
ನಟಿ ಮತ್ತು ನಿರೂಪಕಿ ಅನಸೂಯಾ ಕಳೆದ ಕೆಲವು ವಾರಗಳಿಂದ ಕುಟುಂಬದ ಜೊತೆ ಬ್ಯುಸಿ ಇದ್ದಾರೆ. ಹೊಸ ಮನೆ ಕೊಂಡು ಗೃಹಪ್ರವೇಶ ಮಾಡಿದ್ದಾರೆ.
ಕುಟುಂಬ ಸಮೇತರಾಗಿ ಹೊಸ ಮನೆಗೆ ಪ್ರವೇಶಿಸಿ, ಪೂಜೆ, ಹೋಮ ಮಾಡಿದ್ರು.
ನಂತರ ಕುಟುಂಬದ ಜೊತೆ ಶ್ರೀಲಂಕಾಗೆ ಬೇಸಿಗೆ ರಜೆಗೆ ಹೋದ್ರು. ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ್ರು.
ಸ್ವಿಮ್ಮಿಂಗ್ ಪೂಲ್‌ನಲ್ಲಿ ಗಂಡನ ಜೊತೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ರಜೆಯಿಂದ ವಾಪಸ್ ಬಂದ ಅನಸೂಯಾ ಭಾರದ್ವಾಜ್ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿದ್ದಾರೆ. ಕಿರಾಕ್ ಬಾಯ್ಸ್ ಖಿಲಾಡಿ ಗರ್ಲ್ಸ್ 2 ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದಾರೆ. ಶೇಖರ್ ಮಾಸ್ಟರ್ ಜೊತೆ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಶೋನಲ್ಲಿ ಅನಸೂಯಾ ಸಿಲ್ವರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಜೆಯಿಂದಾಗಿ ತೂಕ ಹೆಚ್ಚಾಗಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ರಜೆಯಲ್ಲಿ ಊಟ ಚೆನ್ನಾಗಿ ಎಂಜಾಯ್ ಮಾಡಿದ್ದಾಗಿ ಎಮೋಜಿಗಳ ಮೂಲಕ ಹೇಳಿದ್ದಾರೆ.
ಕಿರಾಕ್ ಬಾಯ್ಸ್ ಖಿಲಾಡಿ ಗರ್ಲ್ಸ್ 2 ಕಾರ್ಯಕ್ರಮದ ಪ್ರೋಮೋ ವೈರಲ್ ಆಗಿದೆ. ಟಿವಿ ನಟಿ ದೇಬ್ಜಾನಿ, ಇಮ್ಯಾನುಯೆಲ್‌ಗೆ ಮುತ್ತು ಕೊಟ್ಟಿದ್ದಾರೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ಅನಸೂಯಾ ಮತ್ತು ಶೇಖರ್ ಮಾಸ್ಟರ್ ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಮ್ಮೆ ಮುತ್ತು ಕೊಡಲು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.