ಕಾರ್ ರೇಸ್ ಪ್ರಪಂಚಕ್ಕೆ ಕಾಲಿಟ್ಟ ನಟ ಸುದೀಪ್; ರೇಸ್ ಫೆಸ್ಟಿವಲ್ ಬೆಂಗಳೂರು ಟೀಂಗೆ ಕಿಚ್ಚ ಓನರ್!

Published : Jul 04, 2025, 05:31 PM ISTUpdated : Jul 04, 2025, 05:40 PM IST
Kichcha Sudeep

ಸಾರಾಂಶ

ಯೆಸ್, ಕಾರ್ ರೇಸ್ ಪ್ರಪಂಚಕ್ಕೆ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಇಂಡಿಯನ್ ರೇಸ್ ಫೆಸ್ಟಿವನ್ ಬೆಂಗಳೂರು ಟೀಂಗೆ ಕಿಚ್ಚ ಓನರ್ ಆಗಿದ್ದಾರೆ.. ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಬೆಂಗಳೂರು ಫ್ರಾಂಚೈಸ್ಗೆ ಕಿಚ್ಚ ಸುದೀಪ ಮಾಲೀಕರು ಅಗಿದ್ದಾರೆ..

ಹೌದು, ಇದೊಂದು ಭಾರೀ ಅಚ್ಚರಿ ಹಾಗೂ ಹಲವರಿಗೆ ಖುಷಿ ಕೊಡುವ ಸಂಗತಿ. ಬೆಂಗಳೂರು ಕಾರ್ ಸ್ಪೀಡ್ ಲವರ್ಸ್ ಗೆ ಗುಡ್ ನ್ಯೂಸ್.

ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025 ಅನೌನ್ಸ್ ಆಗಿದ್ದು, ಹಲವರು ಈ ಸುದ್ದಿಯಿಂದು ಖುಷಿ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಇನ್ನೂ ಒಂದು ಟ್ವಿಸ್ಟ್ ಇದೆ. ಈ ಬೆಂಗಳೂರು ಕಾರ್ ರೇಸ್ ಫೆಸ್ಟಿವಲ್-2025ಗೆ ಕಿಚ್ಚ ಸುದೀಪ್ (Kichcha Sudeep) ಮಾಲೀಕರು.

ಯೆಸ್, ಕಾರ್ ರೇಸ್ ಪ್ರಪಂಚಕ್ಕೆ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಇಂಡಿಯನ್ ರೇಸ್ ಫೆಸ್ಟಿವನ್ ಬೆಂಗಳೂರು ಟೀಂಗೆ ಕಿಚ್ಚ ಓನರ್ ಆಗಿದ್ದಾರೆ.. ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಬೆಂಗಳೂರು ಫ್ರಾಂಚೈಸ್ಗೆ ಕಿಚ್ಚ ಸುದೀಪ ಮಾಲೀಕರು ಅಗಿದ್ದಾರೆ..

ಈಗ 'ಕಿಚ್ಚಸ್ ಕಿಂಗ್ಸ್ ಬೆಂಗಳೂರು' ಟೀಂಗೆ ಸುದೀಪ್ ಓನರ್. ಮುಂದಿನ ತಿಂಗಳು, ಅಂದರೆ, ಆಗಸ್ಟ್ ತಿಂಗಳಿಂದ ಆರಂಭವಾಗಲಿರೋ ರೇಸ್ ಇದೀಗ ಭಾರೀ ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ, ನಿರೀಕ್ಷೆ ಕೂಡ ಮನೆ ಮಾಡಿದೆ. ಬೆಂಗಳೂರು, ದೆಹಲಿ, ಹೈದರಾಬಾದ್, ಕೊಲ್ಕತ್ತಾ, ಚೆನ್ನೈ, ಗೋವಾ ಫ್ರಾಂಚೈಸ್ಗಳು ಸದ್ಯಕ್ಕೆ ಈ ಅಖಾಡಕ್ಕೆ ಇಳಿದಿವೆ. ಬೆಂಗಳೂರು ಖಾಸಗಿ ಹೋಟೆಲ್ ನಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ಸುದ್ದಿ ಗೋಷ್ಠಿ ಮಾಡಿ ಈ ಸಂಗತಿಯನ್ನು ಘೋಷಿಸಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ನಟ ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್ ಭಾಗಿಯಾಗಿದ್ದಾರೆ. 'ಕ್ರಿಕೆಟ್ ಅಂದ್ರೆ ಜಾಸ್ತಿ ಮಾತಾಡ್ತಿದ್ದೆ. ಸ್ಪೋರ್ಟ್ಸ್ ಅಂದ್ರೆ ಹ್ಯಾಪಿ ಆಗಿ ಅಸೋಸಿಯೇಟ್ ಆಗ್ತೀನಿ. ಚಿತ್ರರಂಗದಲ್ಲಿ ಮಾಡೋ ಸ್ಪೋರ್ಟ್ಸ್ ನ ಇದಕ್ಕೆ ಕಂಪೇರ್ ಮಾಡಲ್ಲ ನಾನು. f1 ಅನ್ನೋದು ನಾಟ್ ಈಸಿ, ಸಾಕಷ್ಟು ಚರ್ಚೆ ಮಾಡಿದ್ದೀವಿ ನಾವು. ಓನರ್ ಆಗಿದ್ರು ಕಾರ್ ಒಳಗಡೆ ಕುರೋ ಅವಕಾಶ ಇಲ್ಲ ಅದಕ್ಕೆ ಲೈಸನ್ಸ್ ಬೇಕಿದೆ.

ಐ ಪಿ ಎಲ್ ನಲ್ಲಿ ನಡಿಯೋ ತರ ಇಲ್ಲೂ ಆಕ್ಷನ್ ನಡೆಯುತ್ತೇ. ಇದು ನಂಗೆ ಹಾಗೂ ನನ್ನ ಫ್ಯಾಮಿಲಿಗೆ ಹೊಸದು. ನಾವು kcc ಹಾಗೂ ಸಿಸಿಲ್ ಗೆ ಆಡಿದೀವಿ, ಬಟ್ ನಾನು ತಗೋಳೋ ಟೀಮ್ ಗೆ ಬೆಂಗಳೂರು ಹೆಸರು ಬರುತ್ತೆ ಅಂತ ಅನ್ಕೊಂಡಿರ್ಲಿಲ್ಲ. ವೆರಿ ಆನರ್ ಇದಕ್ಕೆ, ಪ್ರಿಯ ಈ ನಿರ್ಧಾರ ತಗೊಂಡಿರ್ಲಿಲ್ಲ ಅಂದ್ರೆ ಏನು ಆಗ್ತಿರ್ಲಿಲ್ಲ ಎಂದಿದ್ದಾರೆ ಕಿಚ್ಚ ಸುದೀಪ್. ಜೊತೆಗೆ, 'ನನ್ನ ಸೂಪರ್ ಕಾರ್ ಮಾರುತಿ 800' ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?