
ಬೆಂಗಳೂರು (ಆ. 11): ಆಗಸ್ಟ್ 15 ರಂದು ಭಾರತಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅನಿರುದ್ಧ ಜತಕರ, ಭಾರತಿಯವರ ಕುರಿತು ಸಾಕ್ಷ್ಯಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಭಾರತಿ ಅವರು ಭಾರತೀಯ
ಚಿತ್ರರಂಗದಲ್ಲಿ ಐದು ದಶಕಗಳಿಂದ ಕಲಾಸೇವೆ ಮಾಡಿರುವುದರ ಹಿನ್ನೆಲೆಯಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಾಣ ಆಗುತ್ತಿದೆ.
ಅವರ ಕೌಟುಂಬಿಕ ಬದುಕು, ಅಧ್ಯಾತ್ಮಿಕ ನಿಲುವು, ಸಾಮಾಜಿಕ ಸ್ಪಂದನೆ, ಚಿತ್ರರಂಗದ ಅನುಭವ, ಬಾಲ್ಯದ ಬದುಕು- ಎಲ್ಲವನ್ನೂ ಈ ಸಾಕ್ಷ್ಯಚಿತ್ರ ಒಳಗೊಳ್ಳಲಿದೆ. ಭಾರತಿಯವರ ಜೊತೆ ಕೆಲಸ ಮಾಡಿದ ಕಲಾವಿದರು, ಅವರ
ಕುಟುಂಬಪರಿವಾರ- ಎಲ್ಲರನ್ನೂ ಮಾತಾಡಿಸಿ, ಸಮಗ್ರವಾದ ಸಾಕ್ಷ್ಯಚಿತ್ರವನ್ನು ಅನಿರುದ್ಧ್ ನಿರ್ದೇಶಿಸಲಿದ್ದಾರೆ.
ಅನಿರುದ್ಧ್ ಈಗಾಗಲೇ ಕೀರ್ತಿ ಇನ್ನೋವೇಷನ್ ಸಂಸ್ಥೆಗಾಗಿ ಐದು ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿದ್ದಾರೆ. ಇದು ಅವರ ನಿರ್ದೇಶನದ ಆರನೇ ಚಿತ್ರವಾಗಿ ಮೂಡಿಬರಲಿದೆ. ಈ ಮಧ್ಯೆ ಸ್ವಾತಂತ್ರ್ಯ ದಿನಕ್ಕೆ ಸಂಬಂಧಿಸಿದ ಒಂದು ಹಾಡಿನಲ್ಲಿ ಅನಿರುದ್ಧ್ ಕಾಣಿಸಿಕೊಳ್ಳುತ್ತಿದ್ದಾರೆ. 48 ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಮಾಡಿಕೊಡುವ ಹಾಡು ಅದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.