Bigg Boss Kishen Bilagali: ಧರೆಗಿಳಿದ ಶಿವಪಾರ್ವತಿ: ಕಿಶನ್​ ಬಿಳಗಲಿ ಜೊತೆ ಹಿಟ್ಲರ್​ ಕಲ್ಯಾಣ ಲೀಲಾ ಮೋಡಿ ನೋಡಿ!

Published : Jun 08, 2025, 06:31 PM IST
Kishen Bilagali with Malaika Vasupal

ಸಾರಾಂಶ

ಬಿಗ್​ಬಾಸ್​ ಖ್ಯಾತಿಯ ಕಿಶನ್​ ಬಿಳಗಲಿ ಅವರು ಈ ಬಾರಿ ಹಿಟ್ಲರ್​ ಕಲ್ಯಾಣ ಲೀಲಾ ಅರ್ಥಾತ್​ ಮಲೈಕಾ ವಸುಪಾಲ್​ ಅವರ ಜೊತೆ ನರ್ತನದ ಮೋಡಿ ಮಾಡಿದ್ದು, ಅದೀಗ ವೈರಲ್​ ಆಗಿದೆ.

ಬಿಗ್​ಬಾಸ್ ಮೂಲಕವೇ ಸಕತ್​ ಫೇಮಸ್​ ಆಗಿರೋ ಕಿಶನ್‌ ಬಿಳಗಲಿಯ ನೃತ್ಯ ವೈಖರಿಯನ್ನು ಕಿರುತೆರೆ ಪ್ರೇಮಿಗಳು ನೋಡಿರಲು ಸಾಕು. ಅದರಲ್ಲಿಯೂ ಹೆಚ್ಚಾಗಿ ಬಿಗ್​ಬಾಸ್​​ ಖ್ಯಾತಿಯ ನಮ್ರತಾ ಗೌಡ ಅವರ ಜೊತೆ ಕಿಶನ್​ ಅವರ ರೊಮಾಂಟಿಕ್​ ಸಾಂಗ್​ಗಳನ್ನು ನೋಡಿರುವ ಅಭಿಮಾನಿಗಳು ಇವರಿಬ್ಬರ ಕೆಮೆಸ್ಟ್ರಿಗೆ ಫಿದಾ ಆಗ್ತಿರೋದು ಸುಳ್ಳಲ್ಲ. ಈಚೆಗೆ ಅವರು ಬಿಗ್​ಬಾಸ್​ ನಿವೇದಿತಾ ಗೌಡ ಜೊತೆ, ಶಿಲಾಬಾಲಿಕೆಯಂತೆ ರೆಡಿಯಾಗಿ ಅದ್ಭುತ ನೃತ್ಯ ಮಾಡಿದ್ದರು. ಬಳಿಕ ಲಕ್ಷ್ಮೀ ಬಾರಮ್ಮ ಸೀರಿಯಲ್​​ ಕೀರ್ತಿ ಅರ್ಥಾತ್​ ನಟಿ ತನ್ವಿ ರಾವ್​ ಅವರು ಕಿಶನ್​ ಬಿಳಗಲಿ ಜೊತೆ ನೃತ್ಯದ ಮೋಡಿ ಮಾಡಿದ್ದಾರೆ. ಇದೀಗ ಕಿಶನ್​ ಅವರು ಹಿಟ್ಲರ್​ ಕಲ್ಯಾಣ ಖ್ಯಾತಿಯ ಲೀಲಾ ಉರ್ಫ್​ ನಟಿ ಮಲೈಕಾ ವಸುಪಾಲ್​ ಜೊತೆ ಅದ್ಭುತ ನೃತ್ಯ ಮಾಡಿದ್ದಾರೆ. ನಟರಾಜನ ವೇಷದಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಮಲೈಕಾ ಪಾರ್ವತಿಯಾಗಿದ್ದಾರೆ.

ಕಿಶನ್​ ಅವರು ಯಾರದ್ದೇ ಜೊತೆ ನರ್ತಿಸಿದರೂ ಅಲ್ಲೊಂದು ಅದ್ಭುತ, ಕುತೂಹಲ, ಸೌಂದರ್ಯ ಇದ್ದೇ ಇರುತ್ತದೆ. ಇದೀಗ ಅದೇ ರೀತಿ ಮಲೈಕಾ ಜೊತೆಯ ನರ್ತನಕ್ಕೂ ಭರಪೂರ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಅದರಲ್ಲಿಯೂ ಕಿಶನ್​ ಅವರ ವೇಷಭೂಷಣಕ್ಕೆ ಅಭಿಮಾನಿಗಳು ಹ್ಯಾಟ್ಸ್​ಆಫ್​ ಹೇಳುತ್ತಿದ್ದಾರೆ. ಅಂದಹಾಗೆ ಕಿಶನ್​ ಅವರು ಮೂಲತಃ ಡಾನ್ಸರ್​ ಚಿಕ್ಕಮಗಳೂರಿನ ಇವರು ಬಿಗ್​ಬಾಸ್​ 7ರಿಂದ ಸಕತ್​ ಫೇಮಸ್​ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್​. ಡಾನ್ಸ್​ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್​ಲೆಟ್​ಗಳಿವೆ.

