ಸದ್ದಿಲ್ಲದೇ ವಿದೇಶಿಗನ ಮದುವೆಯಾದ ಕನ್ನಡ ಬಿಗ್‌ಬಾಸ್‌ ಬೆಡಗಿ

Published : Nov 27, 2018, 08:56 PM IST
ಸದ್ದಿಲ್ಲದೇ ವಿದೇಶಿಗನ ಮದುವೆಯಾದ ಕನ್ನಡ ಬಿಗ್‌ಬಾಸ್‌ ಬೆಡಗಿ

ಸಾರಾಂಶ

ಬಿಗ್‌ಬಾಸ್ ಮನೆಯಲ್ಲಿ ವಾದ-ವಿವಾದ, ಮಾತು-ಗಲಾಟೆ  ಎಲ್ಲವೂ ಜೋರಾಗಿ ನಡೆಯುತ್ತಲೇ ಇದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡು ಹೊರಬಂದಿದ್ದ ಸ್ನೇಹಾ ಆಚಾರ್ಯ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್‌ಗೆ ಕಾಲಿಡುವ ಮುನ್ನವೇ ಸ್ನೇಹಾ ಆಚಾರ್ಯ ಮದುವೆ ನಿಕ್ಕಿ ಮಾಡಿಕೊಂಡಿದ್ದರು. ಆದರೆ ಸಿಕ್ಕ ಅವಕಾಶ ಕೈ ಚೆಲ್ಲಲು ಮನಸ್ಸು ಮಾಡದ ಸ್ನೇಹ ಬಿಗ್‌ ಬಾಸ್‌ಗೆ ಬಂದಿದ್ದರು. ಅಮೆರಿಕದ ರಾಯನ್  ಎಂಬುವರ ಜತೆ ಸ್ನೇಹ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನ್ಯೂಯಾರ್ಕ್‍ನ ರಾಯನ್ ಕೊಪ್ಕೊ ಹಾಗೂ ಸ್ನೇಹ ನಡುವೆ ಪ್ರೇಮಾಂಕುರವಾಗಿದ್ದು, ನವೆಂಬರ್ 25ರಂದು ಮದುವೆಯಾಗಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಎಂ. ಸಿರಿ ಕನ್ವೆನ್ಷನ್ ಹಾಲ್'ನಲ್ಲಿ ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿದೆ. ಸ್ನೇಹ ತಮ್ಮ ಭಾವಿ ಪತಿ ಅಂದರೆ ಈಗ ಮದುವೆಯಾಗಿರುವ ರಾಯನ್ ಅವರನ್ನು ಬಿಗ್‌ಬಾಸ್ ವೇದಿಕೆಗೆ ಕರೆದುಕೊಂಡು ಬಂದಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ
ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