
ಬಿಗ್ ಬಾಸ್ ಮನೆ ಮಂದಿ ಈ ರೀತಿ ಶಾಕ್ ತೆಗೆದುಕೊಳ್ಳುವುದು ಇದೇ ಮೊದಲೇನಲ್ಲ. ನಿಯಮದಂತೆ ಹೊರಗಿನ ವಿಚಾರಗಳು ಒಳಗಿನ ಮನೆ ಮಂದಿಗೆ ಗೊತ್ತಾಗಬಾರದು. ಅವರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ಇದೆ. ಆದರೆ ಕೆಲವೊಂದು ವಿಚಾರಗಳನ್ನು ಬಿಗ್‌ಬಾಸ್ ತಾವೆ ಮುಂದಾಗಿ ಹೇಳುತ್ತಾರೆ.
ನೋಟ್ ಬ್ಯಾನ್: ಸೀನನ್ 4 ರ ವೇಳೆ ಡಿ ಮಾನಿಟೈಜೇಶನ್ ಮಾಡಲಾಗಿತ್ತು. ನವೆಂಬರ್ 8 ರಂದು ನಡೆದ ಕಾರ್ಯದ ನಂತರ ದೇಶದ ಅರ್ಥ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು. ಈ ವೇಳೆ ಒಂದು ವಾರದ ನಂತರ ಸ್ಪರ್ಧಿಗಳಿಗೆ ನೋಟ್ ಬ್ಯಾನ್ ವಿಚಾರ ತಿಳಿಸಲಾಘಿತ್ತು. ಮನೆಯಲ್ಲಿದ್ದ ಸಂಜನಾ ಅವರಿಗೆ ಸುದೀಪ್ ಸಾವಿರ ರೂ. ನೋಟುಗಳಲ್ಲೇ ನೀವು ಗೆದ್ದರೆ ಹಣ ನೀಡುತ್ತೇನೆ ಎಂದು ಕಾಲೆಳೆದಿದ್ದರು.
ಜಯಲಲಿತಾ ನಿಧನ: ತಮಿಳುನಾಡಿನಲ್ಲಿ ಅಮ್ಮನಾಗಿ ಮೆರೆದ ಜಯಲಲಿತಾ ನಿಧನರಾದ ಸುದ್ದಿಯನ್ನು ಮನೆ ಮಂದಿಗೆ ತಿಳಿಸಲಾಗಿತ್ತು. ಚಂದನ್ ಶೆಟ್ಟಿ ಜಯಗಳಿಸಿದ ಆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳು ಆಘಾತ ಅನುಭವಿಸಿದ್ದರು.
ಅಂಬಿ ನಿಧನ: ಅಂಬರೀಶ್ ನಿಧನದ ಸುದ್ದಿಯನ್ನು ಈ ಬಾರಿಯ ಬಿಗ್ ಬಾಸ್ ಮನೆಗೆ ತಿಳಿಸಲಾಗಿದೆ. ಮನೆ ಮಂದಿ ಭಾನುವಾರದ ಸಂಚಿಕೆಯಲ್ಲಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.