Hamsa Narayanaswamy: ಬಾಡಿಯೆಲ್ಲಾ ಷೇಕ್​ ಷೇಕ್​ ಮಾಡಿ, ಕಮೆಂಟ್​ ಬಾಕ್ಸ್​ ಆಫ್​ ಮಾಡಿಬಿಟ್ರಲ್ಲಾ ಬಿಗ್​ಬಾಸ್​ ಹಂಸಾ!

Published : Jun 07, 2025, 07:02 PM IST
Hamsa Narayanaswamy

ಸಾರಾಂಶ

ಷೇಕ್​ ಷೇಕ್​ ಎನ್ನುತ್ತಾ ಸಕತ್​ ರೀಲ್ಸ್​ ಮಾಡಿರೋ ಬಿಗ್​ಬಾಸ್​ ಖ್ಯಾತಿಯ ಹಂಸಾ ನಾರಾಯಣಸ್ವಾಮಿ ಅವರು ಕಮೆಂಟ್​ ಬಾಕ್ಸ್​ ಆಫ್​ ಮಾಡಿ ಸದ್ದು ಮಾಡ್ತಿದ್ದಾರೆ! ಆಗಿದ್ದೇನು?

ಬಿಗ್‌ ಬಾಸ್‌ ಮನೆಯಲ್ಲಿ 4 ವಾರಗಳ ಕಾಲ ಇದ್ದು ಎಲಿಮಿನೇಟ್​ ಆಗಿ ಹೊರಬಂದವರು ಹಂಸಾ ನಾರಾಯಣಸ್ವಾಮಿ ಉರ್ಫ್​ ಹಂಸಾ ಪ್ರತಾಪ್​. ಬಿಗ್​ಬಾಸ್​ ಮನೆಯಲ್ಲಿ ಇರುವಷ್ಟು ದಿನ ಹವಾ ಕ್ರಿಯೇಟ್​ ಮಾಡಿದ್ದರು. ಇವರು ಸಕತ್​ ಸದ್ದು ಮಾಡಿದ್ದು, ಲಾಯರ್​ ಜಗದೀಶ್​ ಅವರೊಂದಿಗಿನ ಒಡನಾಟದಿಂದಾಗಿ. ಕೊನೆಗೆ ಇಬ್ಬರೂ ಹೊರಕ್ಕೆ ಬಂದರು. ಇದು ಬಿಗ್​ಬಾಸ್​ ಹಂಸಾರ ಕಥೆಯಾದ್ರೆ, ಪುಟ್ಟಕ್ಕನ ಮಕ್ಕಳು ರಾಜಿ ಮಾಯವಾಗಿಬಿಟ್ಟಳು. ದಿಢೀರ್​ ಎಂದು ಪುಟ್ಟಕ್ಕನ ಮಕ್ಕಳು ರಾಜಿ ಕಾಣೆಯಾಗಿಬಿಟ್ಟಿದ್ದಳು. ಸವತಿ ಪಾತ್ರಕ್ಕೆ ಜೀವ ತುಂಬಿದ್ದ ರಾಜಿ ಪಾತ್ರಧಾರಿ ಹಂಸಾ ಅವರನ್ನು ಕಾಣದೇ ಅಭಿಮಾನಿಗಳು ಶಾಕ್​ ಆಗಿದ್ದಂತೂ ದಿಟ. ಕೊನೆಗೆ ಹೇಳದೇ ಕೇಳದೇ ಹಂಸಾ ಅವರು, ಸೀರಿಯಲ್​ ತಂಡಕ್ಕೆ ಮೋಸ ಮಾಡಿದ್ದಾರೆ ಎಂದು ನಿರ್ದೇಶಕ ಆರೂರು ಜಗದೀಶ್​ ಅವರು ಮಾಧ್ಯಮಗಳ ಎದುರು ಆರೋಪ ಮಾಡಿದ್ದೂ ಆಯಿತು, ಅದಕ್ಕೆ ಹಂಸಾ ತಿರುಗೇಟು ನೀಡಿದ್ದೂ ಆಯ್ತು.