ಇನ್ನು ಮಲೈಕಾ ಅವರು ಇದಾಗಲೇ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿರುವುದು ಗೊತ್ತಿರುವ ವಿಷಯವೇ. ಇನ್ನು ಮಲೈಕಾ ವಸುಪಾಲ್‌ ಕುರಿತು ಒಂದಿಷ್ಟು ಹೇಳುವುದಾದರೆ, ಅಪ್ಪ ಅಮ್ಮನ ಬಲವಂತಕ್ಕೆ ಓದಿದರೂ ಜಾಣೆಯಾದ ಮಲೈಕಾ ಇಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ನಂತರ ನಟನೆಯ ಕನಸಿನ ಹಿಂದೆ ಬಿದ್ದಿದ್ದರು. ಸಾಕಷ್ಟು ಸೀರಿಯಲ್ ತಂಡ ಸಂಪರ್ಕಿಸಿ ಅಡಿಷನ್‌ ಕೊಟ್ಟಿದ್ದರು. ಅದಕ್ಕಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಸದಾ ಓಡಾಟ ಮಾಡಿದ್ದರು. ಕೊನೆಗೆ ಹಿಟ್ಲರ್‌ ಕಲ್ಯಾಣ ತಂಡದ ಕಣ್ಣಿಗೆ ಬಿದ್ದರು. ಈ ಸೀರಿಯಲ್‌ಗೋಸ್ಕರ ಮಲೈಕಾ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಬಳಿಕ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿ ಪಾತ್ರ ಗಿಟ್ಟಿಸಿಕೊಂಡು ಮನೆ ಮಾತಾಗಿದ್ದಾರೆ.

ಹಿಟ್ಲರ್​ ಕಲ್ಯಾಣ ಸೀರಿಯಲ್​ನಲ್ಲಿ ಈಕೆ ಎಡವಟ್ಟು ರಾಣಿ ಎನ್ನಿಸಿಕೊಂಡು ಸಕತ್​ ಅಭಿನಯ ಮಾಡಿದ್ದರು. ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ರೀಲ್ಸ್​ ಮಾಡುತ್ತಾ ಜನರಿಗೆ ಹತ್ತಿರವಾಗುತ್ತಿದ್ದಾರೆ. ಧಾರಾವಾಹಿಯಲ್ಲಿ ಸೀರೆಯಲ್ಲಿಯೇ ಮಿಂಚುವ ಲೀಲಾ ಎಂಬ ಮುಗ್ಧ ಚೆಲುವೆ, ನಿಜ ಜೀವನದಲ್ಲಿ ಡ್ಯಾಷಿಂಗ್​ ಮಲೈಕಾ. ಹಾಟ್​ ಫೋಟೋಗಳನ್ನು ಶೇರ್​ ಮಾಡುತ್ತಾ ಯುವಕರ ಹೃದಯ ಕದಿಯುವ ಚೆಲುವೆ ಈಕೆ. ಇವರು ಸಿಕ್ಕಾಪಟ್ಟೆ ಗ್ಲ್ಯಾಮರಸ್ ಬೆಡಗಿ. ಯಾವ ಸಿನಿಮಾ ತಾರೆಗೂ ಈಕೆ ಕಡಿಮೆ ಇಲ್ಲ ಎನ್ನುವಂತೆ ಮಾಡರ್ನ್​ ಡ್ರೆಸ್​ನಲ್ಲಿಯೂ ಮಿಂಚಿ ಫೋಟೋ ಶೇರ್​ ಮಾಡಿಕೊಳ್ಳುತ್ತಾರೆ. ಇನ್ನು ಸೀರೆಯಲ್ಲಿ ಈಕೆ ಕಣ್ಣುಕುಕ್ಕಿಸುವುದು ಧಾರಾವಾಹಿಗಳಲ್ಲಿ ಪ್ರೇಕ್ಷಕರು ನೋಡಿಯೇ ಇರುತ್ತಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?