ಕೊನೆಗೂ ಡೇಟ್​ ಅನೌನ್ಸ್​ ಮಾಡಿದ Bigg Boss ಸ್ಪಂದನಾ ಸೋಮಣ್ಣ: ನಟಿ ಮೋಕ್ಷಿತಾ ಪೈಗೆ engagement ಆಮಂತ್ರಣ

Published : Nov 17, 2026, 07:05 PM IST
Bigg Boss Spandana Somanna

ಸಾರಾಂಶ

ಬಿಗ್ ಬಾಸ್ ಖ್ಯಾತಿಯ ಸ್ಪಂದನಾ ಸೋಮಣ್ಣ ತಮ್ಮ 6 ವರ್ಷಗಳ ಪ್ರೇಮಕಥೆಯನ್ನು ಹಂಚಿಕೊಂಡಿದ್ದು, ಶೀಘ್ರದಲ್ಲೇ ವರುಣ್ ಮುನಿರಾಜು ಅವರೊಂದಿಗೆ ಮದುವೆಯಾಗಲಿದ್ದಾರೆ. ಇದೇ 22ರಂದು ಅವರ ಎಂಗೇಜ್‌ಮೆಂಟ್ ನಡೆಯಲಿದೆ.

ಬೆಂಗಳೂರು: Bigg Boss ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ (Spandana Somanna) ಮದುವೆಗೆ ಸಿದ್ಧವಾಗಿದ್ದು, ಮದುವೆಯ ಡೇಟ್​ ಬಗ್ಗೆ ಇನ್ನೂ ರಿವೀಲ್​ ಮಾಡಲಿಲ್ಲ. ಬದಲಾಗಿ, ಎಂಗೇಜ್​ಮೆಂಟ್​ ಡೇಟ್​ ಅನೌನ್ಸ್​ ಮಾಡಿದ್ದಾರೆ. ಇದೇ 22ರಂದು ನನ್ನ ಎಂಗೇಜ್​ಮೆಂಟ್​ ಇದ್ದು, ದಯವಿಟ್ಟು ಬನ್ನಿ ಎಂದು ಕರೆದಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಿದೆ. ಅಷ್ಟಕ್ಕೂ, ನಟಿ, ಈಚೆಗೆ, ತಮ್ಮ ಮದುವೆಯ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಮತ್ತು ಸಸ್ಪೆನ್ಸ್‌ಗಳಿಗೆ ತೆರೆ ಎಳೆದಿದ್ದರು. ತಮ್ಮ 6 ವರ್ಷಗಳ ಪ್ರೇಮಕಥೆಯನ್ನು ಹಂಚಿಕೊಂಡಿದ್ದು, ಶೀಘ್ರದಲ್ಲೇ ವರುಣ್ ಮುನಿರಾಜು ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಮದುವೆ ತಯಾರಿಗಾಗಿ ಸದ್ಯ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳದ ಅವರು, ವಿವಾಹದ ಬಳಿಕ ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡುವ ಪ್ಲ್ಯಾನ್ ಹೊಂದಿದ್ದಾರೆ. ಇದಾಗಲೇ ಅವರು, ತಮ್ಮ ಭಾವಿ ಪತಿ ವರುಣ್‌ ಅವರನ್ನೂ ಪರಿಚಯಿಸಿದ್ದಾರೆ. ವರುಣ್ ಮುನಿರಾಜು ಅವರನ್ನು ಸ್ಪಂದನಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದು, ಇಬ್ಬರೂ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದಾಗಲೇ ಭಾವಿ ಪತಿಯ ಜೊತೆಗಿನ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ನಟಿ.

ಮೊನ್ನೆಯಷ್ಟೇ ನಟಿ, ಸ್ನೇಹಿತೆಯರ ಜೊತೆಯಲ್ಲಿ , ಭಾವಿ ಮದುಮಗಳು (Bride To be)ಪಾರ್ಟಿ ಮಾಡಿದ್ದು, ಅದರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಮುಂದಿನ ನಿಲ್ದಾಣ ಮದುವೆ ಎಂದು ಹೇಳುತ್ತಲೇ ಸ್ನೇಹಿತೆಯ ಜೊತೆಯಲ್ಲಿ ಮೋಜು ಮಸ್ತಿ ಮಾಡಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ. ಆದರೆ ಮದುವೆ ಮಾತ್ರ ಯಾವಾಗ ಎನ್ನೋದನ್ನೂ ಇನ್ನೂ ರಿವೀಲ್​ ಮಾಡಲಿಲ್ಲ. ಅದನ್ನು ಸಸ್ಪೆನ್ಸ್​ ಆಗಿ ಇಟ್ಟಿದ್ದಾರೆ.

