
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟ ಬೆನ್ನಲ್ಲೇ ಆಟದ ವರಸೆಯೇ ಬದಲಾಗಿದೆ. ಈ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಭಾರಿ ಕುತೂಹಲ ಮೂಡಿಸಿತ್ತು. ಆದರೆ, ಟಾಸ್ಕ್ ಉಸ್ತುವಾರಿಗಳಾದ (ಸಂಚಾಲಕರು) ಮಾಡ್ರನ್ ಮಹಾಕವಿ ಮಂಜು ಹಾಗೂ ಲಿಖಿತ್ ಗೊಂಡಿ ಮಾಡಿದ ಎಡವಟ್ಟಿನಿಂದಾಗಿ ಬಿಗ್ ಬಾಸ್ ಇಡೀ ಕ್ಯಾಪ್ಟನ್ಸಿ ಟಾಸ್ಕ್ ಅನ್ನೇ ರದ್ದುಗೊಳಿಸಿ ಶಾಕ್ ನೀಡಿದ್ದಾರೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಗಾನವಿ ಗೌಡ, ಪ್ರಶಾಂತ್ ಗೌಡ ಹಾಗೂ ಸೋನಿಕಾ ಗೌಡ ಕಾಲಿಟ್ಟಿದ್ದರು. ಈ ಮೂವರಲ್ಲಿ ಯಾರು ಕ್ಯಾಪ್ಟನ್ ಆಗಲು ಅರ್ಹರು ಎಂದು ತಮ್ಮ ಅಭಿಪ್ರಾಯ ತಿಳಿಸುವಂತೆ ಬಿಗ್ ಬಾಸ್ ಹಳೆಯ ಸ್ಪರ್ಧಿಗಳಿಗೆ ಸೂಚಿಸಿದ್ದರು. ಬಹುತೇಕರು ಗಾನವಿ ಹಾಗೂ ಪ್ರಶಾಂತ್ ಪರವಾಗಿ ಮತ ಹಾಕಿದರು. ಹೀಗಾಗಿ ಸೋನಿಕಾ ಅವರು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಬಿದ್ದರು. ತರುವಾಯ ಗಾನವಿ ಹಾಗೂ ಪ್ರಶಾಂತ್ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ ಆಡಲು ಅರ್ಹರೆಂದು ಘೋಷಿಸಲಾಯಿತು.
ಕ್ಯಾಪ್ಟನ್ಸಿ ಟಾಸ್ಕ್ ಆಡಲು ಸಹ ಸ್ಪರ್ಧಿಗಳಿಂದ ಹೆಚ್ಚು ಮತ ಪಡೆದ ಗಾನವಿ ಗೌಡ ಹಾಗೂ ಪ್ರಶಾಂತ್ ಇಬ್ಬರಿಗೂ ಇತರೆ ಸದಸ್ಯರ ಪೈಕಿ ತಲಾ ಐವರನ್ನು ಆಯ್ಕೆ ಮಾಡಿಕೊಂಡು ಎರಡು ತಂಡಗಳನ್ನು ರಚಿಸುವಂತೆ ಸೂಚಿಸಲಾಯಿತು. ಇದಕ್ಕೂ ಮುನ್ನ, ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮಾಡ್ರನ್ ಮಹಾಕವಿ ಮಂಜು ಹಾಗೂ ಲಿಖಿತ್ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟಿದ್ದರು. ಹೀಗಾಗಿ, ಇವರಿಬ್ಬರಿಗೂ ಟಾಸ್ಕ್ ನಡೆಸಿಕೊಡುವ ಉಸ್ತುವಾರಿ ಜವಾಬ್ದಾರಿಯನ್ನು ಬಿಗ್ ಬಾಸ್ ನೀಡಿದ್ದರು.
