
ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಇರಬೇಕು ಅಂದರೆ ಮೋಸ ಮಾಡುವುದು ಗೊತ್ತಿರಬೇಕಂತೆ. ಮನಮೆ ಒಳಗೆ ಇರುವ ಆ್ಯಂಡಿಯಂಥಹ ಕ್ರೂರಿ ಇನ್ನೊಬ್ಬ ಇಲ್ಲ.. ಇದು ಬಿಗ್ ಬಾಸ್ ಮನೆಯಿಂದ ಹೊರಬಂದ ರವಿ ಸುದೀಪ್ ಅವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವಾಗ ಹೇಳಿದ ಮಾತು.
ರಶ್ಮಿ ಬಗ್ಗೆಯೂ ಕಾಲೆಳೆದ ರವಿ ಆಕೆ ಏನು ಮಾಡುತ್ತಾಳೆ ಎಂದು ಅವಳಿಗೆ ಗೊತ್ತಿರುವುದುದಿಲ್ಲ. ಒಂದು ದಿನ ಬೆಳಗ್ಗೆ ಹಾಡೊಂದನ್ನು ಹಾಕಿದಾಗ ಚಪ್ಪಲಿ, ಶೂಗಳನ್ನು ಕದ್ದುಕೊಂಡು ಹೋಗಿ ಬೇರೆ ಕಡೆ ಇಟ್ಟಿದ್ದಳು..ಕಾರಣ ಕೇಳಿದರೆ ಇದನ್ನು ಟಾಸ್ಕ್ ಎಂದು ಹೇಳಿದಳು ಎಂದರು.
ಮನೆಯಲ್ಲಿ ಗಂಡ-ಹೆಂಡತಿ, ಕವಿತಾಗೆ ಮಸಾಜ್ ಮಾಡಿದ ರೈತ!
ಸೋನು ಪಾಟೀಲ್ ಒಂಥರಾ ಖಾಲಿ ಡಬ್ಬದಲ್ಲಿ ಕಲ್ಲು ಹಾಕಿ ತಿರುಗಿಸಿದಂತೆ... ಇನ್ನು ಜಯಶ್ರೀ ಪಕ್ಕಾ ತಂತ್ರಗಾರಿಕೆ,,, ಕವಿತಾ ಗೌಡ ಜಯಶ್ರೀಯ ಕೈ ಚೀಲ ಎಂದು ಹೇಳಿದರು. ಶಶಿ ಇನ್ನು ಬೆಳೆಯಬೇಕು.. ಎಳೆಯ ಹುಡುಗ.ಇಗೋ ಇದೆ ಎಂದರು.. ಅಕ್ಷತಾ ಪಕ್ಕಾ ಡ್ರಾಮಾ ಕ್ವೀನ್ ಎಂದು ಒತ್ತಿ ಹೇಳಿದರು.
ರಶ್ಮಿ ಜೈಲಿಗೆ, ಆ್ಯಂಡಿ-ಕವಿತಾ ಕಿತ್ತಾಟ, ಶಶಿ ಗುದ್ದಿದ್ದು ಯಾರಿಗೆ? ಅಭಿಪ್ರಾಯ
ನವೀನ್ ಸಜ್ಜು, ಧನರಾಜ್, ಮುರಳಿ ಫೈನಲ್‌ಗೆ ಏರಬಹುದು. ಮನೆಯಲ್ಲಿ ಮುಕ್ತವಾಗಿ ನಗಲು ಸ್ವಾತಂತ್ರ್ಯವಿಲ್ಲ. ಮನೆಗೆ ಹೋದ ಮೇಲೆ ನಗುವುದನ್ನು ಕಲಿಯುತ್ತೇನೆ ಎಂದು ಜಿಮ್ ರವಿ ಹೇಳಿದರು. ಸುದೀಪ್ ಪ್ರೊ ಕಬಡ್ಡಿಯ ಜರ್ಸಿ ನೀಡಿ ಅವರನ್ನು ಬೀಳ್ಕೊಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.