಕಾಧಿಪತಿ ಯಶ್ ರಹಸ್ಯ ಕೂಡಾ ನಟಿ ಬಿಚ್ಚಿಟ್ರು!
‘ಕಷ್ಟಪಡೆದಿದ್ದರೆ ಈ ಸ್ಥಾನ ಸಿಗ್ತಿರ್ಲಿಲ್ಲ’: ಭೀಮಾತೀರದ ಬಗ್ಗೆ ತಪ್ಪು ತಿಳಿದವರಿಗೆ ‘ಸಿಲ್ಲಿ ಲಲ್ಲಿ’ ಸಂಗಮೇಶ್ ಕೊಟ್ಟ ಕೌಂಟರ್!