
ಬಿಗ್'ಬಾಸ್ ವಿಜೇತರನ್ನು ಘೋಷಿಸಲು ಇನ್ನೇನು 3 ದಿನಗಳು ಬಾಕಿಯಿವೆ. ಮನೆಯಲ್ಲೂ ಸಹ ಕಳೆದೆರಡು ದಿನಗಳಿಂದ ಸ್ಪರ್ಧಿಗಳ ವರ್ತನೆ ಕೂಡ ಬದಲಾಗುತ್ತಿದೆ. ಅಂತಹ ವಿಚಿತ್ರ ಏನು ನಡೆಯುತ್ತಿದೆ ಗೊತ್ತೆ? ಬಿಗ್ ಬಾಸ್ ಮನೆಯಲ್ಲಿರುವ ಮಾಳವೀಕಾ, ರೇಖಾ, ಮೋಹನ್ ಹಾಗೂ ಕೀರ್ತಿ ಎಲ್ಲರೂ ಪ್ರಥಮ್'ನನ್ನು ಮಾತನಾಡಿಸಲು ಶುರು ಮಾಡಿದ್ದಾರೆ.
ಬಹುಶಃ ಎಲ್ಲರಿಗೂ ಈಗ ಅರಿವಾಗಿದೆ ಹೊರಗಿನ ಪ್ರಪಂಚದಲ್ಲಿ ಪ್ರಥಮ್'ನ ಖ್ಯಾತಿ ಹೆಚ್ಚಾಗಿದೆಯಂದು. ಈಗಾಗಲೇ ಓಟಾದ ಪ್ರತಿಯೊಬ್ಬ ಸ್ಪರ್ಧಿಗಳೆಲ್ಲರೂ ಮನೆಗೆ ಭೇಟಿ ನೀಡಿದ್ದರು. ಅವರೆಲ್ಲರೂ ಪ್ರಥಮ್ ಖ್ಯಾತಿ ಹೆಚ್ಚಾಗಿದೆ. ನೀವೆಲ್ಲರೂ ಆತನನ್ನು ತಿರಸ್ಕರಿಸುತ್ತಿರುವುದು ವೀಕ್ಷಕರು ಗಮನಿಸುತ್ತಿದ್ದಾರೆ ಎಂದು ಉಳಿದ ಸ್ಪರ್ಧಿಗಳಿಗೆ ಮನಮುಟ್ಟಿಸಿರುವ ಕಾರಣ ಇನ್ನಿರುವ ಕೆಲವು ದಿನಗಳಲ್ಲಾದರೂ ಪ್ರಥಮ್ ಜೊತೆ ಮಾತನಾಡಿ ತಮ್ಮ ಖ್ಯಾತಿಯನ್ನು ಉಳಿಸಿಕೊಳ್ಳೂಣವೆನ್ನುವುದು ಅವರೆಲ್ಲರ ಆಲೋಚನೆ.
ಕೊನೆಯ ದಿನಗಳಲ್ಲಾದರೂ ಪ್ರಥಮ್ ನಮಗೆಲ್ಲರಿಗಿಂತಲೂ ಪ್ರಬಲ ಸ್ಪರ್ಧಿ ಎನ್ನುವುದು ಉಳಿದವರಿಗೆ ಗೊತ್ತಾಗಿದ್ದು ಆದರೆ ಇದು ತುಸು ವಿಳಂಬವಾಗಿದೆ. ಏಕಂದರೆ ಪ್ರಥಮ್ ಬಂದ ಮೊದಲ ದಿನದಿಂದಲೂ ಸದಸ್ಯರೆಲ್ಲರೂ ಆತನನ್ನು ಎಲ್ಲರೂ ಗೇಲಿ ಮಾಡುತ್ತಿದ್ದರೂ ಕಾಟಚಾರಕ್ಕೆಂದು ಮಾತನಾಡಿ ಉದ್ದೇಶಪೂರ್ವಕವಾಗಿ ದೂರವಿಡಲು ಪ್ರಯತ್ನಿಸುತ್ತಿದ್ದರು. ಇನ್ನೊಂದು ವಿಷಯ ಪ್ರಥಮ್ ನಡವಳಿಕೆ ಕೂಡ ಈಗ ಬದಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.