
ಬೆಂಗಳೂರು(ಜು.26): ನಟ ಭುವನ್ ಹಾಗೂ ಪ್ರಥಮ್ ನಡುವಿನ ಕಚ್ಚಾಟ ಇನ್ನೂ ನಿಲ್ಲುವ ಲಕ್ಷಣಗಳೇ ಕಾಣ್ತಿಲ್ಲ. ಯಾಕಂದರೆ ಇಬ್ಬರ ನಡುವಿನ ಜಗಳಕ್ಕೆ ಜಗಳಕ್ಕೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಭುವನ್ ಹಾಗೂ ಪ್ರಥಮ್ ನಡುವೆ ರಾಜಿಗೆ ಸುದೀಪ್ ಮುಂದಾಗಿದ್ದಾರೆ. ಬೆಂಗಳೂರಿನ ಸುದೀಪ್ ನಿವಾಸದಲ್ಲಿ ಸಂಧಾನ ಮಾತುಕತೆ ನಡೀತು. ಇಬ್ಬರ ನಡುವೆ ಗಲಾಟೆಯಾಗ್ತಿದ್ದಂತೆ ಭುವನ್-ಪ್ರಥಮ್ರನ್ನು ಮನೆಗೆ ಸುದೀಪ್ ಕರೆಸಿಕೊಂಡಿದ್ದಾರೆ. ಇಬ್ಬರಿಗೂ ಸುದೀಪ್ ಬುದ್ಧಿಮಾತು ಹೇಳಿದ್ದಾರೆ. ಧಾರಾವಾಹಿ ಶೂಟಿಂಗ್ ಸೆಟ್ನಲ್ಲಿ ಪ್ರಥಮ್, ಭುವನ್ ತೊಡೆ ಕಚ್ಚಿದ್ದರು. ಬಳಿಕ ಭುವನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಅದಾದ ಮೇಲೆ ಪ್ರಥಮ್ ಕೂಡಾ ಭುವನ್ ವಿರುದ್ಧ ದೂರು ಕೊಟ್ಟಿದ್ದರು.
ಏನು ಆರೋಪ?
ಭುವನ್ ಪೊನ್ನಣ್ಣ ನೀಡಿರುವ ದೂರಿನ ಪ್ರಕಾರ, "ಸಂಜು ಮತ್ತು ನಾನು" ಧಾರಾವಾಹಿ ಶೂಟಿಂಗ್ ವೇಳೆ ಘಟನೆ ನಡೆದಿರುವುದು ತಿಳಿದುಬಂದಿದೆ. ಪ್ರಥಮ್'ನ ಕೈ ಮೇಲೆ ಸಂಜನಾ ಕೈಯಿಟ್ಟು ಪ್ರಾಮಿಸ್ ಮಾಡುವ ದೃಶ್ಯದ ಚಿತ್ರೀಕರಣವಿತ್ತು. ಇದಕ್ಕೆ ಸಂಜನಾ ಒಪ್ಪಿರಲಿಲ್ಲ. ಭುವನ್ ಅವರೇ ಸಂಜನಾರನ್ನು ಅಭಿನಯಿಸಲು ಒಪ್ಪಿಸಿದ್ದರು. ಅಂದಿನ ಶೂಟಿಂಗ್ ಮುಗಿದು ಪ್ಯಾಕಪ್ ಆದ ಮೇಲೆ ಸಂಜನಾಳನ್ನು ಪ್ರಥಮ್ ಕೆಣಕಿದ್ದಾರೆ. ಭುವನ್ ಮಾತು ಯಾಕೆ ಕೇಳ್ತೀಯಾ ಎಂದು ಸಂಜನಾಳ ಜೊತೆ ಪ್ರಥಮ್ ತಗಾದೆ ತೆಗೆದಿದ್ದಾರೆ. ಆಗ ಮಧ್ಯಪ್ರವೇಶಿಸಿದ ಭುವನ್'ರ ತೊಡೆಯನ್ನು ಕಚ್ಚಿ ಪ್ರಥಮ್ ಗಾಯಗೊಳಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.