'ಬಿಗ್ ಬಾಸ್ ಕನ್ನಡ 10'ರ ಮೊಟ್ಟ ಮೊದಲ ಪ್ರೋಮೋ ಔಟ್: ಈ ಬಾರಿಯ ಸಂಥಿಂಗ್ ಸ್ಪೆಷಲ್ ಏನು ಗೊತ್ತಾ?

By Govindaraj S  |  First Published Sep 2, 2023, 9:49 PM IST

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಸೀಸನ್​ಗೆ ತಯಾರಿ ಶುರುವಾಗಿದ್ದು, ಅತೀ ಶೀಘ್ರದಲ್ಲೇ ಆರಂಭವಾಗಲಿದೆ. ಹೌದು! ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದ ಮೊಟ್ಟ ಮೊದಲ ಪ್ರೋಮೋ ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.


ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಸೀಸನ್​ಗೆ ತಯಾರಿ ಶುರುವಾಗಿದ್ದು, ಅತೀ ಶೀಘ್ರದಲ್ಲೇ ಆರಂಭವಾಗಲಿದೆ. ಹೌದು! ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದ ಮೊಟ್ಟ ಮೊದಲ ಪ್ರೋಮೋ ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ‘ಬಿಗ್ ಬಾಸ್ ಕನ್ನಡ 10’ ಮೊದಲ ಪ್ರೋಮೋದಲ್ಲಿ ಬಿಗ್ ಬಾಸ್ ವಾಯ್ಸ್ ಇದೆ. ನಮಸ್ತೆ ಕರ್ನಾಟಕ.. ಹೇಗಿದ್ದೀರಾ? ನನ್ನ ಮಿಸ್ ಮಾಡಿಕೊಂಡ್ರಾ? ಇಟ್ಟ ನೋಟ ಗಟ್ಟಿಯಾಗಿದೆ. ಆಟ ಮತ್ತೆ ಶುರುವಾಗುತ್ತಿದೆ. ಆದರೆ ಈ ಬಾರಿ ಸಂಥಿಂಗ್ ಸ್ಪೆಷಲ್. 

ವೆಲ್‌ ಕಮ್‌ ಟು ಬಿಗ್ ಬಾಸ್ ಸೀಸನ್ 10 ಎಂದು ಪ್ರೋಮೋದಲ್ಲಿ ಬಿಗ್ ಬಾಸ್ ಹೇಳಿದ್ದಾರೆ. ಹಾಗಾದ್ರೆ, ಸಂಥಿಂಗ್ ಸ್ಪೆಷಲ್ ಏನು? ಈ ಕುರಿತಾದ ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ವಿಶೇಷವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ 50ನೇ ಜನ್ಮದಿನದಂದೇ ಬಿಗ್ ಬಾಸ್ ಕನ್ನಡ 1 ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಅಲ್ಲದೇ  ಮಾತಿನಲ್ಲಿ ಗತ್ತು, ನಡತೆಯಲ್ಲಿ ಸ್ವಾತಿ ಮುತ್ತು.. ದೊಡ್ಡ ಪರದೆಯ ಅಭಿನಯ ಚಕ್ರವರ್ತಿ, ಸಣ್ಣ ಪರದೆಯ ಬಿಗ್ ಬಾಸ್. 
 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Colors Kannada Official (@colorskannadaofficial)


ನಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್‌ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕಲರ್ಸ್ ಕನ್ನಡ ವಾಹಿನಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದೆ. ಇನ್ನು ಬಿಗ್ ಬಾಸ್ ಕನ್ನಡ ಮೊದಲ ಸೀಸನ್‌ನಿಂದಲೂ ಹೋಸ್ಟ್ ಮಾಡುತ್ತಿರುವವರು ಕಿಚ್ಚ ಸುದೀಪ್. ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್ ಇಲ್ಲದೆ ಬಿಗ್ ಬಾಸ್ ಊಹಿಸಿಕೊಳ್ಳುವುದು ಕಷ್ಟ. ಹೀಗಾಗಿ ಕಿಚ್ಚ ಸುದೀಪ್ ಅವರ ಜನ್ಮದಿನದಂದೇ ‘ಬಿಗ್ ಬಾಸ್’ ಹೊಸ ಸೀಸನ್ ಪ್ರೋಮೋ ಲಾಂಚ್ ಮಾಡಲಾಗಿದೆ. 

ಪತ್ನಿ ಮತ್ತು ಮಗಳೊಂದಿಗೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್: ಸ್ಪೆಷಲ್ ಫೋಟೋಸ್ ಇಲ್ಲಿವೆ!

ಎಂದಿನಂತೆ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಶೋಗೆ ದೊಡ್ಡ ಸೆಟ್‌ ಹಾಕಲಾಗಿದೆ. ಇನ್ನು ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ,  ಹುಚ್ಚ ಸಿನೆಮಾದ ನಟಿ ರೇಖಾ, ನಟಿ ಆಶಾ ಭಟ್, ರೀಲ್ಸ್ ನಲ್ಲಿ ಫೇಮಸ್‌ ಆಗಿರುವ ಭೂಮಿಕಾ ಬಸವರಾಜ್ ಅವರು ಸ್ಪರ್ಧಿಗಳಾಗಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಏನೇ ಆದರೂ ಆಡಿಶನ್ ನಡೆದು ಶೋ ಆರಂಭವಾದ ಬಳಿಕ ದೊಡ್ಮನೆಗೆ ಯಾರೆಲ್ಲ ಎಂಟ್ರಿ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

click me!