ಲವ್​ ಸ್ಟೋರಿ ಕುರಿತು ನಟಿ

ಈಚೆಗೆ ನಟಿ, ಹೂವು ಮುಡಿಸುವ ಶಾಸ್ತ್ರದ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. ಈ ಹಿಂದೆ, ನಟಿ, ತಮ್ಮ ಲವ್​ ಸ್ಟೋರಿ ಬಗ್ಗೆ ಹೇಳಿದ್ದರು. ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಕಾಲೇಜಿನ ಟೈಮ್​ನಲ್ಲಿ ಮಾತನಾಡಿರಲಿಲ್ಲ. ಆದರೆ ಕೋವಿಡ್​ ಟೈಮ್​ನಲ್ಲಿ ಮಾತನಾಡಿದ್ವಿ. ಅಲ್ಲಿಂದಲೇ ಲವ್​ ಶುರುವಾಯ್ತು ಎಂದಿದ್ದಾರೆ. ಆ ಸಮಯದಲ್ಲಿ ನಾನು ಇಷ್ಟು ಫೇಮಸ್​ ಆಗಿರಲಿಲ್ಲ. ಸೀರಿಯಲ್​ ಹುಡುಕಾಟದಲ್ಲಿ ಇದ್ದೆ. ಆಡಿಷನ್​ ಕೊಡುತ್ತಿದ್ದೆ. ಸ್ಟ್ಯಾಂಡ್​ ಆಗಿರಲಿಲ್ಲ. ಆ ಟೈಮ್​ನಲ್ಲಿ ಲವ್​ ಆಗಿದ್ದು ಎಂದು ತಮ್ಮ ಲವ್​ಸ್ಟೋರಿ ಹಂಚಿಕೊಂಡಿದ್ದರು. ಅವನು ಕೂಡ ಲಂಡನ್​ನಲ್ಲಿ ಎಂಎಸ್​ ಮಾಡಿದ್ದ. ಕೆಲಸ ಸಿಕ್ಕರೂ ಕೋವಿಡ್​ನಿಂದ ಹೋಗಲು ಆಗಿರಲಿಲ್ಲ. ಲಂಡನ್​ನಲ್ಲಿಯೇ ಇರಬೇಕೋ, ಬೇರೆ ಕಂಟ್ರಿಗೆ ಹೋಗಬೇಕೋ ಅಥ್ವಾ ಭಾರತಕ್ಕೆ ಬರಬೇಕೋ ಎನ್ನುವ ಗೊಂದಲದಲ್ಲಿ ಇದ್ದ. ಹೀಗೆ ಆರು ವರ್ಷ ನಮ್ಮ ಲವ್​ಸ್ಟೋರಿ ನಡೆಯುತ್ತಿದೆ ಎಂದಿದ್ದರು.

ಇದೀಗ ನಟಿ, ಮದುವೆಯಾದ ಮೇಲಿನ ಪ್ಲ್ಯಾನ್​ ಬಗ್ಗೆ ಮಾತನಾಡಿದ್ದಾರೆ. ಮದುವೆ ಯಾವಾಗ ಎನ್ನುವ ವಿಷಯವನ್ನು ಅವರು ರಿವೀಲ್​ ಮಾಡಲಿಲ್ಲ. ಆದರೆ ಮದುವೆಯ ನಂತರ ಬಿಜಿನೆಸ್​ ಮಾಡುವ ಪ್ಲ್ಯಾನ್​ ಇದೆ. ಅದರಲ್ಲಿಯೂ ಫ್ಯಾಷನ್​ ಕ್ಷೇತ್ರದಲ್ಲಿ ತಮಗೆ ಅಪಾರ ಆಸಕ್ತಿ ಇದ್ದು, ಅದರಲ್ಲಿ ಸಾಕಷ್ಟು ತಿಳಿವಳಿಕೆ ಕೂಡ ಇರುವ ಕಾರಣದಿಂದ, ಅದರಲ್ಲಿಯೇ ಮುಂದುವರೆಯುವ ಇಷ್ಟ ಇದೆ ಎಂದು ನಟಿ ಸ್ಪಂದನಾ ಸೋಮಣ್ಣ (Bigg Boss Spandana Somanna) sumantvkannada ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ಹಾಗೆಂದು ನಟನೆ ಬಿಡುತ್ತೇನೆ ಎಂದು ಅರ್ಥವಲ್ಲ, ಒಳ್ಳೆಯ ಪ್ರಾಜೆಕ್ಟ್​ ಸಿಕ್ಕರೆ ಅದನ್ನೂ ಮಾಡುತ್ತೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial ಫ್ಯಾನ್ಸ್​ ಆಸೆ ಈಡೇರಿತು: ಕೊನೆಗೂ ಲೈವ್​ಗೆ ಬಂದು ಮಾತನಾಡಿದ ನಟಿ ಛಾಯಾ ಸಿಂಗ್​
"ಆ ಚಿತ್ರದಲ್ಲಿ ರವಿಚಂದ್ರನ್ ತಾಯಿ ಅಲ್ಲ, ಧೀರೇಂದ್ರ ಗೋಪಾಲ್ ಹೆಂಡತಿ": ಹಳೆಯ ಗೊಂದಲ ಬಿಡಿಸಿದ ನಟಿ ಆಶಾಲತಾ