
ತೆಲುಗು ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಈಗ ತನ್ನ 10ನೇ ಸೀಸನ್ ಸಂಭ್ರಮಕ್ಕೆ ಸಜ್ಜಾಗಿದೆ. ಬಿಗ್ ಬಾಸ್ ತೆಲುಗು ಸೀಸನ್ 10ರ ಅದ್ದೂರಿ ಚಾಲನೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮನೆಮಾಡಿದೆ. ಈ ಬಾರಿ ಶೋನಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಮತ್ತು ಅತಿಥಿಯಾಗಿ ಯಾರು ಬರಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಬಿಗ್ ಬಾಸ್ ತೆಲುಗು ಸೀಸನ್ 10 ಸೆಪ್ಟೆಂಬರ್ 06 ರ ಭಾನುವಾರ ಸಂಜೆ 7 ಗಂಟೆಗೆ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಪ್ರತಿ ಬಾರಿಯಂತೆ ಈ ಸೀಸನ್ ಅನ್ನು ಕೂಡ ಟಾಲಿವುಡ್ ಕಿಂಗ್ ನಾಗಾರ್ಜುನ್ ಅವರೇ ನಡೆಸಿಕೊಡಲಿದ್ದಾರೆ. ಇದು 10ನೇ ಸೀಸನ್ (ಲ್ಯಾಂಡ್‌ಮಾರ್ಕ್ ಸೀಸನ್) ಆಗಿರುವುದರಿಂದ ಈ ಬಾರಿ ಸಾಕಷ್ಟು ಬದಲಾವಣೆ ಮತ್ತು ಸರ್ಪ್ರೈಸ್ ಎಲಿಮೆಂಟ್‌ಗಳನ್ನು ಅಳವಡಿಸಲಾಗಿದೆ ಎಂದು ನಿರ್ವಾಹಕರು ತಿಳಿಸಿದ್ದಾರೆ.
ಬಿಗ್ ಬಾಸ್ ಪ್ರತಿ ಸೀಸನ್‌ನ ಉದ್ಘಾಟನಾ ಸಂಚಿಕೆಗೆ ಒಬ್ಬರು ಸ್ಟಾರ್ ನಟರು ಅತಿಥಿಯಾಗಿ ಬರುವುದು ವಾಡಿಕೆ. ಈ ಬಾರಿ ನಾಗಾರ್ಜುನ್ ಅವರೊಂದಿಗೆ 'ಊಪಿರಿ' ಸಿನಿಮಾದಲ್ಲಿ ನಟಿಸಿದ್ದ ಕಾಲಿವುಡ್ ಖ್ಯಾತ ನಟ ಕಾರ್ತಿ (Karthi) ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕಾರ್ತಿ ಅವರು ತಮ್ಮ ಮುಂಬರುವ ಚಿತ್ರ 'ಸರ್ದಾರ್ 2' ಪ್ರಚಾರಕ್ಕಾಗಿ ಈ ವೇದಿಕೆಗೆ ಬರಲಿದ್ದು, ಅಧಿಕೃತ ಪ್ರಕಟಣೆ ಹೊರಬಿದ್ದಿದೆ.
ಈ ಬಾರಿಯ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಗಾಯಕಿ ಝಾನ್ಸಿ ಅವರ ಪ್ರವೇಶ ಈಗಾಗಲೇ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹೀಗಿದೆ. ಪಲ್ಲವಿ ಗೌಡ, ಮುಖೇಶ್ ಗೌಡ, ತೇಜಸ್ವಿನಿ ಗೌಡ.
ಜಬರ್ದಸ್ತ್ ರಾಮ್ ಪ್ರಸಾದ್, ನೂಕರಾಜು, ರಾಕಿಂಗ್ ರಾಕೇಶ್, ಆಂಕರ್ ವರ್ಷಿಣಿ, ನಟ ಕೃಷ್ಣುಡು, ಟೆಂಪರ್ ವಂಶಿ, ಯೂಟ್ಯೂಬರ್ ನಂದು, ಫೋಕ್ ಡ್ಯಾನ್ಸರ್ ಮಾಧುರಿ ರಾಥೋಡ್. ಈ ಪಟ್ಟಿಯಲ್ಲಿ ಇರುವವರ ಪೈಕಿ ಯಾರು ಅಂತಿಮವಾಗಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬುದು ಭಾನುವಾರ ಸಂಜೆ ತಿಳಿಯಲಿದೆ. ಒಟ್ಟಿನಲ್ಲಿ ತೆಲುಗು ಬಿಗ್ ಬಾಸ್ ಪ್ರೇಕ್ಷಕರಿಗೆ ಈ ಬಾರಿ ಭರ್ಜರಿ ಮನರಂಜನೆ ಸಿಗುವುದು ಗ್ಯಾರಂಟಿ.
KING X SARDAR 👑💪
Macho Man @Karthi_Offl graces the launch episode of #BiggBossTelugu10 as Chief Guest🔥🔥🔥#Sardar2 Telugu promotions in full swing💥
In cinemas from September 10th ❤️🔥@Prince_Pictures @AnnapurnaStdios pic.twitter.com/wWNgtzU2jD— 𝐕𝐚𝐦𝐬𝐢𝐒𝐡𝐞𝐤𝐚𝐫 (@UrsVamsiShekar) September 5, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.