Bharjari Bachelors Season 2: ತನುವನು ತಣಿಸು, ಮಜ ಕೊಡು... ಎಂದೆಲ್ಲಾ ಬುಲೆಟ್​ ರಕ್ಷಕ್​ಗೆ ಕಾಡಿಬೇಡಿದ ನಟಿ ರಮೊಲಾ!

Published : Jun 15, 2025, 06:45 PM IST
Rakshak and Ramola

ಸಾರಾಂಶ

ಭರ್ಜರಿ ಬ್ಯಾಚುಲರ್ಸ್​ ಷೋನಲ್ಲಿ ರಕ್ಷಕ್​ ಬುಲೆಟ್​ ಅವರಿಗೆ ಜೋಡಿಯಾಗಿರುವ ನಟಿ ರಮೋಲಾ ಏನೆಲ್ಲಾ ಕಾಡಿಬೇಡಿಕೊಂಡ್ರು ನೋಡಿ! ತನುವನು ತಣಿಸು, ಮಜ ಕೊಡು...ಎಂದೆಲ್ಲಾ ಬೇಡಿಕೊಂಡಾಗ ರಕ್ಷಕ್​ ಮಾಡಿದ್ದೇನು? 

ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್​ ಷೋ ಭರ್ಜರಿಯಾಗಿಯೇ ನಡೆಯುತ್ತಿದೆ. ಇದರಲ್ಲಿ ಇರುವ ಜೋಡಿಗಳೆಲ್ಲಾ ತುಂಬಾ ಚೆನ್ನಾಗಿ ಪರ್ಫಾಮೆನ್ಸ್​ ಮಾಡುತ್ತಿದ್ದು, ಅವರ ಪೈಕಿ ಒಂದು ಜೋಡಿ ರಮೋಲಾ ಮತ್ತು ಬುಲೆಟ್​ ರಕ್ಷಕ್​ ಅವರದ್ದು. ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಬಿಗ್​ಬಾಸ್​ ಬಳಿಕ ಸಕತ್ ಫೇಮಸ್​ ಆದವರು. ಬಿಗ್​ಬಾಸ್​ ಬಗ್ಗೆ ಹೇಳಿಕೆ ನೀಡಿ ಕಾಂಟ್ರವರ್ಸಿಗೆ ಒಳಗಾಗಿದ್ದರೂ ಇದೀಗ ಅವರಿಗೆ ಸಕತ್​ ಡಿಮಾಂಡ್​ ಕೂಡ ಇದೆ. ಇದೀಗ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭರ್ಜರಿ ಬ್ಯಾಚುಲರ್ಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಅವರಿಗೆ, ಸೀತಾರಾಮ ವಿಲನ್​ ಚಾಂದನಿ ಅರ್ಥಾತ್​ ನಟಿ ರಮೋಲಾ ಜೋಡಿಯಾಗಿದ್ದಾರೆ. ಇದೀಗ ಇಬ್ಬರೂ ಹೆಬ್ಬುಲಿ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದಾರೆ.

ಬಿಸಿ ಬಿಸಿ ಮುತ್ತಿಡು, ಆಗಲ್ಲ...ಬಿಗಿ ಬಿಗಿ ತಬ್ಬಿಕೊ ,ಆಗೋದಿಲ್ಲ.. ನಡುವನು ನುಡಿಸು ನೀ,ಬೇಕಿಲ್ಲ... ತನುವನು ತಣಿಸು ಬಾ,ಬೇಕಾಗಿಲ್ಲ ಎನ್ನುತ್ತಲೇ ಈ ಜೋಡಿ ರೊಮಾನ್ಸ್​ ಮಾಡಿದೆ. ಇದರ ವಿಡಿಯೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದ್ದು, ಈ ಜೋಡಿಗೆ ಚಪ್ಪಾಳೆ ಸುರಿಮಳೆಯಾಗಿದೆ. ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಬಿಗ್​ಬಾಸ್​ ಬಳಿಕ ಸಕತ್ ಫೇಮಸ್​ ಆದವರು. ಬಿಗ್​ಬಾಸ್​ ಬಗ್ಗೆ ಹೇಳಿಕೆ ನೀಡಿ ಕಾಂಟ್ರವರ್ಸಿಗೆ ಒಳಗಾಗಿದ್ದರೂ ಇದೀಗ ಅವರಿಗೆ ಸಕತ್​ ಡಿಮಾಂಡ್​ ಕೂಡ ಇದೆ. ಇದೀಗ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭರ್ಜರಿ ಬ್ಯಾಚುಲರ್ಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಅವರಿಗೆ, ಸೀತಾರಾಮ ವಿಲನ್​ ಚಾಂದನಿ ಅರ್ಥಾತ್​ ನಟಿ ರಮೋಲಾ ಜೋಡಿಯಾಗಿದ್ದಾರೆ.

