
ಮುಂಬೈ(ಜ.25): ಸಾಮಾನ್ಯ ಜನರಿಗೂ ಬಿಗ್ ಮನೆಗೆ ಹೋಗುವ ಅವಕಾಶ ನೀಡಿ, ತಾವೂ ಸೆಲೆಬ್ರಿಟಿಗಳಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸಲು ಅವಕಾಶ ನೀಡಿದ್ದ ಹಿಂದಿ ಬಿಗ್ ಬಾಸ್ ಸೀಜನ್ 10 ರಲ್ಲಿ ಬಹುದೊಡ್ಡ ಟ್ವಿಸ್ಟ್ ಎದುರಾಗಿದೆ. ಗ್ರ್ಯಾಂಡ್ ಫಿನಾಲೆಗೆ ಕೆಲವೇ ಇನ್ನು ಮೂರು ದಿನಗಳು ಬಾಕಿ ಇರುವಾಗಲೇ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಸಿಕ್ಕಿದೆ. ಅಷ್ಟಕ್ಕೂ ಆ ಶಾಕಿಂಗ್ ನ್ಯೂಸ್ ಏನಂತೀರಾ? ಇಲ್ಲಿದೆ ವಿವರ
ಸಾಮಾನ್ಯ ಜನರು ಹಾಗೂ ಸೆಲೆಬ್ರಿಟಿಗಳ ನಡುವಿನ ಸ್ಪರ್ಧೆ ಈ ಬಾರಿಯ ಹಿಂದಿ ಬಿಗ್ ಬಾಸ್ ಶೋನ ಪ್ರಮುಖ ಆಕರ್ಷಣೆಯಾಗಿತ್ತು. ಮನೆಯೊಳಗೆ ಹೋದ ಸಾಮಾನ್ಯ ಜನರು ಸೆಲೆಬ್ರಿಟಿಗಳಿಗೇ ಸ್ಪರ್ಧೆಯೊಡ್ಡಿ ತಾವೂ ಕಮ್ಮಿ ಇಲ್ಲ ಎಂಬುವುದನ್ನು ಸಾಬೀತುಪಡಿಸಿದ್ದರು. ಇವರ ಈ ಹುಮ್ಮಸ್ಸು ಕಂಡು ಸೆಲೆಬ್ರಿಟಿಗಳಿಗೇ ಬೆವರಿಳಿದಿತ್ತು. ಹೀಗಾಗಿಯೇ ಸಾಮಾನ್ಯ ಜನರನ್ನು ದೂರವಿಟ್ಟು ತಮ್ಮದೇ ಒಂದು ಗುಇಂಪು ಮಾಡಿದ್ದರು. ಆದರೆ ತಮಗಿಂತ ಹೆಚ್ಚು ಸಾಮಾನ್ಯ ಜನರೇ ಪ್ರೇಕ್ಷಕರ ಮನಗೆದ್ದು ಫೇಮಸ್ ಆಗುತ್ತಿರುವುದನನ್ನು ಕಂಡ ಇವರು ದಿನಗಳೆದಂತೆ ಆತ್ಮೀಯರಾಗಿದ್ದರು. ಅಸಮಾಧಾನವಿದ್ದರೂ ಎಲ್ಲೂ ಬಹಿರಂಗಪಡಿಸುತ್ತಿರಲಿಲ್ಲ.
ಹೀಗಿರುವಾಗ ಕಳೆದ ವಾರದಲ್ಲಿ ಮೊನಾಲಿಸಾ, ರೋಹನ್ ಹಾಗೂ ಬಾನಿ ಎಂಬ ಮೂವರು ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದು, ಮೊನಾಲಿಸಾ ಕಡಿಮೆ ಮತಗಳನ್ನು ಪಡೆದಿದ್ದರಿಂದ ಮನೆಯಿಂದ ಹೊರ ನಡೆದಿದ್ದರು. ಈ ವಾರ ಬಿಗ್ ಬಾಸ್ ಸೀಜನ್ 10 ರ ಕೊನೆಯ ವಾರವಾಗಿದ್ದು, ಮುಂದಿನ ಭಾನುವಾರ ಗ್ರ್ಯಾಂಡ್ ಫಿನಾಲೆ. ಹೀಗಿರುವಾಗ ಬಾನಿ ಹಾಗೂ ರೋಹನ್ ತಾವಿಬ್ಬರೂ ಸೇಫ್ ಇನ್ನೇನಿದ್ದರೂ ಗ್ರ್ಯಾಂಡ್ ಫಿನಾಲೆ ಎಂಬ ಖುಷಿಯಲ್ಲಿರುವಾಗಲೇ ಬಿಗ್ ಬಾ್ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಗ್ರ್ಯಾಂಡ್ ಫಿನಾಲೆಗೂ ಮೊದಲು ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರ ಹೋಗುತ್ತಾರೆ ಎಂಬ ಆದೇಶ ಹೊರಡಿಸಿದ್ದು, ಮಂಗಳವಾರ ತಡರಾತ್ರಿ ಎಲಿಮಿನೇಷನ್ ನಡೆದಿದೆ.
ಕಳೆದ ವಾರ ನಾಮಿನೇಟ್ ಆದ ಬಾನಿ ಹಾಗೂ ರೋಹನ್ ನಡುವೆ ಈ ಎಲಿಮಿನೇಷನ್ ನಡೆದಿದ್ದು, ಖ್ಯಾತ ಕಿರುತೆರೆ ನಟ ಹಾಗೂ ಬಿಗ್ ಮನೆಯ ಸ್ಟ್ರಂಗ್ ಸ್ಪರ್ಧಿ ರೋಹನ್ ಮೆಹ್ರಾ ಹೊರ ಹೋಗಿದ್ದಾರೆ. ಈ ಮೂಲಕ ವಿಜೆ ಬಾನಿ, ಲೋಪಾಮುದ್ರಾ ರಾವತ್, ಮನ್ವೀರ್ ಗುರ್ಜರ್ ಹಾಗೂ ಮನು ಪಂಜಾಬಿ ಈ ಸೀಜನ್'ನ ಫೈನಲಿಸ್ಟ್'ಗಳಾಗಿದ್ದಾರೆ. ಇನ್ನು ಟ್ರೋಫಿ ಜನಸಾಮಾನ್ಯರ ಪಾಲಾಗುತ್ತಾ ಇಲ್ಲ ಸೆಲೆಬ್ರಿಟಿಗಳ ಪಾಲಾಗುತ್ತಾ ಎಂಬುವುದನ್ನು ಕಾದು ನೋಡಬೇಕಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.