ಆಧುನಿಕ ರೈತನ ಮುಡಿಗೆ ಬಿಬಿಕೆ 6 ಟ್ರೋಫಿ, ನವೀನ್‌ಗೆ ರನ್ನರ್ ಅಪ್‌ ಪಟ್ಟ

Published : Jan 27, 2019, 11:54 PM ISTUpdated : Jan 27, 2019, 11:59 PM IST
ಆಧುನಿಕ ರೈತನ ಮುಡಿಗೆ ಬಿಬಿಕೆ 6 ಟ್ರೋಫಿ, ನವೀನ್‌ಗೆ ರನ್ನರ್ ಅಪ್‌ ಪಟ್ಟ

ಸಾರಾಂಶ

ಬಿಗ್‌ ಬಾಸ್‌ ಸೀಸನ್ ಕನ್ನಡದ  ಸೀಸನ್ 6ಗೆ ತೆರೆ ಬಿದ್ದಿದೆ. ಆಧುನಿಕ ರೈತ ಶಶಿ ಬಿಗ್‌ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದು 50 ಲಕ್ಷ ರೂ. ಬಹುಮಾನ ತಮ್ಮದಾಗಿರಿಸಿಕೊಂಡಿದ್ದಾರೆ.

ಆಧುನಿಕ ರೈತ ಶಶಿ ಮತ್ತು ಸಂಗೀತ ನಿರ್ದೇಶಕ ಗಾಯಕ ಕೊನೆಯ ಟಾಪ್ 2 ಆಗಿದ್ದರು. ಕಿಚ್ಚ ಸುದೀಪ್, ಶಶಿಕುಮಾರ್​ ಬಿಗ್​ಬಾಸ್​ ಸೀಜನ್​-6 ವಿಜೇತ ಎಂದು ಘೋಷಿಸಿದರು.

ಸೀಜನ್ -6ರ 12ನೇ ಕಂಟೆಸ್ಟೆಂಟ್​​ ಆಗಿ ಶಶಿ ಬಿಗ್​ಬಾಸ್​ ಮನೆಯೊಳಗೆ ಪ್ರವೇಶ ಮಾಡಿದ್ದರು. ರೈತರ ದಿನಚರಿ, ಆಧುನಿಕ ಕೃಷಿ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹಲವು ಸಾರಿ ಮಾತನಾಡಿದ್ದರು.

ಬಿಗ್‌ಬಾಸ್‌ಗೆ ‘ಭಾವಪೂರ್ಣ’ ಶ್ರದ್ಧಾಂಜಲಿ ಸಲ್ಲಿಸಿದ ವೀಕ್ಷಕರು!

21 ಜನರಲ್ಲಿ ಶಶಿ ಟಾಪ್ ಆಗಿ ಹೊರಹೊಮ್ಮಿದ್ದು ಚಂದನ್ ಶೆಟ್ಟಿ, ವಿಜಯ್ ರಾಘವೇಂದ್ರ, ಶ್ರುತಿ, ಅಕುಲ್ ಬಾಲಾಜಿ, ಪ್ರಥಮ್ ಸಾಲಿಗೆ ಶಶಿ ಸೇರ್ಪಡೆಯಾಗಿದ್ದಾರೆ. ಗಾಯಕ ನವೀನ್ ಸಜ್ಜು ಗೆಲ್ಲುತ್ತಾರೆ ಎಂದು ಹಲವರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಂತಿಮವಾಗಿ ಶಶಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಗೆದ್ದ ಹಣವನ್ನು ರೈತರಿಗೆ ಮತ್ತು ಯುವಕರಿಗೆ ಹೊಸ ತಂತ್ರಜ್ಞಾನ ತಲುಪಿಸಲು ಬಳಸುತ್ತೇಬೆ ಎಂದು ಶಶಿ ಹೇಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!