ಇದೀಗ ಜೀವನದಲ್ಲಿ ಇದೇ ಮೊದಲ ಬಾರಿಗೆ ಲವ್​ ಸಾಂಗ್​ ಡಾನ್ಸ್​ ಮಾಡಿ, ರಮೋಲಾ ಅವರಿಗೆ ಸರ್​ಪ್ರೈಸ್​ ಗಿಫ್ಟ್​ ಕೊಟ್ಟಿದ್ದರು ರಕ್ಷಕ್​. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಲವ್​ ಸಾಂಗ್​ಗೆ ಡಾನ್ಸ್​ ಮಾಡಿರುವುದಾಗಿ ರಕ್ಷಕ್​ ಹೇಳಿದರೆ, ರಮೋಲಾ ಕೂಡ ಇಂಥದ್ದೊಂದು ಗಿಫ್ಟ್​ ನನಗೆ ಮೊದಲ ಬಾರಿಗೆ ಸಿಕ್ಕಿದ್ದು ಎಂದಿದ್ದರು. ಅಂದಹಾಗೆ ರಕ್ಷಕ್​ ಅವರು ಅಮೋಲಾ ಅವರಿಗೆ ಅವರ ಬಾಲ್ಯದ ಫೋಟೋಗಳನ್ನು ಗಿಫ್ಟ್​ ನೀಡಿದ್ದಾರೆ. ಇದೇ ವೇಳೆ ರಮೋಲಾ ಬೆಲ್ಲಿ ಡಾನ್ಸ್​ ಕೂಡ ಮಾಡಿ ರಂಜಿಸಿದ್ದರು. ಇನ್ನು ನಟಿ ರಮೋಲಾ ಕುರಿತು ಹೇಳುವುದಾದರೆ, ಇವರು ಕನ್ನಡತಿ ಸೀರಿಯಲ್​ನಿಂದ ಫೇಮಸ್​ ಆದವರು. ಇದರಲ್ಲಿ ವಿಲನ್ ಆಗಿ ನಟಿಸಿ, ಕೆಲವೇ ಸಮಯದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಆದರೆ ಕಿರುತೆರೆಯನ್ನು ತೊರೆದು ವರ್ಷ ಕಳೆದ ಬಳಿಕ ರೀ ಎಂಟ್ರಿ ಕೊಟ್ಟರು. ಮಾಡೆಲ್ ಆಗಿದ್ದ ರಮೋಲಾ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ರಮೋಲಾ ಅವರ ವಿಲನ್ ಪಾತ್ರವೂ ಕೊಂಚ ಡಿಫರೆಂಟ್ ಆಗಿಯೇ ಇತ್ತು. ಅಂದಹಾಗೆ ರಮೋಲಾ ಅವರು, ಬೆಲ್ಲಿ ಡ್ಯಾನ್ಸ್ ಎಕ್ಸ್​ಪರ್ಟ್​. ಅದನ್ನು ಈ ವಿಡಿಯೋ ನೋಡಿದರೆ ತಿಳಿಯಬಹುದು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಭಾಗವಹಿಸಿದ್ದರು.

2017 ರಿಲಯನ್ಸ್ ಜ್ಯುವೆಲ್ಸ್ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ರಮೋಲಾ, ಫ್ಯಾಷನ್ ಡಿಸೈನಿಂಗ್ ಓದುವ ಸಲುವಾಗಿ ಕನ್ನಡತಿಯಿಂದ ಹೊರ ಬಂದಿದ್ದರು ಎನ್ನಲಾಗಿದೆ. ಆದರೆ ಅವರು ಸಂದರ್ಶನದಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಎಂದು ಹೇಳಿಕೊಂಡಿದ್ದರು. ರವಿಚಂದ್ರನ್ ಮತ್ತು ರಚಿತಾ ರಾಮ್ ತೀರ್ಪುಗಾರರಾಗಿದ್ದಾರೆ. ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದಾರೆ. ಈ ಸೀಸನ್‌ನಲ್ಲಿ ವಿವಿಧ ರಿಯಾಲಿಟಿ ಷೋಗಳ ಹಾಗೂ ಕಿರುತೆರೆಯವರು ಸ್ಪರ್ಧಿಗಳಾಗಿದ್ದಾರೆ. ಸದ್ಯ ಸಿನಿಮಾ ಮಾಡುವ ಹಂಬಲದಲ್ಲಿ ಇರುವ ರಕ್ಷಕ್​ ಇಲ್ಲಿಗೆ ಬಂದಿದ್ದಾರೆ. ಈ ಹಿಂದಿನ ಎಪಿಸೋಡ್‌ನಲ್ಲಿ ಬ್ಯಾಚುಲರ್‌ಗಳು ಮತ್ತು ಪಾರ್ಟನರ್‌ಗಳನ್ನು ಆಯ್ಕೆ ಮಾಡಲಾಗಿತ್ತು. ಆಗ ರಮೋಲಾ ಮತ್ತು ರಕ್ಷಕ್ ಬುಲೆಟ್ ಜೋಡಿಯಾಗಿ ಆಯ್ಕೆ ಆಗಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?