
ಸದ್ಯ ಬಿಗ್ಬಾಸ್ 13 (Bigg Boss 13)ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವವರಲ್ಲಿ ಒಬ್ಬರಾಗಿರುವ ಸೋನಿಕಾ ಅರ್ಥಾತ್ ಸೋನು ಗೌಡ ಅವರು ಸಕತ್ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಸೋನು ಗೌಡ ಅವರು ಬಣ್ಣದ ಲೋಕದಲ್ಲಿ ಹೆಚ್ಚು ಇರುವ ಕಾರಣ, ಯಾವ ಸೋನು ಗೌಡ ಎಂದು ಕನ್ಫ್ಯೂಸ್ ಆಗಬಾರದು ಎಂದು ಸೋನಿಕಾ ಎಂದು ಹೆಸರು ಇಟ್ಟುಕೊಂಡಿರುವ ಸೋನು ಗೌಡ ಅವರ ಮನೆ ಬೊಂಬಾಟ್ ಆಗಿದ್ದು, ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ. ಅಲೆಮಾರಿ ಅಮಿತ್ʼ ಯೂಟ್ಯೂಬ್ ಚಾನೆಲ್ನಲ್ಲಿ ಸೋನಿಕಾ ಅವರ ಐಷಾರಾಮಿ ಮನೆಯನ್ನು ತೋರಿಸಲಾಗಿದೆ. ಸೋನಿಕಾ ಹೋಮ್ ಟೂರ್ ಮಾಡಿಸಲಾಗಿದ್ದು, ಇದರಲ್ಲಿ ಹಲವಾರು ವಿಷಯಗಳು ಜನರ ಕಣ್ಣು ಕುಕ್ಕುವಂತಿದೆ.
ಮನೆಯ ಇಂಟೀರಿಯರ್ ಎಲ್ಲಾ ಮಗಳೇ ಮಾಡಿಸಿದ್ದು ಎಂದಿದ್ದಾರೆ ಅಮ್ಮ. ಐದು ಫ್ಲೋರ್ಗಳ ಮನೆ ಇದಾಗಿದ್ದು, ಒಂದೊಂದು ಕೋಣೆಗಳೂ ಒಂದೊಂದು ಐಷಾರಾಮಿ ಲುಕ್ ನೀಡುತ್ತವೆ. ಅಂದಹಾಗೆ ಸೋನಿಕಾ ಗೌಡ ಅವರು ಕೇರಳ ಮೂಲದವರಾಗಿದ್ದು, ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮುಗಿಸಿರುವ ಇವರು ಭರತನಾಟ್ಯ ಕಲಾವಿದೆ ಕೂಡ. ಹೈಸ್ಕೂಲ್ನಿಂದಲೇ ಭರತನಾಟ್ಯ ಕಲಿತು ಸೀನಿಯರ್ ಪರೀಕ್ಷೆ ಮುಗಿಸಿದ್ದಾರೆ. 'ಸಾಂಕಿ ಇವೆಂಟ್' ಕಾರ್ಯಕ್ರಮದ ಮೂಲಕ ಮಾಡೆಲಿಂಗ್ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿರೋ ಸೋನಿಕಾ, 2013ರಲ್ಲಿ ಪ್ಯಾಷನ್ ಶೋನಲ್ಲಿ ಭಾಗವಹಿಸಲು ಆರಂಭಿಸಿದರು. ಮೂರು ವರ್ಷಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಸೋನಿಕಾ ಉದ್ಯಮಿಯಾಗಿದ್ದು, ʻಶತಾಯ ಗತಾಯʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರದ್ದೇ ಆದ ಸಲೂನ್ ಕೂಡ ಇದೆ. ಇವರ ತಂದೆ ಎಕ್ಸ್ಪೋರ್ಟ್ ಬ್ಯುಸಿನೆಸ್ ಮಾಡ್ತಿದ್ದು, ಸದ್ಯಕ್ಕೆ ದುಬೈನಲ್ಲೇ ಇದ್ದಾರೆ. ಇವರ ದುಡಿಯಲು ಆರಂಭಿಸಿ ದಶಕವೇ ಕಳೆದಿರುವ ಹಿನ್ನೆಲೆಯಲ್ಲಿ, ಅವರ ಮನೆ ಕೂಡ ಭರ್ಜರಿ ಲುಕ್ನಿಂದ ಕಂಗೊಳಿಸುತ್ತಿದೆ. ವಿಶಾಲವಾದ ಲಿವಿಂಗ್ ಏರಿಯಾ, ಸ್ಟೈಲೀಶ್ ಕಿಚನ್, ಸ್ಪೇಷಿಯಸ್ ಮಾಸ್ಟರ್ ಬೆಡ್ರೂಮ್ ವಿಶಾಲವಾದ ಇಂಟೀರಿಯರ್ ಡಿಸೈನ್ ಮತ್ತು ಪಾರ್ಟಿ ಸೆಟಪ್ ಕೂಡ ಇಲ್ಲಿದೆ.
