
ಮಾಧ್ಯಮಗಳ ವರದಿ ಪ್ರಕಾರ, ರಣಬೀರ್ ಕಪೂರ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 475 ಕೋಟಿ ರೂಪಾಯಿ ಇದೆ. ಬಾಲಿವುಡ್‌ನಲ್ಲಿ 20 ವರ್ಷಗಳಿಂದ ಕೆಲಸ ಮಾಡ್ತಿರೋ ಇವರು, ಹಿಟ್ ಸಿನಿಮಾಗಳು, ಬ್ರ್ಯಾಂಡ್ ಜಾಹೀರಾತುಗಳು ಹಾಗೂ ರಿಯಲ್ ಎಸ್ಟೇಟ್ ಮೂಲಕ ಇಷ್ಟು ಆಸ್ತಿ ಮಾಡಿದ್ದಾರೆ. 'ರಾಕ್‌ಸ್ಟಾರ್', 'ಬರ್ಫಿ', 'ಸಂಜು', 'ಬ್ರಹ್ಮಾಸ್ತ್ರ' ಹಾಗೂ 'ಅನಿಮಲ್' ಸಿನಿಮಾಗಳ ಮೂಲಕ ರಣಬೀರ್ ತಮ್ಮ ತಾಕತ್ತು ತೋರಿಸಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಇರೋ ನಟರ ಪಟ್ಟಿಯಲ್ಲಿ ಇವರೂ ಒಬ್ಬರು. ಮುಂಬೈನಲ್ಲಿ ಐಷಾರಾಮಿ ಮನೆಗಳು ಹಾಗೂ ದುಬಾರಿ ಕಾರುಗಳ ಕಲೆಕ್ಷನ್ ಇವರ ಬಳಿ ಇದೆ. ಈಗ ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರ ಮಾಡೋ ಮೂಲಕ ತಮ್ಮ ಕೆರಿಯರ್‌ನಲ್ಲೇ ಅತಿ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.
ಯಶ್ ಆಸ್ತಿ ಮೌಲ್ಯ: ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಪರಿ
ವರದಿಗಳ ಪ್ರಕಾರ, ಯಶ್ ಅವರ ಆಸ್ತಿ ಮೌಲ್ಯ 50 ರಿಂದ 60 ಕೋಟಿ ರೂಪಾಯಿ ಇದೆ. ಕೆಜಿಎಫ್ ಸರಣಿಯ ಬ್ಲಾಕ್‌ಬಸ್ಟರ್ ಯಶಸ್ಸು, ಈ ಕನ್ನಡದ ಸ್ಟಾರ್ ನಟನನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆಸಿದೆ. 'ಕೆಜಿಎಫ್: ಚಾಪ್ಟರ್ 1' ಯಶ್‌ಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟರೆ, 'ಕೆಜಿಎಫ್: ಚಾಪ್ಟರ್ 2' ಅವರನ್ನು ಬಾಕ್ಸ್ ಆಫೀಸ್ ಸುಲ್ತಾನನನ್ನಾಗಿ ಮಾಡ್ತು.
ಈ ಸಿನಿಮಾಗಳ ಸಕ್ಸಸ್‌ನಿಂದ ಅವರ ಮಾರ್ಕೆಟ್ ವ್ಯಾಲ್ಯೂ ಹೆಚ್ಚಾಯ್ತು, ಜೊತೆಗೆ ದೊಡ್ಡ ಬ್ರ್ಯಾಂಡ್‌ಗಳು ಕೂಡ ಒಲಿದುಬಂದವು. ನಟನೆಯ ಜೊತೆಗೆ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಮೂಲಕ ಯಶ್ ನಿರ್ಮಾಣಕ್ಕೂ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಒಂದು ಐಷಾರಾಮಿ ಡ್ಯುಪ್ಲೆಕ್ಸ್ ಮನೆ ಹಾಗೂ ಹಲವು ದುಬಾರಿ ಕಾರುಗಳು ಇವರ ಬಳಿ ಇವೆ. ಮುಂದಿನ ದಿನಗಳಲ್ಲಿ ಇವರ ಆಸ್ತಿ ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ರಾಮಾಯಣ: ಪಾರ್ಟ್ 1 ರಿಲೀಸ್ ಆಗ್ತಿದ್ದಂತೆ, ಈ ಇಬ್ಬರು ಸ್ಟಾರ್‌ಗಳ ಸಂಭಾವನೆ ಬಗ್ಗೆ ಚರ್ಚೆ ಶುರುವಾಗಿದೆ. ವರದಿಗಳ ಪ್ರಕಾರ, ಈ ಸಿನಿಮಾದ ಎರಡು ಭಾಗಗಳಿಗೆ ರಣಬೀರ್ ಕಪೂರ್ 150 ಕೋಟಿ ರೂ. ಸಂಭಾವನೆ ಪಡೀತಿದ್ದಾರೆ. ಇತ್ತ ಯಶ್ ಸುಮಾರು 100 ಕೋಟಿ ರೂ. ಚಾರ್ಜ್ ಮಾಡ್ತಿದ್ದಾರೆ. ಆದರೆ, ಈ ಬಗ್ಗೆ ನಟರಾಗಲಿ ಅಥವಾ ನಿರ್ಮಾಪಕರಾಗಲಿ ಅಧಿಕೃತವಾಗಿ ಎಲ್ಲೂ ಹೇಳಿಲ್ಲ. ರಾವಣನ ಪಾತ್ರ ಮಾಡ್ತಿರೋ ಯಶ್, ಈ ಸಿನಿಮಾಗೆ ಸಹ-ನಿರ್ಮಾಪಕ ಕೂಡ ಆಗಿರೋದು ವಿಶೇಷ.
ಸದ್ಯಕ್ಕೆ ರಣಬೀರ್ ಆಸ್ತಿ ಮೌಲ್ಯ ಯಶ್‌ಗಿಂತ ತುಂಬಾನೇ ಹೆಚ್ಚಿದೆ. ಆದರೆ, ಯಶ್ ಅವರ ನಿರ್ಮಾಣ ಸಂಸ್ಥೆ ಹಾಗೂ ಮಾರ್ಕೆಟ್ ವ್ಯಾಲ್ಯೂ ನೋಡ್ತಿದ್ರೆ, ಮುಂದಿನ ದಿನಗಳಲ್ಲಿ ಈ ಲೆಕ್ಕಾಚಾರ ಬದಲಾಗಬಹುದು. ಈಗ 'ರಾಮಾಯಣ' ಥಿಯೇಟರ್‌ಗೆ ಬಂದಿದೆ. ಇಬ್ಬರು ನಟರಿಗೂ ಇದು ಹೊಸ ಅಧ್ಯಾಯ. ರಣಬೀರ್ ತಮ್ಮ ಬಾಲಿವುಡ್ ಅನುಭವವನ್ನು ರಾಮನ ಪಾತ್ರಕ್ಕೆ ಧಾರೆಯೆರೆದರೆ, ಯಶ್ ತಮ್ಮ ಕೆಜಿಎಫ್ ಖದರ್ ಅನ್ನು ರಾವಣನ ಪಾತ್ರದಲ್ಲಿ ತೋರಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.