
ಬಿಗ್ ಬಾಸ್ ಸೀಸನ್ 6ರ ಕಿರೀಟವನ್ನು ನವೀನ್ ಸಜ್ಜು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ ಎಂಬ ಮಾತು ಸಾಮಾಜಿಕ ಜಾಲ ತಾಣಗಗಳಲ್ಲಿ ಕೇಳಿ ಬಂದಿದೆ. ಮೂವರು ಫೈನಲಿಸ್ಟ್‌ಗಳ ಮಧ್ಯೆ ಕಿಚ್ಚ ಸುದೀಪ್ ಯಾರ ಕೈ ಮೇಲೆತ್ತುತ್ತಾರೋ ಕಾದು ನೋಡಬೇಕು.
ನವೀನ್ ನೇರವಾಗಿ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದರು. ಸದ್ಯ, ಮೂರು ಸ್ಪರ್ಧಿಗಳ ಪೈಕಿ ನವೀನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ನವೀನ್ ಈ ಬಾರಿಯ ಬಿಗ್ ಬಾಸ್ ವಿನ್ನರ್ ಎನ್ನುವ ಟಾಕ್ ಹೆಚ್ಚಿದೆ. ನವೀನ್ ಅವರಿಗೆ ಬಿಗ್ ಬಾಸ್ ಗೆಲ್ಲುವ ಎಲ್ಲ ಅರ್ಹತೆಗಳು ಇವೆ ಎಂದು ಜನರು ವಾದ ಮುಂದಿಟ್ಟಿದ್ದಾರೆ.
ಬಿಗ್‌ಬಾಸ್‌ಗೆ ‘ಭಾವಪೂರ್ಣ’ ಶ್ರದ್ಧಾಂಜಲಿ ಸಲ್ಲಿಸಿದ ವೀಕ್ಷಕರು!
ನವೀನ್ ಪರ ಟ್ರೋಲ್‌ಗಳು, ಅಭಿಪ್ರಾಯಗಳು ಮಂಡನೆ ಆಗುತ್ತಿವೆ. ಕೆಲ ಗಾಯಕರು ಸಹ ನವೀನ್ ಸಜ್ಜು ಅವರಿಗೆ ಬೆಂಬಲ ನೀಡುವ ಪೋಸ್ಟ್ ಹಾಕಿದ್ದಾರೆ. 100 ದಿನ ಕಾಲದ ಬಿಗ್ ಬಾಸ್ ಜರ್ನಿ ಮುಕ್ತಾಯವಾಗುತ್ತಿದೆ. ಕಳೆದ ಸಂಚಿಕೆಯಲ್ಲಿಯೂ ಸಹ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಬಿಗ್ ಬಾಸ್ ಆಗಿ ಹೊರ ಹೊಮ್ಮಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.