ಅವರ ಬಳಿ ಲಕ್ಷ ಲಕ್ಷ ಮೌಲ್ಯದ ಲಕ್ಷುರಿ ಬ್ಯಾಗ್ಸ್ ಇವೆ. ಮೇಕಪ್ ರೂಮ್ ಕೂಡ ಐಷಾರಾಮಿ ಆಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ. ಇನ್ನು ನಟಿಯ ಹಿನ್ನೆಲೆ ಹೇಳುವುದಾದರೆ, ಅಪ್ಪ ಉದ್ಯಮಿ. ಅಮ್ಮ ಗೃಹಿಣಿ. ಸೋನಿಕಾ ಅವರಿಗೆ ಒಬ್ಬ ಸಹೋದರ ಇದ್ದಾರೆ. ಮಾಡೆಲಿಂಗ್ ಕ್ಷೇತ್ರದ ಆಯ್ಕೆಯ ಬಗ್ಗೆ ಸೋನಿಕಾ ಮನೆಯಲ್ಲಿ ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ ಮಗಳ ಆಸೆಗೆ ನೀರೆದಿದ್ದಾರೆ. ಸದ್ಯ ಸೋನಿಕಾ ಅವರಿಗೆ ಪಾಲಕರೇ ಬ್ಯಾಕ್ಬೋನ್. ಯಾವುದೇ ಶೂಟಿಂಗ್ಗೆ ಹೋದರೂ ಸೋನಿಕಾ ಅವರ ಅಮ್ಮ ಜೊತೆಯಲ್ಲಿ ಇರುತ್ತಾರೆ.
ಇನ್ನು ಸೋನಿಕಾ ಅವರು ಖುದ್ದು ಉದ್ಯಮಿ. ತಮ್ಮದೇ ಬಟ್ಟೆಯ ಬೂಟಿಕ್ ಹೊಂದಿದ್ದಾರೆ. ‘ಶತಾಯ ಗತಾಯ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿರೋ ನಟಿ, ನಂತರ ‘ನಾನೇ ರಾಜ’, ‘ಖುಷಿ ಖುಷಿಯಾಗಿ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಸೋನಿಕಾ, ಬಳಿಕ ಭೋಜಪುರಿಯ ‘ಅಂದಾಜ್’ ಸಿನಿಮಾ, ‘ಫೈಟ್’ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮಿಸ್ ಯುವರಾಣಿ’, ‘ 2013ರಲ್ಲಿ ಮಿಸ್ ಫ್ಯಾಷನಿಸ್ಟಾ’, ‘ಫೇಸ್ ಆಫ್ ಬೆಂಗಳೂರು’, ‘ಮಿಸ್ ಸೌಂದರ್ಯ 2014’, ‘ಬೆಂಗಳೂರು ಸೂಪರ್ ಮಾಡೆಲ್’, ‘ಮಿಸ್ ಕೇರಳ 2015’ ಹಾಗೂ ‘ಮಿಸ್ ಕ್ಯಾಟ್ವಾಕ್’ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಿಕ್ಕಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.