
ಬಿಗ್ ಬಾಸ್ ಮನೆ ಕಾಲ್ ಸೆಂಟರ್‌ಆಗಿ ಬದಲಾಗಿದೆ. ಬಿಗ್‌ಬಾಸ್ ಈ ವಾರದ ಲಕ್ಸುರಿ ಬಜೆಟ್ ಟಾಸ್ಕ್ ನೀಡಿದ್ದು ಮನೆಯಲ್ಲಿ ಮೊದಲ ಸಾರಿ ‘ಬೀಪ್‘ ಸೌಂಡ್ ಕೇಳಿ ಬಂದಿದೆ.
36 ದಿನ ಬಿಗ್ ಬಾಸ್ ಸ್ಪರ್ಧಿಗಳಿಗೆ ಗ್ರಾಹಕ ಸೇವಾ ಸಿಬ್ಬಂದಿ ಟಾಸ್ಕ್ ನೀಡಿದ್ದಾರೆ. ಜಯಶ್ರೀ, ಸೋನು, ಕವಿತಾ, ಶಶಿ ಮತ್ತು ಧನರಾಜ್ ಸೇವಾ ಸಿಬ್ಬಂದಿ ಆಗಿದ್ದರೆ ಉಳಿದವರು ಕರೆ ಮಾಡುವ ಗ್ರಾಹಕರಾಗಿದ್ದರು.
ಸದ್ದಿಲ್ಲದೇ ವಿದೇಶಿಗನ ಮದುವೆಯಾದ ಕನ್ನಡ ಬಿಗ್‌ಬಾಸ್ ಬೆಡಗಿ
ಸೇವಾ ಸಿಬ್ಬಂದಿಗೆ ಪ್ರಶ್ನೆಗಳ ಬಾಣ ಹರಿದು ಬಂದವು. ಮತ್ತೆ ಕವಿತಾ ಮತ್ತು ಆ್ಯಂಡಿ ಡೀಲ್ ವಿಚಾರವೇ ಚರ್ಚೆಯಾಯಿತು. ಇಷ್ಟು ದಿನ ಸುಮ್ಮನಿದ್ದ ರಾಕೇಶ್ ಸೇವಾ ಸಿಬ್ಬಂದಿಯ ಬೆವರಿಳಿಸಿದರು. ರಾಕೇಶ್ ಕೇಳಿದ ಒಂದೊಂದು ಪ್ರಶ್ನೆಗೂ ಜಯಶ್ರೀ ನಡುಗಿ ಹೋದರು. ಸಾರಿ ಕೇಳುವುದೊಂದನ್ನು ಬಿಟ್ಟು ಜಯಶ್ರೀ ಬಳಿ ಬೇರೆನೂ ಇರಲಿಲ್ಲ.
ಇನ್ನು ಉತ್ತರ ಕರ್ನಾಟಕ ಎನ್ನುತ್ತಿದ್ದ ಸೋನು, ಆ್ಯಂಡಿ ಜತೆ ಡೀಲ್ ಮಾಡಿಕೊಂಡಿದ್ದ ಕವಿತಾ, ಡಿಪ್ಲೋಮಾಟಿಕ್ ಎಂದು ಕರೆಸಿಕೊಂಡಿರುವ ಜಯಶ್ರೀ, ರಾಕೇಶ್ ಬಳಿ ಐರನ್ ಮಾಡಿಸಿಕೊಂಡ ಧನರಾಜ್ ಎಲ್ಲರೂ ಉತ್ತರ ಕೊಡಲು ಹೆಣಗಾಡಬೇಕಾಯಿತು. ಮುಂದೆ ಆಟ ದಲು ಬದಲಾಗಲಿದ್ದು ಯಾರು ಯಾರ ಕಾಲನ್ನು ಹೇಗೆ ಎಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.