
ಬೆಂಗಳೂರು (ಸೆ.05) ಬಿಗ್ ಬಾಸ್ ಕನ್ನಡ ಮತ್ತೆ ಅಬ್ಬರಿಸಲು ರೆಡೆಯಾಗಿದೆ. 13ನೇ ಆವೃತ್ತಿ ರಿಯಾಲಿಟಿ ಶೋ ನಾಳೆಯಿಂದ ಆರಂಭಗೊಳ್ಳುತ್ತಿದೆ. ಬಹುನಿರೀಕ್ಷಿತ ಬಿಗ್ ಬಾಸ್ ಸೀಸನ್ 13 ಅದ್ಧೂರಿ ಆರಂಭಕ್ಕೆ ಕೆಲ ಗಂಟೆಗಳು ಮಾತ್ರ ಬಾಕಿ. ಇದರ ನಡುವೆ ಸ್ಪರ್ಧಿಗಳು ಯಾರು, ಈ ಬಾರಿಯ ಆಟ ಹೇಗಿರುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ. ಇದೇ ವೇಳೆ ಈ ಬಾರಿ ಬಿಗ್ ಬಾಸ್ ಗೆಲ್ಲೋ ಸ್ಪರ್ಧಿಗೆ ಸಿಗುವ ಬಹುಮಾನ ಮೊತ್ತವೆಷ್ಟು ಅನ್ನೋ ಕುತೂಹಲವೂ ಹೆಚ್ಚಾಗಿದೆ. ಬಿಗ್ ಬಾಸ್ ಪ್ರೋಮೋ ರಿಲೀಸ್ ಬೆನ್ನಲ್ಲೇ ಈ ಎಲ್ಲಾ ಕುತೂಹಲಗಳ ಉತ್ತರ ಇಲ್ಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಗೆದ್ದ ಸ್ಪರ್ಧಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಬಿಗ್ ಬಾಸ್ ಕನ್ನಡದ ಬಹುಮಾನ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಹಾಗೂ ಈ ಹಿಂದಿನ ಆವೃತ್ತಿಗಳಲ್ಲೂ 50 ಲಕ್ಷ ರೂಪಾಯಿ ಬಹುಮಾನ ಮೊತ್ತ ನೀಡಲಾಗುತ್ತಿತ್ತು. ಈ ಮೊತ್ತದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇತ್ತೀಚೆಗೆ ಸ್ವತಃ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದರು.
ಬಿಗ್ ಬಾಸ್ 13ನೇ ಆವೃತ್ತಿಗೆ ಹಲವರು ಸೆಲೆಬ್ರೆಟಿಗಳು ಕಾಲಿಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಯಾವುದು ಅಧಿಕೃತವಾಗಿಲ್ಲ. ಹಲವುಹ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಪೈಕಿ ಭರತ್ ಬೋಪಣ್ಣ, ತಪಸ್ವಿನಿ ಪೂಣಚ್ಚ, ದಿವ್ಯಾ ವಾಗುಕರ್, ಸುನಿಲ್ ರಾವ್, ಸೌಂದರ್ಯ ಶೆಟ್ಟಿ, ಸುಷ್ಮಾ ರಾವ್ ಸೇರಿದಂತೆ ಹಲವು ಹೆಸರು ಎಲ್ಲೆಡೆಗಳಿಂದ ಕೇಳಿ ಬರುತ್ತಿದೆ.
ಒಂದೆಡೆ ಕುತೂಹಲ ಹೆಚ್ಚಾಗುತ್ತಿದ್ದಂತೆ ಬಿಗ್ ಬಾಸ್ ಕನ್ನಡ 13ನೇ ಆವೃತ್ತಿಯ ಪ್ರೋಮೋ ರಿಲೀಸ್ ಆಗಿದೆ. ಸೆಪ್ಟೆಂಬರ್ 6ರ ರಾತ್ರಿ 7 ಗಂಟೆಗೆ ಬಿಗ್ ಬಾಸ್ ಗ್ರ್ಯಾಂಡ್ ಪ್ರಿಮಿಯರ್ ನಡೆಯಲಿದೆ. ಹೊಸ ಪ್ರೋಮೋದಲ್ಲಿ ಕೆಲ ರೋಚಕ ಮಾಹಿತಿಯನ್ನು ನೀಡಲಾಗಿದೆ.ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಇದೀಗ 13ನೇ ಆವೃತ್ತಿ ಹೋಸ್ಟ್ ಮಾಡಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಮನೆಗೆ ಆಗಮಿಸಿದ ಕಿಚ್ಚ ಸುದೀಪ್‌ಗೆ ಬಿಗ್ ಬಾಸ್ ಸ್ವಾಗತ ಕೋರಿದ್ದಾರೆ.
ಬಿಗ್ ಬಾಸ್ 13ನೇ ಆವೃತ್ತಿ ಪ್ರೋಮೋ ವಿಮಾನ ಥೀಮ್‌ನಲ್ಲಿದೆ. ಕಿಚ್ಚ ಸುದೀಪ್ ಪೈಲೆಟ್ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ನಾಳೆ ಟೇಕ್ ಆಫ್ ಎಂದಿದ್ದಾರೆ. ಹೀಗಾಗಿ ಈ ಬಾರಿಯ ವಿಮಾನದಲ್ಲಿ ಕೆಲ ವಿಶೇಷ ಎಲಿಮೆಂಟ್ಸ್ ಇರಲಿದೆ. ಬಿಗ್ ಬಾಸ್ ಒಂದು ಪ್ರಪಂಚ, ಅದರೊಳಗೆ ಹಲವು ಪ್ರಪಂಚ, ಒಂದು ಮನೆ, ಒಂದು ಅವಕಾಶ, ಕೋಟ್ಯಂತರ ಕನಸುಗಳು ಅನ್ನೋ ವಿಶೇಷ ಡೈಲಾಗ್ ಬಿಗ್ ಬಾಸ್ ಕುತೂಹಲ ಹೆಚ್ಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.