ಇವೆಲ್ಲಾ ಸದ್ಯ ತಣ್ಣಗಾಗುತ್ತಿದ್ದಂತೆಯೇ, ಹಂಸಾ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಹಲವಾರು ರೀತಿಯ ರೀಲ್ಸ್​ಗಳನ್ನು ಶೇರ್​ ಮಾಡುತ್ತಿರುತ್ತಾರೆ. ಚೆನ್ನಾಗಿ ಡಾನ್ಸ್​ ಕೂಡ ಮಾಡುವ ಹಂಸಾ ಅವರು ವಿಧವಿಧ ರೀತಿಯಲ್ಲಿ ನರ್ತನ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಆದರೆ ಇದೀಗ ಹಂಸಾ ಅವರು, ಷೇಕ್​ ಷೇಕ್​ ಮಾಡಿ ಕಮೆಂಟ್​ ಬಾಕ್ಸ್​ ಆಫ್​ ಮಾಡಿದ್ದಾರೆ. ಅದ್ಯಾಕೆ ಎನ್ನುವುದು ತಿಳಿದಿಲ್ಲ. ಇದರಲ್ಲಿಯೂ ಎಂದಿನಂತೆಯೇ ಹಂಸಾ ಅವರು ಸಕತ್​ ಆಗಿ ಡಾನ್ಸ್​ ಮಾಡಿದ್ದಾರೆ. ಆದರೆ ನೆಗೆಟಿವ್​ ಕಮೆಂಟ್​ ಬರಬಹುದು ಎನ್ನುವ ಕಾರಣಕ್ಕೋ ಏನೋ ಕಮೆಂಟ್​ ಬಾಕ್ಸ್​ ಆಫ್​ ಮಾಡಿದ್ದಾರೆ!

ಈಚೆಗಷ್ಟೇ ಹಂಸಾ ಅವರು, ಸ್ಮಶಾನದಲ್ಲಿ ಓಡಾಡಿ ವಿಡಿಯೋ ಅಪ್​ಲೋಡ್​ ಮಾಡಿದ್ದರು. ಸಮಾಧಿಗಳನ್ನು ನೋಡುತ್ತಲೇ ಭಾವುಕರಾಗಿದ್ದ ನಟಿ, ಜೀವನದ ಪಾಠ, ಜೀವನದ ಮೌಲ್ಯಗಳನ್ನು ಅರ್ಥ ಮಾಡಿಸಿದ್ದರು. ಬದುಕಿನ ಅತಿದೊಡ್ಡ ಸತ್ಯವನ್ನು ಅವರು ಹೇಳಿದ್ದರು. ಇದು ಎಲ್ಲರಿಗೂ ತಿಳಿದಿರುವ ಸತ್ಯವೇ ಆಗಿದ್ದರೂ, ಬದುಕಿನ ಜಂಜಾಟದಲ್ಲಿ ಅದನ್ನು ಮರೆತು ಮತ್ತದೇ ತಪ್ಪು ಮಾಡುವುದು ಮಾನವಸಹಜ ಗುಣವಾಗಿಬಿಟ್ಟಿದೆ. ಬದುಕು ಎನ್ನುವುದು ಮೂರು ದಿನಗಳ ಬಾಳು ಎನ್ನುವುದು ತಿಳಿದಿದ್ದರೂ ಜೀವನದಲ್ಲಿ ಅದೇನು ಕನಸು, ಅದೇನು ವ್ಯಾಮೋಹ, ತನ್ನದು, ತನ್ನವರು, ಎಲ್ಲವೂ ನನಗೇ ಬೇಕು ಎನ್ನುವ ಭಾವ, ಜಗಳ, ಹತಾಶೆ... ಅಬ್ಬಬ್ಬಾ.. ಒಂದಾ... ಎರಡಾ..? ಇದರ ಬಗ್ಗೆಯೇ ಹಂಸಾ ಅವರು ಈಗ ಮಾತನಾಡಿದ್ದರು.

ಇನ್ನು ಹಂಸ ಅವರ ಕುರಿತು ಹೇಳುವುದಾದರೆ, ಅವರು ಈ ಹಿಂದೆ, ಧ್ರುವ, ಅಮ್ಮ, ರಾಜಾಹುಲಿ, ಸಖತ್​, ಜೇಮ್ಸ್, ಉಂಡೆನಾಮ ​ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಿಯಾಲಿಟಿ ಷೋಗಳಲ್ಲಿಯೂ ಭಾಗಿಯಾಗಿದ್ದಾರೆ. ಅಂದಹಾಗೆ ಹಂಸ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟಿವ್​. ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್​, ಸಲ್ವಾರ್​, ಸೀರೆ... ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್​ ಮಾಡುತ್ತಿರುತ್ತಾರೆ. . ಈ ಫೋಟೋಗಳಿಗೆ ಸಕತ್​ ಕಮೆಂಟ್​ಗಳ ಸುರಿಮಳೆಯಾಗುತ್ತಿರುತ್ತದೆ. ಅಂದಹಾಗೆ ಹಂಸ ಅವರಿಗೆ ಓರ್ವ ಮಗನಿದ್ದಾನೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?