ಹೇಳುವುದು ಒಂದು.. ಮಾಡುವುದು ಇನ್ನೊಂದು...ಮದುವೆ ಸಂಭ್ರಮದಲ್ಲಿದ್ದ ಪಿಗ್ಗಿ ಮೇಲೆ ದಾಳಿ!

Published : Dec 02, 2018, 05:16 PM ISTUpdated : Dec 02, 2018, 05:23 PM IST
ಹೇಳುವುದು ಒಂದು.. ಮಾಡುವುದು ಇನ್ನೊಂದು...ಮದುವೆ ಸಂಭ್ರಮದಲ್ಲಿದ್ದ ಪಿಗ್ಗಿ ಮೇಲೆ ದಾಳಿ!

ಸಾರಾಂಶ

ಈ ಕೆಲ ಸೆಲೆಬ್ರಿಟಿಗಳು ರಾಜಕಾರಣಿಗಳ ತರಹವೇ ಆಗಿಹೋಗಿದ್ದಾರೆ. ಹೇಳುವುದು ಒಂದು.. ಮಾಡುವುದು ಇನ್ನೊಂದು... ಅಂಥದ್ದೇ ಒಂದು ಸಂದರ್ಭಕ್ಕೆ ಬಾಲಿವುಡ್ ತಾರೆ ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ವಿವಾಹ ಸಾಕ್ಷಿಯಾಗಿದೆ. ಸೋಶಿಯಮ್ ಮೀಡಿಯಾ ಮಂದಿ ಪ್ರಿಯಾಂಕಾ ಮೇಲೆ ದಾಳಿ ಮಾಡಿದ್ದಾರೆ.

ಬೆಂಗಳೂರು[ಡಿ.02]  ಜೋಧಪುರದ ಉಮೈದ್ ಭವನದಲ್ಲಿ ಪ್ರಿಯಾಂಕ-ನಿಕ್ ಜೋನಸ್ ವಿವಾಹ ಕ್ರಿಶ್ಚಿಯನ್ ಸಂಪ್ರದಾಯದಂತೆ ಮುಗಿದಿದೆ. ಆದರೆ ಟ್ವಿಟಿಗರು ಮಾತ್ರ ಪ್ರಿಯಾಂಕಾ ವಿರುದ್ಧ ಕೆಂಡಾಮಂಡಲವಾಗಿದ್ದು ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ. ಹಾಗಾದರೆ ಏನು ಕಾರಣ?

ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವುದಕ್ಕೆ ಸುಪ್ರೀಂ ಕೋರ್ಟ್ ಕಾಲಾವಧಿ ನಿಗದಿ ಮಾಡಿತ್ತು. ನಟಿ ಪ್ರಿಯಾಂಕಾ ಛೋಪ್ರಾ ಸಹ ಪಟಾಕಿ ಸಿಡಿಸುವುದರಿಂದ ಆರೋಗ್ಯದ ಮೇಲೆ ಯಾಔ ರೀತಿ ದುಷ್ಪರಿಣಾಮ ಆಗಲಿದೆ ಎಂದು ಜಾಗೃತಿ ಮೂಡಿಸಿದ್ದರು. ಉಸಿರಾಟದ ಸಮಸ್ಯೆ ಇರುವವರು ಮತ್ತಷ್ಟು ಸಂಕಷ್ಟ ಪಡಬೇಕಾಗುತ್ತದೆ ಎಂದು ಸ್ವತಃ ಆಸ್ತಮಾ  ಎದುರಿಸುತ್ತಿರುವ ಪ್ರಿಯಾಂಕಾ ಪಟಾಕಿ ಬೇಡ ಎಂದು ಮನವಿ ಮಾಡಿಕೊಂಡಿದ್ದರು.

ಅಬ್ಬಬ್ಬಾ... ನಿಕ್ ಪೃಷ್ಠದ ಮೇಲೆ ಬಾರಿಸಿದ ಪ್ರಿಯಾಂಕಾ!

ಆದರೆ ಮದುವೆ ಸಂಭ್ರದಲ್ಲಿ ಇರುವ ಪ್ರಿಯಾಂಕಾ ಅದೇ ಖುಷಿಯಲ್ಲಿ ಹಲವು ನಿಮಿಷಗಳ ಕಾಲ ಪಟಾಕಿ ಸಿಡಿಸಿದ್ದಾರೆ ಎನ್ನುವುದಕ್ಕಿಂತ ಅವರ ಕುಟುಂಬ ಮತ್ತು ಸ್ನೇಹಿತರು ಲಕ್ಷಾಂತರ ರೂ. ಪಟಾಕಿ ಸಿಡಿಸಿದ್ದಾರೆ. ಇದೇ ವಿಚಾರ ಇಟ್ಟುಕೊಂಡ ಸಾಮಾಜಿಕ ಜಾಲತಾಣಿಗರು ಪ್ರಿಯಾಂಕಾ ಕಿವಿ ಹಿಂಡಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?