ಕ್ಯಾಪ್ಟನ್ಸಿಗಾಗಿ ನಡೆದ ಮೊದಲ ಟಾಸ್ಕ್‌ನಲ್ಲಿ ಗಾನವಿ ಗೌಡ ನೇತೃತ್ವದ 'ಹಸಿರು ತಂಡ' ಜಯಗಳಿಸಿತ್ತು. ಆ ಬಳಿಕ, ಸುಳಿಯಾಕಾರದಲ್ಲಿ ಗಂಟುಬಿದ್ದಿದ್ದ ಹಗ್ಗವನ್ನು ಬಿಡಿಸುವ ಎರಡನೇ ಟಾಸ್ಕ್ ನೀಡಲಾಯಿತು. ಮೇಲಿನ ತುದಿಯಿಂದ ಬಂದಿದ್ದ ಹಗ್ಗದ ಗಂಟನ್ನು ಬಿಡಿಸಿ ನೇರ ಮಾಡಿ, ಕೊಂಡಿಗಳಿಗೆ ಸಿಕ್ಕಿಸುವುದು ಆಟದ ನಿಯಮವಾಗಿತ್ತು. ಆದರೆ, ಈ ಟಾಸ್ಕ್ ಅನ್ನು ಆಡಿಸುವಾಗ ಉಸ್ತುವಾರಿಗಳಾದ ಮಂಜು ಮತ್ತು ಲಿಖಿತ್ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಗೊಂದಲ ಸೃಷ್ಟಿಸಿ ತಪ್ಪು ನಿರ್ಧಾರ ಕೈಗೊಂಡರು.
ಸಂಚಾಲಕರು ನಿಯಮಗಳನ್ನು ಸರಿಯಾಗಿ ಪಾಲಿಸದೇ ಆಟವಾಡಿಸಿದ್ದಲ್ಲದೆ, ಮತ್ತೊಮ್ಮೆ ಆಟವಾಡಿಸುವ ನಿರ್ಧಾರಕ್ಕೆ ಮುಂದಾದರು. ಇವರ ಈ ಗೊಂದಲದ ನಿರ್ಧಾರಗಳಿಂದ ತೀವ್ರ ಅಸಮಾಧಾನಗೊಂಡ ಬಿಗ್ ಬಾಸ್, ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ ಅನ್ನೇ ರದ್ದುಗೊಳಿಸಿ ಆದೇಶ ಹೊರಡಿಸಿದರು.
Captaincy ಓಟವೇ ರದ್ದು!
ಬಿಗ್ ಬಾಸ್ | ಸೋಮ - ಶುಕ್ರ ರಾತ್ರಿ 9:30 | ಶನಿ - ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo pic.twitter.com/M2zRyx3yV2— Colors Kannada (@ColorsKannada) September 30, 2026
ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ರದ್ದುಗೊಳಿಸಿರುವುದರಿಂದ ಮನೆಯ ಮುಂದಿನ ವಾತಾವರಣ ತೀವ್ರ ಕುತೂಹಲ ಕೆರಳಿಸಿದೆ. ಒಂದು ವೇಳೆ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಸಂಪೂರ್ಣ ರದ್ದಾದರೆ, ಇಡೀ ವಾರ ಮನೆಗೆ ಯಾವುದೇ ಕ್ಯಾಪ್ಟನ್ ಇರುವುದಿಲ್ಲ. ಜೊತೆಗೆ ಯಾವೊಬ್ಬ ಸ್ಪರ್ಧಿಗೂ ಕ್ಯಾಪ್ಟನ್ ಕೊಠಡಿ ಹಾಗೂ ವಿಶೇಷ ಸೌಲಭ್ಯಗಳು ಸಿಗುವುದಿಲ್ಲ ಎಂಬ ಆತಂಕ ಮನೆಮಂದಿಗೆ ಎದುರಾಗಿದೆ. ಉಸ್ತುವಾರಿಗಳ ತಪ್ಪಿಗೆ ಇಡೀ ಮನೆ ಬೆಲೆ ತೆರುವಂತಾಗಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.